“BSPಯಿಂದ JDSಗೆ ಅಲ್ಲಿಂದ BJP, ನಾರಾಯಣ ಗೌಡರಿಗೆ ಉಳಿದಿರೋದು ಕಾಂಗ್ರೆಸ್ ಮಾತ್ರ”

Public TV
1 Min Read
Narayan Gowda KB Chandrashekhar

– ಕಾಂಗ್ರೆಸ್ ಕಡೆ ಬಂದಾಗ ಜಾಗ ಕೊಡದೇ ಓಡಿಸಿದ್ದೆ

ಮಂಡ್ಯ: ಶಾಸಕ ನಾರಾಯಣಗೌಡ ಅವರು ಜೆಡಿಎಸ್‍ನಲ್ಲಿ ಸ್ಥಾನ ಮಾನ ಸಿಗಲಿಲ್ಲ ಎಂದು ಬಿಜೆಪಿಗೆ ಹೋಗಿದ್ದಾರೆ. ಅಲ್ಲಿಯೂ ಸ್ಥಾನಮಾನ ಸಿಗಲಿಲ್ಲ ಎಂದರೆ ಅವರಿಗೆ ಉಳಿದಿರೋದು ಒಂದೇ ಒಂದು ಅದು ಕಾಂಗ್ರೆಸ್ ಎಂದು ಕೆಆರ್ ಪೇಟೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಎಂದಿದ್ದಾರೆ.

ಕೆಆರ್ ಪೇಟೆಯಲ್ಲಿ ಮಾತನಾಡಿದ ಕೆ.ಬಿ.ಚಂದ್ರಶೇಖರ್, ನಾರಾಯಣಗೌಡ ಮೊದಲು ಕಾಂಗ್ರೆಸ್ ಕಡೆ ಬಂದಿದ್ದರು, ಆಗ ನಾನು ಜಾಗ ಕೊಡದೇ ಓಡಿಸಿದ್ದೆ. ನಂತರ ಅವರು ಬಿಎಸ್‍ಪಿ ಪಕ್ಷಕ್ಕೆ ಹೋಗಿದ್ದರು, ಅಲ್ಲಿ ಪ್ರಯೋಜನವಿಲ್ಲ ಎಂದು ತಿಳಿದ ಮೇಲೆ ಜೆಡಿಎಸ್‍ಗೆ ಹೋದರು. ಜೆಡಿಎಸ್‍ನವರು ಏನು ಮಾಡಿದ್ರು ಎಂದು ಎಲ್ಲರಿಗೂ ತಿಳಿದಿದೆ. ಅದಕ್ಕಾಗಿ ಈಗ ನಾರಾಯಣಗೌಡ ಬಿಜೆಪಿಗೆ ಹೋಗಿದ್ದಾರೆ. ಬಿಜೆಪಿ ಅವರು ಸಹ ಸರಿಯಾದ ಸ್ಥಾನಮಾನ ನೀಡದೆ ಇದ್ದರೇ ಅವರಿಗೆ ಉಳಿದಿರೋದು ಒಂದೇ ಅದು ಕಾಂಗ್ರೆಸ್.

vlcsnap 2020 01 30 11h36m09s657

ನಾರಾಯಣಗೌಡ ಕಾಂಗ್ರೆಸ್‍ಗೆ ಬರಲಿ, ಆಗ ಆಟ ಇರೋದು. ಇಲ್ಲಿಗೆ ಬಂದ ಮೇಲೆ ನಮಗೂ ಆತನಿಗೂ ಆಟ ಶುರುವಾಗುತ್ತೆ. ಯಾವ ರೀತಿಯ ಆಟ ಅಂದರೆ ಅದನ್ನ ಪರೆದೆ ಮೇಲೆ ನೋಡಿ ಎಂದು ನಾರಾಯಣಗೌಡ ವಿರುದ್ಧ ವಾಗ್ದಾಳಿ ಮಾಡಿದರು.

ಸಿಎಂ ಯಡಿಯೂರಪ್ಪರ ಶಕ್ತಿಯನ್ನು ಕುಂದಿಸಬೇಕೆಂದು ಬಿಜೆಪಿ ಕೇಂದ್ರ ಮತ್ತು ರಾಜ್ಯದ ಕೆಲ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ. ಈ ಸಂಬಂಧ ಎಲ್ಲ ಪ್ರಯತ್ನಗಳನ್ನು ಕೇಂದ್ರದ ನಾಯಕರು ಮಾಡುತ್ತಿದ್ದಾರೆ. ಹಾಗಾಗಿ ಯಡಿಯೂರಪ್ಪನವರು ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ ಅವರ ಹೆಸರು ನಿರ್ನಾಮ ಮಾಡಲಾಗುತ್ತದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *