ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆಯಿದೆ. ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ಇಲ್ಲ. ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿಯೂ ಒಣಹವೆ ಇರಲಿದೆ. ರಾಜ್ಯದ ಮೂರು ಹವಾಮಾನ ವಿಭಾಗಗಳಲ್ಲಿಯೂ ನವೆಂಬರ್ 17ರಂದು ಯಾವುದೇ ಮಳೆ ಎಚ್ಚರಿಕೆ ನೀಡಲಾಗಿಲ್ಲ. ಕೆಲವು ಜಿಲ್ಲೆಗಳಲ್ಲಿ ಬೆಳಗಿನ ಜಾವ ಮಂಜು ಹಾಗೂ ರಾತ್ರಿ ವೇಳೆ ತಂಪಿನ ವಾತಾವರಣ ಕಂಡುಬರುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಮಳೆಯ ಸಾಧ್ಯತೆ ಕಡಿಮೆಯಿದೆ. ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ ಎಂದು ಹವಾಮಾನ ಮುನ್ಸೂಚನೆ ತಿಳಿಸಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 30-16
ಮಂಗಳೂರು: 33-24
ಶಿವಮೊಗ್ಗ: 34-16
ಬೆಳಗಾವಿ: 31-17
ಮೈಸೂರು: 31-15

ಮಂಡ್ಯ: 30-17
ಮಡಿಕೇರಿ: 28-17
ರಾಮನಗರ: 30-16
ಹಾಸನ: 29-17
ಚಾಮರಾಜನಗರ: 30-16

ಚಿಕ್ಕಬಳ್ಳಾಪುರ: 29-16
ಕೋಲಾರ: 29-16
ತುಮಕೂರು: 30-17
ಉಡುಪಿ: 32-24
ಕಾರವಾರ: 32-23

ಚಿಕ್ಕಮಗಳೂರು: 28-17
ದಾವಣಗೆರೆ: 32-18
ಹುಬ್ಬಳ್ಳಿ: 32-17
ಚಿತ್ರದುರ್ಗ: 31-17
ಹಾವೇರಿ: 31-17

ಬಳ್ಳಾರಿ: 33-19
ಗದಗ: 32-18
ಕೊಪ್ಪಳ: 32-18
ರಾಯಚೂರು: 33-20

ಯಾದಗಿರಿ: 33-19
ವಿಜಯಪುರ: 32-17
ಕಲಬುರಗಿ: 33-18
ಬಾಗಲಕೋಟೆ: 32-17
