ಕಾಲಿಗೆ ಚಕ್ರಕಟ್ಟಿಕೊಂಡು ಸದಾ ದೇಶಗಳನ್ನು ಸುತ್ತುವ (Travel) ನಟಿ ಕಾರುಣ್ಯ ರಾಮ್ (Karunya Ram), ಸದ್ಯ ಜೋರ್ಡನ್ (Jordan) ಪ್ರವಾಸದಲ್ಲಿದ್ದಾರೆ. ಸಹೋದರಿ ಜೊತೆ ಟೂರ್ ಮಾಡುತ್ತಿರುವ ಅವರು, ಅಲ್ಲಿನ ಸಂಗತಿಗಳನ್ನು ಅಭಿಮಾನಿಗಳಿಗೆ ತಿಳಿಸುತ್ತಲೇ ಇರುತ್ತಾರೆ. ಜೋರ್ಡನ್ ಮೃತಸಮುದ್ರ ದಂಡೆ ಮೇಲೆ ಬಿಂದಾಸ್ ಆಗಿ ಪೋಸ್ ಕೊಟ್ಟಿರುವ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.
ಜೋರ್ಡನ್ ಪ್ರವಾಸ ಮಾಡಬೇಕು ಎನ್ನುವುದು ಹಲವು ವರ್ಷಗಳ ಕನಸಾಗಿತ್ತಂತೆ. ಇದೀಗ ಆ ಕನಸನ್ನು ಕಾರುಣ್ಯ ಈಡೇರಿಸಿಕೊಂಡಿದ್ದಾರೆ. ಅಲ್ಲದೇ, ಜೋರ್ಡನ್ ಇತರ ಸ್ಥಳಗಳ ಬಗ್ಗೆ ಅಭಿಮಾನಿಗಳಿಗೆ ತಿಳಿಸುತ್ತಾರಂತೆ. ಜೋರ್ಡನ್ ಪ್ರವಾಸದ ಹಲವು ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬಾಲಿವುಡ್ ನಂತರ ತಮಿಳಿನಲ್ಲೂ ಹವಾ ಸೃಷ್ಟಿಸಿದ ‘ಕಬ್ಜ’ ಸಿನಿಮಾ
ಸಿನಿಮಾ, ರಿಯಾಲಿಟಿ ಶೋಗಳನ್ನು ಮಾಡುತ್ತಲೇ ಇರುವ ಕಾರುಣ್ಯ ರಾಮ್, ಕಾರ್ಯಕ್ರಮಗಳ ಮಧ್ಯ ಬಿಡುವು ತಗೆದುಕೊಂಡು ಪ್ರವಾಸ ಮಾಡುತ್ತಾರೆ. ಪ್ರವಾಸದಲ್ಲಿ ಸಹೋದರಿ ಇರಲೇಬೇಕು ಎನ್ನುವುದು ಅವರ ಕಡ್ಡಾಯಗಳಲ್ಲಿ ಒಂದು. ಹಾಗಾಗಿ ಸಹೋದರಿಯರಿಬ್ಬರೂ ಅನೇಕ ದೇಶಗಳನ್ನು ಸುತ್ತಿದ್ದಾರೆ.
ಇತ್ತೀಚೆಗಷ್ಟೇ ಕಾರುಣ್ಯ ರಾಮ್ ನಟನೆ ಪೆಟ್ರೋಮ್ಯಾಕ್ಸ್ ಸಿನಿಮಾ ರಿಲೀಸ್ ಆಗಿದೆ. ಸತೀಶ್ ನೀನಾಸಂ ನಾಯಕನಾಗಿ ನಟಿಸಿರುವ ಈ ಸಿನಿಮಾದಲ್ಲಿ ಕಾರುಣ್ಯ ಹೊಸ ಬಗೆಯ ಪಾತ್ರ ಮಾಡಿದ್ದರು. ನಾಟಿ ನಾಟಿ ಡೈಲ್ ಕೂಡ ಹೊಡೆದಿದ್ದರು. ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರಿಂದ ಅದೊಂದು ಸವಾಲಿನ ಪಾತ್ರ ಕೂಡ ಆಗಿತ್ತು.