ಒಂಟಿತನದಿಂದ ಖಿನ್ನತೆ – 18 ತಿಂಗಳ ಮಗು ಜೊತೆ ಬಾವಿಗೆ ಹಾರಿದ ತಾಯಿ

Public TV
1 Min Read
KWR suicide 2

ಕಾರವಾರ: ತಾಯಿಯೊಬ್ಬರು ತನ್ನ 18 ತಿಂಗಳ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಘಟನೆಯಲ್ಲಿ ಮಗು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಕಾರವಾರ ತಾಲೂಕಿನ ಅಂಗಡಿ ಗ್ರಾಮದ ಕಳಸವಾಡದಲ್ಲಿ ನಡೆದಿದೆ.

ಅಂಗಡಿಗ್ರಾಮ ನಿವಾಸಿ ಅಲ್ಫಾನ್ಸೊ ಕುಟಿನ್ಹೊ (32) ಆತ್ಮಹತ್ಯೆಗೆ ಯತ್ನಿಸಿದವರು. ಅವರ ಪುತ್ರಿ ಸಲೂನ ಕುಟಿನ್ಹೊ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಅಲ್ಫಾನ್ಸೊ ಪತಿ ವಿದೇಶದಲ್ಲಿದ್ದು ತಾಯಿ ಮತ್ತು ಮಗು ಅಂಗಡಿ ಗ್ರಾಮದ ಕಳಸವಾಡದ ಬಾಡಿಗೆ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಿದ್ದರು. ಇದರಿಂದಾಗಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

KWR suicide 1

ಅಲ್ಫಾನ್ಸೊ ಅವರು ಇಂದು ಮಗುವನ್ನು ಎತ್ತಿಕೊಂಡು ಬಾವಿಗೆ ಹಾರಿದ್ದ ವೇಳೆ ನೀರಿನ ಶಬ್ದ ಕೇಳಿ ಪಕ್ಕದ ಮನೆಯವರು ಇಬ್ಬರನ್ನೂ ಬಾವಿಯಿಂದ ಹೊರ ತೆಗೆದಿದ್ದಾರೆ. ಆದರೆ ಆ ವೇಳೆಗೆ ಮಗು ಮೃತಪಟ್ಟಿತ್ತು. ತಾಯಿಯನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಘಟನೆ ಕುರಿತು ಕಾರವಾರದ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article