ಕೊಪ್ಪಳ: ಇಲ್ಲಿನ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದ ನವಬೃಂದಾವನ ಗಡ್ಡೆಯಲ್ಲಿ ಮಂತ್ರಾಲಯದ ರಾಯರ ಮಠದ ವತಿಯಿಂದ ಕವೀಂದ್ರ ತೀರ್ಥರ ಪೂರ್ವಾರಾಧನೆ ಮಹೋತ್ಸವವನ್ನು (Kavindra Tirtha Preliminary Worship) ಆಚರಣೆ ಮಾಡಲಾಯಿತು.
ಮಂತ್ರಾಲಯ ರಾಯರ ಮಠದ ಪೀಠಾಧಿಪತಿಗಳಾದ ಸುಬುದೇಂದ್ರ ಶ್ರೀಗಳ ನೇತೃತ್ವದಲ್ಲಿ ಕವೀಂದ್ರ ತೀರ್ಥರ ಪೂರ್ವಾರಾಧನೆಯನ್ನು ಹಮ್ಮಿಕೊಳ್ಳಲಾಗಿದೆ.
ಕವೀಂದ್ರ ತೀರ್ಥರ ಪೂರ್ವಾರಾಧನೆಯ ಅಂಗವಾಗಿ ರಾಯರ ಮಠದ ಶ್ರೀಗಳು ನವಬೃಂದಾವನ ಗಡ್ಡೆಯಲ್ಲಿ ಮೂಲರಾಮ ದೇವರ ಪೂಜೆ, ಸಂಸ್ಥಾನ ಪೂಜೆಯನ್ನು ನಡೆಸಲಾಯಿತು. ನಂತರ ಕವೀಂದ್ರ ತೀರ್ಥರ ಮೂಲ ಬೃಂದಾವನಕ್ಕೆ ನೈರ್ಮಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ರೇಷ್ಮೆ ವಸ್ತುಗಳ ಅಲಂಕಾರ, ವಿಶೇಷ ಹೂವಿನ ಅಲಂಕಾರ ಸೇರಿದಂತೆ ನಾನಾ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು.
ನಂತರ ಮಠದ ಪಂಡಿತರದಿಂದ ಪ್ರವಚನ ಕಾರ್ಯಕ್ರಮ ನಡೆಸಲಾಯಿತು. ಶ್ರೀಗಳಾದ ಸುಬುದೇಂದ್ರ ಶ್ರೀಗಳ ನೇತೃತ್ವದಲ್ಲಿ ಭಕ್ತರಿಗೆ ತಪ್ತ ಮುದ್ರಾಧಾರಣೆ, ಅನುಗ್ರಹ ಸಂದೇಶ, ಫಲ ಮಂತ್ರಾಕ್ಷಣೆ ವಿತರಣೆ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮ ಗಳನ್ನು ನಡೆಸಿದರು. ಪೂರ್ವಾರಾಧನೆ ಮಹೋತ್ಸವಕ್ಕೆ ಸ್ಥಳೀಯ ಭಕ್ತರು ಸೇರಿದಂತೆ ನಾನಾ ಭಾಗಗಳಿಂದ ಭಕ್ತರು ಆಗಮಿಸಿದರು.