ವಿಜಯಪುರ: ಪ್ರಸಕ್ತ ವರ್ಷದಲ್ಲಿ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ ಸ್ವಚ್ಛತೆ, ಶುಚಿತ್ವ ಮತ್ತು ನೈರ್ಮಲ್ಯಕ್ಕಾಗಿ ನೀಡುವ ಕಾಯಕಲ್ಪ ಪ್ರಶಸ್ತಿಯು ವಿಜಯಪುರ (Vijayapura) ಜಿಲ್ಲೆಯ 40 ಸರ್ಕಾರಿ ಆಸ್ಪತ್ರೆಗಳಿಗೆ (Government Hospitals) ಲಭಿಸಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.
ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಉತ್ತಮ ವಾತಾವರಣ ನಿರ್ಮಿಸಿಕೊಡುವ ಆಸ್ಪತ್ರೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರ 2015 ರಿಂದ ಕಾಯಕಲ್ಪ ಪ್ರಶಸ್ತಿ (Kayakalp Award) ನೀಡಲು ಪ್ರಾರಂಭಿಸಿದೆ. 2019-20ನೇ ಸಾಲಿನಲ್ಲಿ ಜಿಲ್ಲೆಯ 15 ಆಸ್ಪತ್ರೆಗಳಿಗೆ, 2020-21ನೇ ಸಾಲಿನಲ್ಲಿ 20 ಆರೋಗ್ಯ ಸಂಸ್ಥೆಗಳಿಗೆ ಪ್ರಶಸ್ತಿ ದೊರಕಿದ್ದು, ಪ್ರಸಕ್ತ 2023ನೇ ಸಾಲಿನಲ್ಲಿ ಜಿಲ್ಲೆಯ 40 ಆರೋಗ್ಯ ಸಂಸ್ಥೆಗಳಿಗೆ ಕಾಯಕಲ್ಪ ಪ್ರಶಸ್ತಿ ದೊರೆತಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮೋದಿಯಂತಹ ನಾಯಕ ದೇಶಕ್ಕೆ ಅನಿವಾರ್ಯ.. ಮತ್ತೊಮ್ಮೆ ಮೋದಿ ನಾಯಕತ್ವ ಬೇಕು ಅನ್ನೋದು ತಪ್ಪಲ್ಲ: ಮಂತ್ರಾಲಯ ಶ್ರೀ
Advertisement
Advertisement
ಸಮುದಾಯ ಆರೋಗ್ಯ ಕೇಂದ್ರ ಮತ್ತು ತಾಲೂಕು ಆಸ್ಪತ್ರೆಗಳ ವಿಭಾಗದಲ್ಲಿ ತಾಲೂಕಿನ ಬ.ಬಾಗೇವಾಡಿ ಆಸ್ಪತ್ರೆ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದರೆ, ಪ್ರಾಥಮಿಕ ಆರೋಗ್ಯ ಕೇಂದ್ರ ವಿಭಾಗದಲ್ಲಿ ತಿಕೋಟಾ ಅತ್ಯುತ್ತಮ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಶಸ್ತಿಗೆ ಭಾಜನವಾಗಿದೆ. ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವಿಭಾಗದಲ್ಲಿ ಬಾಗಲಕೋಟೆ ಮತ್ತು ವಿಜಯಪುರ ಕ್ಲಸ್ಟರ್ ಮಟ್ಟದಲ್ಲಿ ದರ್ಗಾ ಅತ್ಯುತ್ತಮ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಶಸ್ತಿ, ಆರೋಗ್ಯ ಮತ್ತು ಕ್ಷೇಮ ಕೇಂದ್ರ ವಿಭಾಗದಲ್ಲಿ SC-HWC ಕಗ್ಗೋಡ ಜಿಲ್ಲೆಗೆ ಪ್ರಥಮ ಸ್ಥಾನ, ಯಂಬತ್ನಾಳ ದ್ವಿತೀಯ ಸ್ಥಾನ (ರನ್ನರ್‌ಅಪ್) ಕಾಯಕಲ್ಪ ಪ್ರಶಸ್ತಿ ಪಡೆದಿದೆ. ಇದನ್ನೂ ಓದಿ: World Cup 2023: ಸಿಕ್ಸರ್, ಬೌಂಡರಿಗಳ ಸುರಿಮಳೆ – ಭಾರತದ ನೆಲದಲ್ಲಿ ಇತಿಹಾಸ ಸೃಷ್ಟಿಸಿದ ಆಸೀಸ್
Advertisement
Advertisement
ಜಿಲ್ಲಾ ಆಸ್ಪತ್ರೆ ವಿಭಾಗದಲ್ಲಿ ವಿಜಯಪುರ ಆಸ್ಪತ್ರೆ ಸಮಾಧಾನಕರ ಪ್ರಶಸ್ತಿ ಪಡೆದಿದೆ. ತಾಲೂಕು ಆಸ್ಪತ್ರೆ/ಸಮುದಾಯ ಆರೋಗ್ಯ ಕೇಂದ್ರ ವಿಭಾಗದಲ್ಲಿ ಬ.ಬಾಗೇವಾಡಿ ಆಸ್ಪತ್ರೆಯು ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದರೆ, ಸಮುದಾಯ ಆರೋಗ್ಯ ಕೇಂದ್ರಗಳಾದ ಚಡಚಣ, ಕಾಳಗಿ, ತಡವಲಗಾ, ನಾಲತವಾಡ ಮತ್ತು ನಿಡಗುಂದಿ ಸಮಾಧಾನಕರ ಬಹುಮಾನಕ್ಕೆ ತೃಪ್ತಿಪಟ್ಟುಕೊಂಡಿವೆ. ಇನ್ನೂ ಪ್ರಾಥಮಿಕ ಆರೋಗ್ಯ ಕೇಂದ್ರ ವಿಭಾಗದಲ್ಲಿ ತಿಕೋಟಾ ಪ್ರಥಮ ಸ್ಥಾನ ಪಡೆದರೆ, ಹೂ.ಹಿಪ್ಪರಗಿ, ಮುಳವಾಡ, ರೋಣಿಹಾಳ, ತೆಲಗಿ, ಗೊಳಸಂಗಿ, ಹೊರ್ತಿ, ಇಂಚಗೇರಿ, ಲಚ್ಯಾಣ, ಚಿಕ್ಕಬೇವನೂರು, ಹೊನವಾಡ, ಹೊನ್ನೂಟಗಿ, ನಾಗಠಾಣ, ಶಿವಣಗಿ ಮತ್ತು ಇನಚಗಲ್ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಮಾಧಾನಕರ ಕಾಯಕಲ್ಪ ಪ್ರಶಸ್ತಿಯನ್ನು ಪಡೆದಿರುತ್ತವೆ ಎಂದು ಹೇಳಿದ್ದಾರೆ.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವಿಭಾಗದಲ್ಲಿ ಬಾಗಲಕೋಟೆ, ವಿಜಯಪುರ ಕ್ಲಸ್ಟರ್ ಮಟ್ಟದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ ದರ್ಗಾ ಅತ್ಯುತ್ತಮ ನ.ಪ್ರಾ.ಆ.ಕೇಂದ್ರ ಮತ್ತು ಶಾಂತಿನಗರ ಸಮಾಧಾನಕರ ಪ್ರಶಸ್ತಿ ಪಡೆದಿದೆ. ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ವಿಭಾಗದಲ್ಲಿ SC-HWC ಕಗ್ಗೋಡ ಜಿಲ್ಲೆಗೆ ಪ್ರಥಮ ಸ್ಥಾನ, ಯಂಬತ್ನಾಳ, ಇಂಗಳಗೇರಿ ಮತ್ತು ಹಿತ್ನಳ್ಳಿ ಎಲ್.ಟಿ ಕೇಂದ್ರಗಳು ರನ್ನರ್‍ಅಪ್ ಪ್ರಶಸ್ತಿ ಪಡೆದಿವೆ. ಡೋಣೂರ, ಹೆಬ್ಬಾಳ, ಯಾರನಾಳ, ಶಿರನಾಳ, ಜುಮನಾಳ, ಮಖನಾಪುರ, ಐನಾಪುರ, ಯಲಗುರ್, ರೂಡಗಿ, ಹುಳ್ಳುರ್, ಬಳಬಟ್ಟಿ ಮತ್ತು ಗಂಗನಳ್ಳಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಸಮಾಧಾನಕರ ಪ್ರಶಸ್ತಿಯನ್ನು ಪಡೆದಿವೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: 23ನೇ ವಯಸ್ಸಿಗೆ ಸಚಿನ್ ದಾಖಲೆ ಸರಿಗಟ್ಟಿದ ಬೆಂಗಳೂರು ಯುವಕ ರಚಿನ್
Web Stories