ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಳೆಯ ಆರ್ಭಟ ಜೋರಾಗಿದೆ. ರಾಜ್ಯ ರಾಜಧಾನಿಯಲ್ಲಿ ಇಂದಿನಿಂದ ಎರಡು ದಿನ ಮಳೆ ಸುರಿಯಲಿದ್ದು, ಮುಂದಿನ 4 ದಿನಗಳ ಕಾಲ ರಾಜ್ಯಾದ್ಯಂತ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ 2 ದಿನ ಹಗುರ ಮಳೆಯಾಗುವ ಸಾಧ್ಯತೆಯಿದೆ. ಮಳೆ ಜೊತೆಗೆ ಗುಡುಗು, ಮಿಂಚಿನ ಎಚ್ಚರಿಕೆಯಿದ್ದು, ಗಾಳಿ ಕೂಡಾ 30-40 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆಯಿದೆ. ಸಂಜೆಯ ವೇಳೆಗೆ ಬೆಂಗಳೂರಿನಲ್ಲಿ ಗುಡುಗು ಸಿಡಿಲು ಮಳೆಯಬ್ಬರ ಇರಲಿದೆ. ಉಳಿದಂತೆ ಉತ್ತರ ಒಳನಾಡು, ಕರಾವಳಿ ಭಾಗದ ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ. ಅಲ್ಲದೆ ರಾಜ್ಯದೆಲ್ಲೆಡೆ ಮೋಡ ಕವಿದ ವಾತಾವರಣ ಇರಲಿದೆ.
Advertisement
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
Advertisement
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 31-21
ಮಂಗಳೂರು: 34-26
ಶಿವಮೊಗ್ಗ: 36-22
ಬೆಳಗಾವಿ: 34-21
ಮೈಸೂರು: 32-21
Advertisement
ಮಂಡ್ಯ: 34-22
ಮಡಿಕೇರಿ: 27-17
ರಾಮನಗರ: 33-22
ಹಾಸನ: 32-19
ಚಾಮರಾಜನಗರ: 33-22
ಚಿಕ್ಕಬಳ್ಳಾಪುರ: 32-21
ಕೋಲಾರ: 32-22
ತುಮಕೂರು: 32-21
ಉಡುಪಿ: 34-27
ಕಾರವಾರ: 34-27
ಚಿಕ್ಕಮಗಳೂರು: 31-18
ದಾವಣಗೆರೆ: 37-23
ಹುಬ್ಬಳ್ಳಿ: 36-22
ಚಿತ್ರದುರ್ಗ: 35-22
ಹಾವೇರಿ: 37-23
ಬಳ್ಳಾರಿ: 37-25
ಗದಗ: 36-22
ಕೊಪ್ಪಳ: 37-23
ರಾಯಚೂರು: 38-27
ಯಾದಗಿರಿ: 38-27
ವಿಜಯಪುರ: 28-19
ಬೀದರ್: 37-25
ಕಲಬುರಗಿ: 38-26
ಬಾಗಲಕೋಟೆ: 38-23