ಬೆಂಗಳೂರಿನಲ್ಲಿ ಮುಂದಿನ 4 ದಿನ ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ 4 ದಿನ ಕರಾವಳಿ ಭಾಗದ ಕೆಲ ಕಡೆ ಗುಡುಗು ಸಹಿತ ಮಳೆ ಸಾಧ್ಯತೆ ಇದ್ದು, ಮೂರು ಮತ್ತು ನಾಲ್ಕನೇ ದಿನ ಕರಾವಳಿಯ ಹಲವು ಕಡೆ ಮಳೆ ಸಾಧ್ಯತೆ. ಮುಂದಿನ ನಾಲ್ಕು ದಿನ ಕರಾವಳಿಯಲ್ಲಿ ಸಿಡಿಲು ಗುಡುಗಿನ ಎಚ್ಚರಿಕೆ ನೀಡಲಾಗಿದೆ. ಇಂದು ನಾಳೆ ಉತ್ತರ ಒಳನಾಡಿನಲ್ಲಿ ಒಣಹವೆ ಇರಲಿದೆ.
ಉತ್ತರ ಒಳನಾಡಿನ ಕಲ್ಬುರ್ಗಿ, ಹಾವೇರಿ, ಬೆಳಗಾವಿ, ಧಾರವಾಡ ಸೇರಿದಂತೆ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನಲ್ಲಿ ನಾಲ್ಕು ದಿನ ಬಹುತೇಕ ಜಿಲ್ಲೆಯ ಕೆಲವು ಕಡೆ ಗುಡುಗು ಸಹಿತ ಮಳೆ ಸಾಧ್ಯತೆಯಿದೆ.
ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 32-21
ಮಂಗಳೂರು: 31-26
ಶಿವಮೊಗ್ಗ: 34-23
ಬೆಳಗಾವಿ: 33-23
ಮೈಸೂರು: 33-22
ಮಂಡ್ಯ: 31-22
ರಾಮನಗರ: 33-22
ಹಾಸನ: 32-21
ಚಾಮರಾಜನಗರ: 33-22
ಚಿಕ್ಕಬಳ್ಳಾಪುರ: 32-20
ಕೋಲಾರ: 33-21
ತುಮಕೂರು: 34-22
ಉಡುಪಿ: 32-26
ಕಾರವಾರ: 31-27
ಚಿಕ್ಕಮಗಳೂರು: 31-20
ದಾವಣಗೆರೆ: 36-23
ಚಿತ್ರದುರ್ಗ: 34-22
ಹಾವೇರಿ: 34-24
ಬಳ್ಳಾರಿ: 37-24
ಗದಗ: 36-33
ಕೊಪ್ಪಳ: 36-24
ರಾಯಚೂರು: 38-26
ಯಾದಗಿರಿ: 38-26
ವಿಜಯಪುರ: 32-21
ಬೀದರ್: 36-25
ಕಲಬುರಗಿ: 38-26
ಬಾಗಲಕೋಟೆ: 37-25