ಶ್ರೀನಗರ: ಸೌದಿ ಅರೇಬಿಯಾದ ಮೆಕ್ಕಾದ ಹಜ್ ಯಾತ್ರೆಯಿಂದ ಹಿಂದಿರುಗಿರುವ ಯಾತ್ರಾರ್ಥಿಗಳನ್ನು ಸ್ಥಳೀಯ ಕಾಶ್ಮೀರಿ ಹಿಂದೂಗಳು ಹಾಡನ್ನು ಹಾಡಿ ಆರತಿ ಮಾಡುವ ಮೂಲಕ ಶ್ರೀನಗರದಲ್ಲಿ ಅದ್ಧೂರಿಯಾಗಿ ಬರಮಾಡಿಕೊಂಡರು.
ಶ್ರೀನಗರ ವಿಮಾನ ನಿಲ್ದಾಣದಲ್ಲಿ ಹಜ್ ಯಾತ್ರೆ ಮುಗಿಸಿ ಬಂದ ಇಸ್ಲಾಮಿಕ್ ಯಾತ್ರಾರ್ಥಿಗಳನ್ನು ಕಾಶ್ಮೀರಿ ಪಂಡಿತರು ಅದ್ಧೂರಿಯಾಗಿ ಬರಮಾಡಿಕೊಂಡಿದ್ದು, ಗುಲಾಬಿ ಹೂವುಗಳನ್ನು ನೀಡಿ ಹಸ್ತಾಲಾಘವ ಮಾಡಿದರು. ಈ ಮೂಲಕ ಧಾರ್ಮಿಕ ಸಾಮರಸ್ಯವನ್ನು ಮೆರೆದಿದ್ದಾರೆ. ಅಷ್ಟೇ ಅಲ್ಲದೇ ಪ್ರವಾದಿಯ ಹಾಡನ್ನು ಹಾಕಿ ಆರತಿ ಎತ್ತಿ ಯಾತ್ರಾರ್ಥಿಗಳನ್ನು ಸ್ವಾಗತಿಸಿದರು. ಇದನ್ನೂ ಓದಿ: ಭಾರತದ ಗಡಿಯಲ್ಲಿ ಪಾಕ್‌ನ ಡ್ರೋನ್ ಹಾರಾಟ
Advertisement
हज करके लौटे हाजी लोग श्रीनगर एयरपोर्ट से निकले तो कश्मीरी पंडित भाईयों ने नात पढ़ते हुए आरती उतार कर उनका स्वागत किया और मुबारकबाद दी।
इस मुहब्बत को राजनीति की नज़र ना लगे। pic.twitter.com/Oo338QsrlV
— Abbas Bin Mukhtar Ansari (@AbbasAnsari_) July 16, 2022
ಈ ವೀಡಿಯೋವನ್ನು ಉತ್ತರಪ್ರದೇಶದ ಶಾಸಕ ಅಬ್ಬಾಸ್ ಬಿನ್ ಮುಖ್ತಾರ್ ಅನ್ಸಾರಿ ಟ್ವೀಟ್‍ನಲ್ಲಿ ಹಂಚಿಕೊಂಡಿದ್ದಾರೆ. ಶ್ರೀನಗರ ವಿಮಾನ ನಿಲ್ದಾಣದಿಂದ ಸಣ್ಣ ವೀಡಿಯೊ ಕ್ಲಿಪ್ ಅನ್ನು ಹಂಚಿಕೊಂಡ ಉತ್ತರ ಪ್ರದೇಶದ ಶಾಸಕ ಅಬ್ಬಾಸ್ ಬಿನ್ ಮುಖ್ತಾರ್ ಅನ್ಸಾರಿ, ಕಾಶ್ಮೀರಿ ಪಂಡಿತರು ವಿಮಾನ ನಿಲ್ದಾಣದ ಹೊರಗೆ ಸಾಲಿನಲ್ಲಿ ನಿಂತಿದ್ದರು. ಪ್ರವಾದಿ ಮೊಹಮ್ಮದ್ ಅವರನ್ನು ಶ್ಲಾಘಿಸುವ ನಾತ್ ಕವನವನ್ನು ಹಾಡಿ, ಯಾತ್ರೆಗೆ ಅಭಿನಂದನೆ ಸಲ್ಲಿಸಿದರು ಎಂದು ಶಾಸಕ ತಿಳಿಸಿದ್ದಾರೆ. ಇದನ್ನೂ ಓದಿ: ಹಿಂದಿ ಪ್ರೇಮದ ಉತ್ತುಂಗದಲ್ಲಿ ಕನ್ನಡದ ಕೊಲೆ ನಿಲ್ಲಿಸಿ – ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ