ಲಕ್ನೋ: ಕಾಶಿ ವಿಶ್ವನಾಥ ದೇವಸ್ಥಾನದ ಗರ್ಭಗುಡಿಯೊಳಗೆ ಇಬ್ಬರು ಭಕ್ತರು ಹಾಗೂ ನಾಲ್ವರು ದೇಗುಲದ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದ ಘಟನೆ ನಡೆದಿದೆ.
ಉತ್ತರಪ್ರದೇಶದ ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥ ದೇವಾಲಯದಲ್ಲಿ ಈ ಘಟನೆ ನಡೆದಿದೆ. ದೇವಾಲಯದ ಗರ್ಭಗುಡಿಯಲ್ಲಿ ಆರತಿ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಗಿತ್ತು. ಆ ಸಂದರ್ಭದಲ್ಲಿ ಬಂದ ಇಬ್ಬರು ಭಕ್ತರು ಕಾಶಿ ವಿಶ್ವನಾಥನ ದರ್ಶನಕ್ಕೆ ಅಲ್ಲಿದ್ದವರ ಬಳಿ ಒತ್ತಾಯಿಸಿದ್ದಾರೆ.
Advertisement
Advertisement
ಅದಕ್ಕೆ ಅಲ್ಲಿದ್ದ ದೇವಾಲಯದ ಕಾರ್ಯಕರ್ತರು ಆರತಿ ನಡೆಯುತ್ತಿರುವಾಗ ಯಾರಿಗೂ ಪ್ರವೇಶವಿಲ್ಲ ಎಂದು ತಿಳಿಸಿದ್ದಾರೆ. ಇದೇ 2 ಗುಂಪುಗಳ ನಡುವೆ ನಡೆದ ವಾಗ್ವಾದವು ಮೀತಿ ಮೀರಿದ್ದು, ದೇವಾಲಯದ ಸೇವಕರು ಹಾಗೂ ಇಬ್ಬರು ಭಕ್ತರು ಕಾಶಿ ವಿಶ್ವನಾಥ ದೇವಾಲಯದ ಒಳಭಾಗದಲ್ಲಿ ಪರಸ್ಪರ ಕೈಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ತಲುಪಿದೆ.
Advertisement
ಇದಾದ ಬಳಿಕ ಆ ಇಬ್ಬರು ಭಕ್ತರನ್ನು ದೇಗುಲ ಗರ್ಭಗುಡಿಯಿಂದ ಹೊರಗೆ ಕರೆದುಕೊಂಡು ಹೋಗಿದ್ದಾರೆ. ಈ ಎಲ್ಲಾ ಘಟನೆಯೀ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ದೇವಾಲಯದ ಆಡಳಿತ ಮಂಡಳಿ ಘಟನೆ ಬಗ್ಗೆ ಮೌಲ್ಯಮಾಪನ ಮಾಡುವುದಾಗಿ ತಿಳಿಸಿದೆ.
Advertisement
ಘಟನೆ ಕುರಿತು ಇಬ್ಬರು ಭಕ್ತರು ನಾಲ್ವರು ದೇವಾಲಯದ ಕಾರ್ಯಕರ್ತರು ಸೇರಿದಂತೆ 5 ಜನರ ಮೇಲೆ ಹಲ್ಲೆ ಮಾಡಿದ್ದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ದೆಹಲಿಗೂ ತಲುಪಿದ ಮಂಕಿಪಾಕ್ಸ್ – ವಿದೇಶ ಪ್ರಯಾಣದ ದಾಖಲೆಯೇ ಇಲ್ಲದ ವ್ಯಕ್ತಿಗೆ ಸೋಂಕು
ಕೆಲ ದಿನಗಳ ಹಿಂದೆ ರಾಜ್ಯ ಪೊಲೀಸರು ಹಾಗೂ ದೇವಸ್ಥಾನದ ಸಿಬ್ಬಂದಿ ನಡುವೆ ದರ್ಶನಕ್ಕೆ ಸಂಬಂಧಿಸಿದಂತೆ ಇದೇ ರೀತಿ ವಾಗ್ವಾದ ನಡೆದಿತ್ತು. ಸಿಬ್ಬಂದಿ ಧರಣಿ ಕುಳಿತಿದ್ದು, ನಂತರ ಸಮಸ್ಯೆ ಬಗೆಹರಿದಿದೆ ಎನ್ನಲಾಗಿದೆ. ಇದನ್ನೂ ಓದಿ: ಪಾರ್ಕಿಂಗ್ ಕಿರಿಕಿರಿ ತಪ್ಪಿಸಲು ಕೋಟಿ ವೆಚ್ಚ- ಫ್ರೀಡಂಪಾರ್ಕ್ ಬಳಿ ಉದ್ಘಾಟನೆಗೂ ಮುನ್ನವೇ ಕಟ್ಟಡ ಸೋರಿಕೆ