– ʻಫಿರ್ ಏಕ್ ಬಾರ್ ಎನ್‌ಡಿಎ ಸರ್ಕಾರ್ʼ ಎಂದಿದೆ ಬಿಹಾರ
– ವಿಕ್ಟರಿ ಭಾಷಣದಲ್ಲಿ ʻಛಠಿ ಮೈಯಾʼ ಷಷ್ಠಿ ದೇವತೆ ನೆನೆದ ಪ್ರಧಾನಿ
– ಚುನಾವಣಾ ಆಯೋಗದ ಪರ ಮೋದಿ ಬ್ಯಾಟಿಂಗ್
ನವದೆಹಲಿ/ಪಾಟ್ನಾ: ಬಿಹಾರದಲ್ಲಿ ಎನ್‌ಡಿಎ ಪ್ರಚಂಡ ವಿಜಯ ಸಾಧಿಸಿದೆ. ಬಿಹಾರದಲ್ಲಿ ಕಟ್ಟಾ ಸರ್ಕಾರ್ (ಬಂದೂಕು ಹಿಡಿದ ಸರ್ಕಾರ) ಇನ್ನೆಂದಿಗೂ ಬರೋದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವಿಜಯೋತ್ಸವ ಭಾಷಣದಲ್ಲಿ ಆರ್‌ಜೆಡಿ ವಿರುದ್ಧ ವಾಗ್ದಾಳಿ ನಡೆಸಿದರು.
#WATCH | Delhi: Prime Minister Narendra Modi says, “I also express my gratitude to the people of Nagrota in Jammu and Kashmir and Nuapada in Odisha. They have ensured the BJP’s victory in the by-elections. Today is not just a victory for the NDA, it is also a victory for… pic.twitter.com/yuDLrS2Yz4
— ANI (@ANI) November 14, 2025
ದೆಹಲಿಯಲ್ಲಿರುವ (Delhi) ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಂಜೆ ನಡೆದ ಕಾರ್ಯಕ್ರಮದಲ್ಲಿ ಷಷ್ಠಿ ದೇವತೆ ಛಠಿ ಮೈಯಾ ನೆನೆಯುತ್ತಾ ಮಾತನಾಡಿದರು. ನಾನು ಚುನಾವಣೆ ವೇಳೆ ʻಜಂಗಲ್ ರಾಜ್ʼ ಮತ್ತು ʻಕಟ್ಟಾ ಸರ್ಕಾರ್ʼ ಬಗ್ಗೆ ಮಾತನಾಡಿದಾಗೆಲ್ಲ ಆರ್‌ಜೆಡಿಯಿಂದ ಯಾವುದೇ ವಿರೋಧ ಕೇಳಿಬರುತ್ತಿರಲಿಲ್ಲ. ಆದ್ರೆ ಕಾಂಗ್ರೆಸ್‌ಗೆ (Congress) ಮಾತ್ರ ನೋವುಂಟಾಗಿತ್ತು. ನಾನು ಮತ್ತೆ ಹೇಳುವೆ ಬಿಹಾರದಲ್ಲಿ ʻಕಟ್ಟಾ ಸರ್ಕಾರ್ʼ ಇನ್ನೆಂದಿಗೂ ಬರಲ್ಲ ಎಂದು ನುಡಿದರು.
#BiharElections | Delhi: Prime Minister Narendra Modi says, “…When I used to speak about Jungle Raj and Katta Sarkar in Bihar elections, the RJD party raised no objections. But it hurt the people of Congress. Today, I want to reiterate that Katta Sarkar will never return to… pic.twitter.com/gN36ASbcmA
— ANI (@ANI) November 14, 2025
ʻಫಿರ್ ಏಕ್ ಬಾರ್ ಎನ್‌ಡಿಎ ಸರ್ಕಾರ್ʼ
ನಾವು ಜನರ ಸೇವಕರು, ನಮ್ಮ ಕಠಿಣ ಪರಿಶ್ರಮದಿಂದ ಜನರನ್ನ ಸಂತೋಷಪಡಿಸುತ್ತಲೇ ಇರುತ್ತೇವೆ. ಲಕ್ಷಾಂತರ ಜನರ ಹೃದಯ ಕದ್ದಿದ್ದೇವೆ. ಅದಕ್ಕಾಗಿಯೇ ಇಡಿ ಬಿಹಾರ ʻಫಿರ್ ಏಕ್ ಬಾರ್ ಎನ್‌ಡಿಎ ಸರ್ಕಾರ್ʼ (ಮತ್ತೊಮ್ಮೆ ಎನ್‌ಡಿಎ ಸರ್ಕಾರ) ಅಂತ ಹೇಳಿದೆ. ಎನ್‌ಡಿಎಗೆ ಪ್ರಚಂಡ ಗೆಲುವು ನೀಡಬೇಕು ಅಂತ ಬಿಹಾರದ ಜನರನ್ನ ಕೇಳಿಕೊಂಡಿದ್ದೆ, ನನ್ನ ಒಂದು ಕೂಗಿಗೆ ಅವರು ಕಿವಿಗೊಟ್ಟಿದ್ದಾರೆ. 2010 ರಿಂದ ಈಚೆಗೆ ಮೈತ್ರಿಕೂಟಕ್ಕೆ ಅತಿದೊಡ್ಡ ಅಂತರದ ಗೆಲುವು ನೀಡಿದ್ದಾರೆ. ಅದಕ್ಕಾಗಿ ಇಡೀ ಎನ್‌ಡಿಎ ಕುಟುಂಬದ ಪರವಾಗಿ, ನಾನು ಬಿಹಾರದ ಎಲ್ಲಾ ಜನರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಭಾವುಕರಾದರು.
#BiharElections | Delhi: Prime Minister Narendra Modi says, “…This election has further strengthened the public’s trust in the Election Commission of India. The consistently high voter turnout over the past few years, the increased turnout by the deprived and the exploited, is… pic.twitter.com/pWVk5ZMwRu
— ANI (@ANI) November 14, 2025
ಚುನಾವಣಾ ಆಯೋಗದ ಪರ ಮೋದಿ ಬ್ಯಾಟಿಂಗ್
ಈ ಚುನಾವಣೆಯು ಭಾರತೀಯ ಚುನಾವಣಾ ಆಯೋಗದ ಮೇಲಿನ ಸಾರ್ವಜನಿಕರ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ. ಏಕೆಂದ್ರೆ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಮತದಾನದ ಪ್ರಮಾಣ ಹೆಚ್ಚಾಗಿದೆ. ಅವಕಾಶ ವಂಚಿತರು, ಶೋಷಿತರಿಂದಲೂ ಮತದಾನ ಪ್ರಮಾಣ ಹೆಚ್ಚಾಗಿರುವುದು ಚುನಾವಣಾ ಆಯೋಗದ ಗಮನಾರ್ಹ ಸಾಧನೆಯಾಗಿದೆ ಎಂದು ಹೊಗಳಿದರು.
#BiharElections | Delhi: Prime Minister Narendra Modi says, “…We are the servants of the people. We keep making the people happy with our hard work and we have stolen the hearts of the people. And that is why the entire Bihar has said ‘Phir ek baar NDA Sarkar’…” pic.twitter.com/6q2L8zy2z7
— ANI (@ANI) November 14, 2025
ನಕ್ಸಲ್ ಪೀಡಿತ ಪ್ರದೇಶದಲ್ಲೂ ಶಾಂತಿಯುತ ಮತದಾನ
ಒಂದು ಕಾಲದಲ್ಲಿ ಮಾವೋವಾದಿ ಭಯೋತ್ಪಾದನೆಯಿಂದ ಪ್ರಾಬಲ್ಯ ಹೊಂದಿದ್ದ ಅದೇ ಬಿಹಾರ ಇದು. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮಧ್ಯಾಹ್ನ 3 ಗಂಟೆಗೆಲ್ಲ ಮತದಾನ ಕೊನೆಗೊಳ್ಳುತ್ತಿತ್ತು. ಆದರೆ ಈ ಚುನಾವಣೆಯಲ್ಲಿ, ಬಿಹಾರದ ಜನರು ಭಯವಿಲ್ಲದೇ ಉತ್ಸಾಹದಿಂದ ಮತ ಚಲಾಯಿಸಿದ್ದಾರೆ. ʻಜಂಗಲ್ ರಾಜ್ʼ ಆಳ್ವಿಕೆ ಸಮಯದಲ್ಲಿ ಮತದಾನ ಕೇಂದ್ರಗಳಲ್ಲಿ ಹಿಂಸಾಚಾರ ಬಹಿರಂಗವಾಗಿ ನಡೆಯುತ್ತಿತ್ತು. ಮತಪೆಟ್ಟಿಗೆಗಳನ್ನ ಲೂಟಿ ಮಾಡಲಾಗುತ್ತಿತ್ತು. ಆದರಿಂದು ಅದೇ ಶಾಂತಿಯುತ ಮತದಾನ ಮಾಡುತ್ತಿದೆ, ದಾಖಲೆ ಪ್ರಮಾಣದ ಮತದಾನ ನೋಡುತ್ತಿದೆ. ಪ್ರತಿಯೊಬ್ಬರೂ ತಮ್ಮ ಆಯ್ಕೆಯ ಪ್ರಕಾರವೇ ಮತ ಚಲಾಯಿಸಿದ್ದಾರೆ ಎಂದು ಮೋದಿ ಶ್ಲಾಘಿಸಿದರು.
ವಿಜಯೋತ್ಸವ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜನಾಥ್ ಸಿಂಗ್, ಜೆಪಿ ನಡ್ಡಾ ಉಪಸ್ಥಿತರಿದ್ದರು.

