ಬೆಂಗಳೂರು: ಮಕ್ಕಳಿಗೆ ಕಿತಾಬ್ ಕೊಡಿ ಎಂದರೆ ಬಿಜೆಪಿ ಸರ್ಕಾರ ಹಿಜಬ್ ವಿವಾದ ಮಾಡುತ್ತಿದೆ. ಮಕ್ಕಳ ಕೈಯಲ್ಲಿ ಕೇಸರಿ ಶಾಲು ಕೊಡ್ತೀರ, ಕಾಶ್ಮೀರ್ ಫೈಲ್ ಚಿತ್ರ ನೋಡಿ ಅಂತೀರ, ದಲಿತರ ಹಣವನ್ನು ಯಾಕೆ ನುಂಗುತ್ತಿದ್ದೀರ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಖಾವೂಂಗಾ, ನಾ ಖಾನೇದೂಂಗ ಎಂದು ಹೇಳಿದ್ದರು. ಆದರೆ, ಈಗಿನ ಬಿಜೆಪಿ ಸರ್ಕಾರ ಮೈಭೀ ಖಾವೂಂಗಾ, ಸಬ್ ಕೋ ಖಿಲಾವೂಂಗಾ ಎನ್ನುತ್ತಿದೆ. ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ನೋಡಲು ಒಗ್ಗಟ್ಟಾಗಿ ಹೋಗುವ ಮಂತ್ರಿಗಳು ಮತ್ತು ಸರ್ಕಾರ ಒಗ್ಗಟ್ಟಾಗಿ ಭ್ರಷ್ಟಾಚಾರದಲ್ಲಿ ತೊಡಗಿದೆ. ಕಾಶ್ಮೀರ್ ಫೈಲ್ಸ್ ಬಗ್ಗೆ ಸಾಕಷ್ಟು ಪ್ರಚಾರ ಮಾಡಿದ್ರು. ಬಿಜೆಪಿಯ ಟೂಲ್ ಕಿಟ್ ಕಾಶ್ಮೀರ್ ಫೈಲ್ಸ್. ರಾಜ್ಯ ಸರ್ಕಾರ ಟ್ಯಾಕ್ಸ್ ಫ್ರೀ ಮಾಡಿತು. ಸ್ಪೀಕರ್ ಸಿನಿಮಾ ನೋಡಿ ಅಂದ್ರು. ಆದರೆ ನಾನು ಕೇಳೋದು ಇಷ್ಟೇ ಕಾಶ್ಮೀರ್ ಫೈಲ್ಸ್‌ಗೆ ಇವರು ಇಷ್ಟೊಂದು ಆಸಕ್ತಿ ನೀಡ್ತಾರೆ. ಆದರೆ ರಾಜ್ಯದ ಬಗ್ಗೆ ಇವರಿಗೆ ಆಸಕ್ತಿಯಿಲ್ಲ. ಕರ್ನಾಟಕ ಫೈಲ್ಸ್ ನೋಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಲವು ಯೋಜನೆ ಇವೆ. ಅದರಲ್ಲಿ ಗಂಗಾಕಲ್ಯಾಣ ಯೋಜನೆ ಒಂದು. 14,777 ಬೋರ್‌ವೆಲ್ ಕೊರೆಯಲಾಗಿದೆ ಅದರ ಬಗ್ಗೆ ಮಾಹಿತಿ ಕೇಳಿದ್ದೇನೆ. ಡ್ರಿಲ್ಲಿಂಗ್, ಪಂಪ್ ಅಳವಡಿಕೆ, ಪವರ್ ಮೂರು ಹಂತದಲ್ಲಿ ಯೋಜನೆ ಆಗಬೇಕು ಮೊದಲು ಮೂರು ಟೆಂಡರ್ ಕರೆಯಲಾಗ್ತಿತ್ತು. ನಾನು ಸಚಿವನಾಗಿದ್ದಾಗ ಜಿಲ್ಲಾವಾರು ಪ್ಯಾಕೇಜ್ ನೀಡುತ್ತಿದ್ದೆವು. ಒಬ್ಬ ಕಂಟ್ರಾಕ್ಟರ್ ಎರಡಕ್ಕಿಂತ ಹೆಚ್ಚು ಕೊಡುತ್ತಿರಲಿಲ್ಲ. ಆಗ ಜಿಲ್ಲಾಧಿಕಾರಿಗಳು ಇದರ ಬಗ್ಗೆ ನೋಡಿಕೊಳ್ಳುತ್ತಿದ್ದರು. ಆದರೆ ಇದೀಗ ಎಲ್ಲ ಬದಲಾಗಿದೆ. ಬಿಜೆಪಿ ಸರ್ಕಾರ ಕೆಬಿಜೆಎನ್ಎಲ್‌ನವರಿಗೆ ಗುತ್ತಿಗೆ ಕೊಟ್ಟಿದ್ದಾರೆ. ಅವರಿಗೆ ಇದರ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಕೇವಲ 10/15 ಜನರಿಗೆ ಮಾತ್ರ ಅವಕಾಶ ಕೊಟ್ಟಿದ್ದಾರೆ. ಇದರಲ್ಲಿ ಎಲ್ಲಾ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಗುತ್ತಿಗೆದಾರನಿಗೆ ಸಂಪೂರ್ಣ ಅನುಭವವಿರಬೇಕು. ಕನಿಷ್ಠ 70 ಬೋರ್‌ವೆಲ್ ಕೊರೆಯಿಸಿರಬೇಕು. ಆದರೆ ಅಂತಹ ಅನುಭವವಿಲ್ಲದವರಿಗೆ ಟೆಂಡರ್ ಕೊಟ್ಟಿದ್ದಾರೆ. ಬೋರ್‌ವೆಲ್ ಟೆಂಡರ್‌ನಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಶಿಕ್ಷಣ ಕೇಸರಿಕರಣಗೊಳಿಸೋದ್ರಲ್ಲಿ ತಪ್ಪೇನಿದೆ: ವೆಂಕಯ್ಯ ನಾಯ್ಡು ಪ್ರಶ್ನೆ
ಟೆಂಡರ್ ಅಕ್ರಮದ ಬಗ್ಗೆ ನನಗಂತೂ ಆಚ್ಚರಿಯಿಲ್ಲ. ನಮ್ಮ ದೇಶದ ಪ್ರಧಾನಿ ಡಿಗ್ರಿಯೇ ಫೇಕ್ ಸಿಗುತ್ತಿದೆ. ಹಾಗಿರಬೇಕಾದರೆ ಟೆಂಡರ್ ಫೇಕ್ ಮಾಡೋದು ಕಷ್ಟವಲ್ಲ. ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಒಳ್ಳೆಯವರು. ಆದರೆ ಅಧಿಕಾರಿಗಳು ಅವರನ್ನ ದಾರಿತಪ್ಪಿಸುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯನ್ನು ದಾರಿ ತಪ್ಪಿಸುತ್ತಿದ್ದಾರೆ. ಲಕ್ಷ್ಮಿ ವೆಂಕಟೇಶ್ವರ್ ಎಂಬವರಿಗೆ ಟೆಂಡರ್ ಕೊಟ್ಟಿದ್ದಾರೆ. ಮೊದಲು ಅವರಿಗೆ ಟೆಂಡರ್ ಕೊಟ್ಟಿಲ್ಲ. ಎರಡನೇ ತಿಂಗಳಿಗೆ ಎಲಿಜಬಲ್ ಸರ್ಟಿಫೀಕೆಟ್ ಕೊಡ್ತಾರೆ. ಇದು ಹೇಗೆ ಸಾಧ್ಯ ಅನ್ನೋದು ನಮ್ಮ ಪ್ರಶ್ನೆ. ವಾಲ್ಮೀಕಿ ನಿಗಮದಲ್ಲಿ ಟೆಂಟರ್ ಕ್ಯಾನ್ಸಲ್ ಆಗುತ್ತೆ. ಆದಿ ಜಾಂಬವ ನಿಗಮದಲ್ಲಿ ಕ್ವಾಲಿಫೈ ಆಗುತ್ತೆ. ಒಂದು ಕಡೆ ಇಲ್ಲದ್ದು ಇನ್ನೊಂದು ಕಡೆ ಹೇಗೆ ಕ್ವಾಲಿಫೈ ಆಯ್ತು ಗಂಗಾಕಲ್ಯಾಣ ಯೋಜನೆಯಲ್ಲಿ ದೊಡ್ಡ ಮಟ್ಟದ ಅಕ್ರಮದ ನಡೆದಿದೆ ಎಂದು ಆರೋಪ ಹೊರಿಸಿದ್ದಾರೆ. ಇದನ್ನೂ ಓದಿ: ನಾ ಖಾವೂಂಗ ನಾ ಖಾನೇದೂಂಗ ಎಲ್ಲಿದ್ದಾರೆ? ಪ್ರಧಾನಿ ಮೋದಿ ವಿರುದ್ಧ ಸಿದ್ಧು ಟೀಕೆ
ಬಡವರ ಯೋಜನೆ ಹಣ ಹೊಡೆಯುವವರ ವಿರುದ್ಧ ಕ್ರಮಕೈಗೊಳ್ಳಿ. ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಿ ದಲಿತರ ಹಣ ಲೂಟಿ ಹೊಡೆದು ಸರ್ಕಾರ ನಡೆಸ್ಬೇಕಾ?. ಯಾಕೆಂದರೆ ಇದು ಎಸ್‍ಸಿ, ಎಸ್‍ಟಿ ವಿಚಾರ. ಮೊದಲು ನಿಮ್ಮ ಸಚಿವರನ್ನು ಕೈಬಿಡಿ ಇಲ್ಲವೇ ಸಿಎಂ ನೀವೇ ಸ್ಥಾನಕ್ಕೆ ರಾಜೀನಾಮೆ ಕೊಡಿ. ನಿಗಮಗಳಲ್ಲಿನ ಅಕ್ರಮಕ್ಕೆ ಬ್ರೇಕ್ ಹಾಕಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಿದ್ರಾಮುಲ್ಲಾ ಖಾನ್ ಆಗಿದ್ರೆ ಕಾಶ್ಮೀರದಲ್ಲಿ ಸಿದ್ದರಾಮಯ್ಯ ಉಳಿದುಕೊಳ್ಳುತ್ತಿದ್ದರು: ಸಿ.ಟಿ.ರವಿ
ಬಿಜೆಪಿಯವರು ಪರಿಶಿಷ್ಟ ಜಾತಿ ಪಂಗಡದ ಜನರ ದುಡ್ಡನ್ನು ಸ್ವಾರ್ಥಕ್ಕೆ ಬಳಸಿಕೊಂಡು ಚುನಾವಣಾ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಗಂಗಾಕಲ್ಯಾಣ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಅಥವಾ ಸಮಾಜಕಲ್ಯಾಣ ಸಚಿವರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.