ಸೋಷಿಯಲ್ ಮೀಡಿಯಾ ಮೂಲಕ ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ಪತಿ, ನಟ ವಿಕ್ಕಿ ಕೌಶಲ್ ದಂಪತಿಗೆ ಕೊಲೆ ಬೆದರಿಕೆ ಹಾಕಲಾಗಿತ್ತು. ಮದುವೆಯಾಗಿ ಸುಖಿ ಸಂಸಾರದಲ್ಲಿ ದಂಪತಿಗೆ ಈ ಬೆದರಿಕೆ ಕರೆ ಆತಂಕ ಮೂಡಿಸಿತ್ತು. ಹಾಗಾಗಿಯೇ ನಿನ್ನೆ ಅವರು ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸ್ಟಾರ್ ದಂಪತಿ ದೂರು ಕೊಡುತ್ತಿದ್ದಂತೆಯೇ ಕಾರ್ಯಚರಣೆಗೆ ಇಳಿದಿದ್ದ ಮುಂಬೈ ಪೊಲೀಸ್ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
Advertisement
ತಮಗೆ ಬೆದರಿಕೆ ಹಾಕಿದ್ದು ಯಾರು, ಎಲ್ಲಿಂದ ಆ ಸಂದೇಶ ಬಂದಿದ್ದು ಸೇರಿದಂತೆ ಹಲವು ವಿಷಯಗಳನ್ನು ದೂರಿನಲ್ಲಿ ಉಲ್ಲೇಖಿಸಿದ್ದರಂತೆ ಕತ್ರಿನಾ ಕೈಫ್. ಅಲ್ಲದೇ, ಅಗತ್ಯ ಸಹಕಾರವನ್ನೂ ಅವರು ನೀಡಿದ್ದರಂತೆ. ಹಾಗಾಗಿ ದೂರುಕೊಟ್ಟ ಕೆಲವೇ ಗಂಟೆಗಳಲ್ಲಿ ಮಿಂಚಿನ ಕಾರ್ಯಚರಣೆ ಮಾಡಿದ್ದ ಪೊಲೀಸರು ಒಬ್ಬ ವ್ಯಕ್ತಿಯನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ:ಬನ್ಸಾಲಿ ನಿರ್ದೇಶನದಲ್ಲಿ ಬಹುಭಾಷಾ ನಟಿ ಅದಿತಿ ರಾವ್
Advertisement
Advertisement
ಗಾಯಕ ಸಿಧು ಮೂಸೆವಾಲಾ ಸಾವಿನ ನಂತರ ಬಾಲಿವುಡ್ ನ ಅನೇಕ ಕಲಾವಿದರಿಗೆ ಬೆದರಿಕೆ ಕರೆಗಳು ಬರುತ್ತಿವೆ. ನಾನಾ ಕಾರಣಗಳಿಂದಾಗಿ ಅನೇಕರು ಈ ರೀತಿಯ ಕೊಲೆ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೇ, ರಕ್ಷಣೆಗಾಗಿ ಪೊಲೀಸರ ಮೊರೆ ಕೂಡ ಹೋಗಿದ್ದಾರೆ. ಸಲ್ಮಾನ್ ಖಾನ್, ವಿವೇಕ ಅಗ್ನಿಹೋತ್ರಿ, ಕಂಗನಾ ರಣಾವತ್ ಸೇರಿದಂತೆ ಹಲವು ಕಲಾವಿದರಿಗೆ ಈಗಾಗಲೇ ಜೀವ ಬೆದರಿಕೆ ಹಾಕಲಾಗಿದೆ. ಅವರು ಕೂಡ ದೂರು ದಾಖಲಿಸಿದ್ದಾರೆ.