ಶ್ರೀನಗರ: ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಗೆ (ಎಲ್‍ಇಟಿ) ಸೇರಿದ್ದ ಕಾಶ್ಮೀರದ 20 ವರ್ಷದ ಫುಟ್ಬಾಲ್ ಆಟಗಾರನೊಬ್ಬ ತಾಯಿಯ ಪ್ರೀತಿಯ ಕಣ್ಣೀರಿಗೆ ಮಣಿದು ಉಗ್ರ ಹಾದಿಯನ್ನು ಬಿಟ್ಟು ಪೊಲೀಸರಿಗೆ ಶರಣಾಗಿದ್ದಾನೆ.
ಮೂಲತಃ ದಕ್ಷಿಣ ಕಾಶ್ಮೀರದ ಅನಂತನಾಗ್ ನಿವಾಸಿಯಾಗಿದ್ದ ಮಜೀದ್ ಖಾನ್ ಭಯೋತ್ಪಾದನೆಗೆ ಸೇರುವ ಮೊದಲು ಉತ್ತಮ ಫುಟ್ಬಾಲ್ ಗೋಲ್‍ಕೀಪರ್ ಆಗಿದ್ದ. ಆದರೆ ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದು, ನಂತರ ಇತ್ತೇಚೆಗೆ ಎಲ್‍ಇಟಿಯಿಂದ ಬಿಡುಗಡೆಯಾಗಿದ್ದ ಭಾವಚಿತ್ರದ ಮೂಲಕ ಯುವಕ ಉಗ್ರರ ಗುಂಪಿನಲ್ಲಿ ಸೇರಿರುವುದು ತಿಳಿದುಬಂದಿತ್ತು.
Advertisement
Advertisement
ಯುವಕನ ತಾಯಿ ಉಗ್ರರ ಗುಂಪಲ್ಲಿ ಮಗನ ಫೋಟೋವನ್ನು ನೋಡಿ ತಕ್ಷಣ ಆಘಾತವಾಗಿ ಕುಸಿದು ಬಿದ್ದಿದ್ದರು. ನಂತರ ಕಣ್ಣೀರು ಹಾಕಿಕೊಂಡು ವಾಪಸ್ ಬಂದು ನನ್ನ ಮತ್ತು ನಿನ್ನ ತಂದೆಯನ್ನು ಕೊಂದು ಹೋಗು ಎಂದು ಕೋಪದಿಂದ ಹೇಳಿದ್ದರು. ಬಳಿಕ ನಾನು ಅವನಿಗಾಗಿ ಕಾಯುತ್ತಿರುತ್ತೇನೆ. ಮತ್ತೆ ನನ್ನ ಮಗ ಹಿಂದಿರುಗಿ ಬರುತ್ತಾನೆ. ಖಾನ್ ಬಂದು ಮತ್ತೆ ಫುಟ್ಬಾಲ್ ಆಡುವುದನ್ನು ನೋಡಬೇಕು,” ಎಂದು ದುಃಖದಿಂದ ಹೇಳಿದ್ದರು. ಅವರ ಕಣ್ಣೀರಿನ ಮಾತುಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ವೈರಲ್ ಆಗಿತ್ತು.
Advertisement
ಅಮ್ಮನ ಪ್ರೀತಿಯ ಕೂಗನ್ನು ವಿಡಿಯೋದಲ್ಲಿ ಆಲಿಸಿಕೊಂಡು ಖಾನ್ ವಾಪಸ್ ಬರಲು ನಿರ್ಧಾರ ಮಾಡಿದ್ದ. ಈ ಸಂತಸದ ವಿಚಾರವನ್ನು ಪೊಲೀಸ್ ಅಧಿಕಾರಿಗಳು ಟ್ವಿಟ್ಟರ್ ನಲ್ಲಿ ತಿಳಿಸಿದ್ದರು.
Advertisement
ಶುಕ್ರವಾರ ಖಾನ್ ಅವಂತಿಪೋರಾದಲ್ಲಿರುವ ಸೈನ್ಯದ ಪ್ರಧಾನ ಕಚೇರಿಗೆ ಬಂದು ಶರಣಾಗಿದ್ದು, ಆ ಫೋಟೋವನ್ನು ಅಧಿಕಾರಿಗಳು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಕಪ್ಪು ಬಣ್ಣದ ಕೋಟ್ ಮತ್ತು ತಲೆಗೆ ಕಪ್ಪು ಬಣ್ಣದ ಕ್ಯಾಪ್ ಧರಿಸಿರುವ ಯುವಕನೇ ಮಜೀದ್ ಖಾನ್.
ಜನರಲ್ ಕಮಾಂಡಿಂಗ್ ಆಫಿಸರ್ ಮೇಜರ್ ಜನರಲ್ ಬಿಎಸ್ ರಾಜು ಅವರು ಶರಣಾದ ಮಜೀದ್ ಇರ್ಶಾದ್ ಖಾನ್ ವಿರುದ್ಧ ಯಾವುದೇ ಪ್ರಕರಣ ದಾಖಲಿಸುವುದಿಲ್ಲ. ಮಜೀದ್ ತಾಯಿ ಮೇಲಿನ ಪ್ರೀತಿ ಹಾಗೂ ಸೇನೆ ಮೇಲೆ ನಂಬಿಕೆ ಇಟ್ಟು ಶರಣಾಗಿದ್ದಾರೆ. ಅವರ ರಕ್ಷಣೆ ನಮಗೆ ಮುಖ್ಯ. ಕಾಶ್ಮೀರದಲ್ಲಿ ಹಿಂಸಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಉಗ್ರರ ಮೋಸಕ್ಕೆ ಬಲಿಯಾಗಿರುವ ಸಾಕಷ್ಟು ಯುವಕರು ಉಗ್ರತ್ವವನ್ನು ಬಿಟ್ಟು ಹಿಂದಿರುಗಬೇಕು ಎಂದು ಹೇಳಿದ್ದಾರೆ.
ಖಾನ್‍ಗೆ ಇಬ್ಬರು ಸಹೋದರಿಯರು ಇದ್ದು, ಇಬ್ಬರಿಗೂ ಮದುವೆಯಾಗಿದೆ. ತಂದೆ ಒಬ್ಬ ಸರ್ಕಾರಿ ನೌಕರರಾಗಿದ್ದು, ತಮ್ಮ 10ನೇ ತರಗತಿಯಲ್ಲಿ ಫುಟ್‍ಬಾಲ್ ಆಟಕ್ಕೆ ಸೇರಿದ್ದರು. ತಂದೆಯೂ ಕೂಡ ಒಬ್ಬನೇ ಮಗನಾದ ಖಾನ್‍ಗೆ ನಾನು ಸಹಾಯ ಮಾಡುತ್ತೇನೆ, ಹಿಂದಿರುಗಿ ಬಾ ಎಂದು ಹೇಳಿಕೊಂಡಿದ್ದರು.
ಸೇನಾಧಿಕಾರಿಗಳ ಗುಂಡಿಗೆ ಬಲಿಯಾದ ತನ್ನ ಸ್ನೇಹಿತ ಯವಾರ್ ನಿಸ್ಸರ್ ಶೆರ್ಗುರ್ಜಿ ಅಂತ್ಯಕ್ರಿಯೆಯ ಬಳಿಕ ಮಜೀದ್ ಖಾನ್ ಭಯೋತ್ಪಾದನೆಗೆ ಸೇರುವ ನಿರ್ಧಾರ ಮಾಡಿದ್ದ. ಈಗ ತಾಯಿಯ ವಿಡಿಯೋ ನೋಡಿದ ನಂತರ ಖಾನ್ ಅಮ್ಮನ ಪ್ರೀತಿಯ ಕಣ್ಣೀರಿಗೆ ಸೋತು ಉಗ್ರ ಸಂಘಟನೆ ತೊರೆದು ಪೊಲೀಸರಿಗೆ ಶರಣಾಗಿದ್ದಾನೆ.
https://www.youtube.com/watch?v=bF_25LEZp-c
Anantnag's 20-year-old footballer Majid Khan who joined LeT recently and surrendered before security forces in Kashmir pic.twitter.com/CPq0TcjGjV
— ANI (@ANI) November 17, 2017
It was a very brave decision by Majid Khan, I compliment him and assure that he will be able to get back to normal life very soon: Major General BS Raju pic.twitter.com/dHz4qZU4nX
— ANI (@ANI) November 17, 2017
You seriously expected Lashkar to say he was in their group? What are you saying, they kill people and then don't own up how will they acknowledge this?: Munir Khan, IGP on #MajidKhan pic.twitter.com/SdSSsYq1a0
— ANI (@ANI) November 17, 2017
WATCH: Army and Police Joint Press Conference in Srinagar https://t.co/Y2UHzmX8aH
— ANI (@ANI) November 17, 2017