ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು, ಮಂಡ್ಯ, ಮಡಿಕೇರಿ ಹಾಗೂ ರಾಮನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ತುಮಕೂರು, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳ ಹಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಇದೆ ಎಂದು ಇಲಾಖೆ ವರದಿ ಮಾಡಿದೆ.
ಬೆಂಗಳೂರಿನಲ್ಲಿ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಮಡಿಕೇರಿಯಲ್ಲಿ ಗರಿಷ್ಠ 27 ಸೆಲ್ಸಿಯಸ್ ಹಾಗೂ ಕನಿಷ್ಠ 20 ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 30-21
ಮಂಗಳೂರು: 31-25
ಶಿವಮೊಗ್ಗ: 31-21
ಬೆಳಗಾವಿ: 30-20
ಮೈಸೂರು: 31-22
ಮಂಡ್ಯ: 31-22
ಮಡಿಕೇರಿ: 27-20
ರಾಮನಗರ: 31-21
ಹಾಸನ: 28-19
ಚಾಮರಾಜನಗರ: 30-22
ಚಿಕ್ಕಬಳ್ಳಾಪುರ: 28-20
ಕೋಲಾರ: 30-21
ತುಮಕೂರು: 31-21
ಉಡುಪಿ: 32-25
ಕಾರವಾರ: 31-27
ಚಿಕ್ಕಮಗಳೂರು: 26-18

ದಾವಣಗೆರೆ: 33-22
ಹುಬ್ಬಳ್ಳಿ: 32-21
ಚಿತ್ರದುರ್ಗ: 31-22
ಹಾವೇರಿ: 33-22
ಬಳ್ಳಾರಿ: 34-24
ಗದಗ: 32-22
ಕೊಪ್ಪಳ: 33-23
ರಾಯಚೂರು: 35-23
ಯಾದಗಿರಿ: 35-22
ವಿಜಯಪುರ: 34-23
ಕಲಬುರಗಿ: 34-22
ಬಾಗಲಕೋಟೆ: 34-22

