Bengaluru CityKarnatakaLatestMain Post

ಹಿಂದಿ ಪ್ರೇಮದ ಉತ್ತುಂಗದಲ್ಲಿ ಕನ್ನಡದ ಕೊಲೆ ನಿಲ್ಲಿಸಿ – ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ

Advertisements

ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ, ವೀಡಿಯೋ ಮಾಡಬಾರದೆಂದು ಸರ್ಕಾರ ಹೊರಡಿಸಿದ್ದ  ಆದೇಶದಲ್ಲಿ ವ್ಯಾಕರಣ ದೋಷ ಹೆಚ್ಚಿದ್ದರಿಂದ ಟೀಕೆ ಕೇಳಿ ಬಂದಿದೆ. ಹಿಂದಿ ಪ್ರೇಮದ ಉತ್ತುಂಗದಲ್ಲಿ ಕನ್ನಡದ ಕೊಲೆ ನಿಲ್ಲಿಸಬೇಕೆಂಬುದು ನಮ್ಮ ಸಲಹೆ ಎಂದು ಸರ್ಕಾರದ ವಿರುದ್ಧ ಕಾಂಗ್ರೆಸ್ ಟ್ವಿಟ್ಟರ್ ಮೂಲಕ ಕಿಡಿಕಾರಿದೆ.

ಟ್ವೀಟ್‍ನಲ್ಲಿ ಏನಿದೆ:
ಭ್ರಷ್ಟ ರಕ್ಷಕ ಸರ್ಕಾರಕ್ಕೆ ರಾತ್ರೋರಾತ್ರಿ ಯೂಟರ್ನ್ ಹೊಡೆಯುವಂತೆ ಚಾಟಿಯೇಟು ಬಿದ್ದಿದೆ. ಸಾರ್ವಜನಿಕ ಟೀಕೆ, ವಿಪಕ್ಷಗಳ ವಿರೋಧವೇ ಬರಬೇಕಾ ಭ್ರಷ್ಟ ಬಿಜೆಪಿ ಸರ್ಕಾರ ಬುದ್ಧಿ ಕಲಿಯಲು? ಬಿಜೆಪಿ ಸರ್ಕಾರ ʼಮದ್ಯ’ ʼರಾತ್ರಿʼ ಕೆಲಸಗಳನ್ನು ನಿಲ್ಲಿಸಬೇಕು ಮತ್ತು ಹಿಂದಿ ಪ್ರೇಮದ ಉತ್ತುಂಗದಲ್ಲಿ ಕನ್ನಡದ ಕೊಲೆ ನಿಲ್ಲಿಸಬೇಕೆಂಬುದು ನಮ್ಮ ಸಲಹೆ ಎಂದು ಟ್ವೀಟ್ ಮಾಡಿದೆ. ಇದನ್ನೂ ಓದಿ: ಸರ್ಕಾರದ ಆದೇಶದಲ್ಲಿ ವ್ಯಾಕರಣ ದೋಷ- ವಾಪಸ್ ಪಡೆದ ಆದೇಶಕ್ಕೆ ಮತ್ತೊಮ್ಮೆ ತಿದ್ದುಪಡಿ

ಸರ್ಕಾರಿ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ, ವೀಡಿಯೋ ಮಾಡಬಾರದೆಂದು ಸರ್ಕಾರ ಹೊರಡಿಸಿದ ಆದೇಶವನ್ನು ರಾಜ್ಯ ಸರ್ಕಾರ ಮಧ್ಯರಾತ್ರಿ ಹಿಂಪಡೆದಿದೆ. ಆದರೆ ಆ ಆದೇಶದಲ್ಲಿ ವ್ಯಾಕರಣ ದೋಷಗಳೇ ತುಂಬಿತ್ತು. ನಡಾವಳಿ ಎಂಬ ಶಬ್ದವನ್ನು ನಡವಳಿ, ಪ್ರಸ್ತಾವನೆಯನ್ನು ಪ್ರಸತ್ತಾವನೆ, ಮೇಲೆ- ಮೇಲೇ, ಭಾಗ- ಬಾಗ, ಕರ್ನಾಟಕ- ಕರ್ನಾಟಾ, ಆಡಳಿತ- ಆಡಳಿದ ಎಂದು ಬರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಆದೇಶದಲ್ಲಿ ಆಗಿದ್ದ ವ್ಯಾಕರಣದ ಲೋಪದೋಷಗಳನ್ನು ಸರಿಪಡಿಸಿ ಮತ್ತೊಮ್ಮೆ ತಿದ್ದುಪಡಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇದನ್ನೂ ಓದಿ: ಸಚಿವ ಜೆ.ಸಿ ಮಾಧುಸ್ವಾಮಿಗೆ ಆನೆಯಿಂದ ಮಾಲಾರ್ಪಣೆ

Live Tv

Leave a Reply

Your email address will not be published.

Back to top button