ರಾಜ್ಯ ರಾಜಧಾನಿ ಸೇರಿದಂತೆ ರಾಜ್ಯದ ಅನೇಕ ಕಡೆ 2 ದಿನಗಳ ಗುಡುಗು ಸಹಿತ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಾ.28 ಮತ್ತು 29 ರಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಹಾಸನ ಮತ್ತು ಮೈಸೂರು ಭಾಗದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
Advertisement
ಕೊಡಗು, ಬೀದರ್, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಇಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Advertisement
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕಾರವಾರದಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.
Advertisement
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 34-21
ಮಂಗಳೂರು: 33-23
ಶಿವಮೊಗ್ಗ: 38-19
ಬೆಳಗಾವಿ: 36-18
ಮೈಸೂರು: 36-21
ಮಂಡ್ಯ: 37-22
ಮಡಿಕೇರಿ: 33-17
ರಾಮನಗರ: 36-22
ಹಾಸನ: 35-18
ಚಾಮರಾಜನಗರ: 35-22
ಚಿಕ್ಕಬಳ್ಳಾಪುರ: 34-22
ಕೋಲಾರ: 33-22
ತುಮಕೂರು: 35-21
ಉಡುಪಿ: 33-24
ಕಾರವಾರ: 33-23
ಚಿಕ್ಕಮಗಳೂರು: 36-18
ದಾವಣಗೆರೆ: 37-19
ಹುಬ್ಬಳ್ಳಿ: 37-19
ಚಿತ್ರದುರ್ಗ: 37-20
ಹಾವೇರಿ: 38-19
ಬಳ್ಳಾರಿ: 38-22
ಗದಗ: 37-19
ಕೊಪ್ಪಳ: 37-21
ರಾಯಚೂರು: 38-23
ಯಾದಗಿರಿ: 39-23
ವಿಜಯಪುರ: 37-22
ಬೀದರ್: 36-22
ಕಲಬುರಗಿ: 38-22
ಬಾಗಲಕೋಟೆ: 38-21