ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಇಂದು 36 ವರ್ಷದ ದುಬೈನಿಂದ ಭಟ್ಕಳಕ್ಕೆ ಬಂದು 14 ದಿನ ಹೋಮ್ ಕ್ವಾರಂಟೈನ್ ಮುಗಿಸಿದ್ದ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 11ಕ್ಕೆ ಏರಿದೆ. ಈ ಹಿಂದೆ ಕೊರೊನಾ ವೈರಸ್ ಸೋಂಕು ತಗುಲಿದ್ದ ಗರ್ಭಿಣಿಯ ರೋಗಿ 176 ಅವರ ಪತಿಗೇ ಇಂದು ಸೋಂಕು ತಟ್ಟಿರುವುದು ದೃಢಪಟ್ಟಿದೆ. ದುಬೈನಿಂದ ಮಾರ್ಚ್ 17ರಂದು ಮುಂಬೈಗೆ ಬಂದು, ಅಲ್ಲಿಂದ ಮತ್ಸ್ಯಗಂಧ ರೈಲಿನ ಮೂಲಕ ಮಾರ್ಚ್ 21ಕ್ಕೆ ಭಟ್ಕಳ ರೈಲ್ವೆ ನಿಲ್ದಾಣಕ್ಕೆ ಸೋಂಕಿತ ಬಂದಿಳಿದಿದ್ದಾರೆ. ಅಲ್ಲಿಂದ ಸಂಬಂಧಿ ಸ್ಕೂಟರ್ ನಲ್ಲಿ ಮನೆಗೆ ತೆರಳಿದ್ದು, ತನ್ನ ಇಬ್ಬರು ಮಕ್ಕಳು, ಪತ್ನಿ, ತಾಯಿ, ಸಂಬಂಧಿ ಜೊತೆ ಸಂಪರ್ಕಕ್ಕೆ ಬಂದಿದ್ದಾರೆ.
Advertisement
Advertisement
ಈ ಸೋಂಕಿತ ವ್ಯಕ್ತಿ ದುಬೈನಿಂದ ಬಂದ ಬಳಿಕ 14 ದಿನಗಳು ಕ್ವಾರಂಟೈನ್‍ನಲ್ಲಿದ್ದರು. ಆದಾದ ಬಳಿಕ ನಗರದಲ್ಲಿ ಓಡಾಡುತ್ತಿದ್ದಾಗ ಜನರ ವ್ಯಕ್ತಿಯ ಕೈಮೇಲಿನ ಸೀಲ್ ನೋಡಿ ದೂರು ನೀಡಿದ್ದರು. ಇದರ ಆಧಾರದಲ್ಲಿ ವ್ಯಕ್ತಿಯನ್ನು ಬಂಧಿಸಿ ಕ್ವಾರಂಟೈನ್ ಮಾಡಲಾಗಿತ್ತು.
Advertisement
ಈ ಸಂದರ್ಭದಲ್ಲಿ ವ್ಯಕ್ತಿಯ ಗರ್ಭಿಣಿ ಪತ್ನಿಗೆ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ನಂತರ ವ್ಯಕ್ತಿ ಹಾಗೂ ಅವರ ಇಬ್ಬರು ಮಕ್ಕಳು, ತಾಯಿ, ಸಂಬಂಧಿಯನ್ನೂ ಕ್ವಾರಂಟೈನ್ ಮಾಡಲಾಗಿತ್ತು. ಸದ್ಯ ವ್ಯಕ್ತಿಯ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದ್ದು, ಇಂದು ಬಂದ ವರದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ.