ಕಳೆದ ಕೆಲವು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗುತ್ತಿದ್ದು, ಕೆಲವೆಡೆ ಮೋಡ ಕವಿದ ವಾತಾವರಣ ಹಾಗೂ ತಂಪಾದ ಗಾಳಿ ಬೀಸುತ್ತಿದೆ.
ಮುಂದಿನ 24 ಗಂಟೆಗಳ ಕಾಲ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಉತ್ತರ ಒಳನಾಡಿನ ಬೀದರ್, ಬೆಳಗಾವಿ, ಕಲಬುರಗಿ, ಧಾರವಾಡ, ಗದಗ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 27-22
ಮಂಗಳೂರು: 27-25
ಶಿವಮೊಗ್ಗ: 26-23
ಬೆಳಗಾವಿ: 27-22
ಮೈಸೂರು: 27-22

ಮಂಡ್ಯ: 28-22
ಮಡಿಕೇರಿ: 22-21
ರಾಮನಗರ: 28-22
ಹಾಸನ: 25-21
ಚಾಮರಾಜನಗರ: 28-23
ಚಿಕ್ಕಬಳ್ಳಾಪುರ: 28-21

ಕೋಲಾರ: 28-22
ತುಮಕೂರು: 28-22
ಉಡುಪಿ: 27-25
ಕಾರವಾರ: 28-27
ಚಿಕ್ಕಮಗಳೂರು: 22-19

ದಾವಣಗೆರೆ: 29-23
ಹುಬ್ಬಳ್ಳಿ: 28-23
ಚಿತ್ರದುರ್ಗ: 28-23
ಹಾವೇರಿ: 28-23
ಬಳ್ಳಾರಿ: 32-24
ಗದಗ: 28-22
ಕೊಪ್ಪಳ: 31-23

ರಾಯಚೂರು: 33-25
ಯಾದಗಿರಿ: 33-25
ವಿಜಯಪುರ: 32-24
ಕಲಬುರಗಿ: 31-24
ಬಾಗಲಕೋಟೆ: 31-23

