ಕನ್ನಡದ ನಟಿ ಕಾವ್ಯಾ ಶೆಟ್ಟಿ (Kavya Shetty) ಅವರು ಇದೀಗ ಬಹುಭಾಷಾ ನಟಿಯಾಗಿ ಮಿಂಚ್ತಿದ್ದಾರೆ. ಈ ನಡುವೆ ತೆಲುಗಿನ ಸ್ಟಾರ್ ನಟ ನಾಗಾರ್ಜುನ್ (Nagarjuna) ಜೊತೆ ಕಾವ್ಯ ತೆರೆಹಂಚಿಕೊಂಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
‘ನಮ್ ದುನಿಯಾ ನಮ್ ಸ್ಟೈಲ್’ ಸಿನಿಮಾ ಮೂಲಕ ಚಂದನವನಕ್ಕೆ ಪರಿಚಿತರಾದ ನಟಿ ಕಾವ್ಯ ಅವರು ಇಷ್ಟಕಾಮ್ಯ, ಸಂಹಾರ, ಯುವರತ್ನ, ಲಂಕೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿ ಅಭಿನಯಿಸಿದ್ದಾರೆ. ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ:ಭಾವಿ ಪತ್ನಿ ಜೊತೆಗಿನ ಅಭಿಷೇಕ್ ಅಂಬರೀಶ್ ವೀಡಿಯೋ ವೈರಲ್
ತೆಲುಗಿನ ನಟ ನಾಗಾರ್ಜುನ್ ಅವರ ಜೊತೆ ತೆರೆಹಂಚಿಕೊಳ್ಳುವ ಮೂಲಕ ಕಾವ್ಯ ಶೆಟ್ಟಿ ಸುದ್ದಿಯಲ್ಲಿದ್ದಾರೆ. ಜಾಹಿರಾತುವೊಂದರಲ್ಲಿ ನಟಿ ಕಾವ್ಯ, ನಾಗಾರ್ಜುನ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಸದ್ಯ ಈ ಫೋಟೋ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
View this post on Instagram
ಕರಾವಳಿ ಕುವರಿ ಕಾವ್ಯ ಶೆಟ್ಟಿ ಅವರು ಕನ್ನಡ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಭಿನ್ನ ಪಾತ್ರಗಳನ್ನ ಆಯ್ಕೆ ಮಾಡಿಕೊಳ್ಳುವ ಮೂಲಕ ನಟಿ ಸದ್ದು ಮಾಡ್ತಿದ್ದಾರೆ.