ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ರಾಜ್ಯದಲ್ಲಿ ಮುಂಗಾರು ಮತ್ತಷ್ಟು ಚುರುಕುಗೊಂಡಿದ್ದು, ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಇಂದಿನಿಂದ ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ನೀಡಿದೆ.
ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಗೂ ರೆಡ್ ಅಲರ್ಟ್ ಘೋಷಿಸಲಾಗಿದೆ. 18ರ ಬಳಿಕ ಕರಾವಳಿ ಜಿಲ್ಲೆಗಳು ಹಾಗೂ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಿದೆ.
Advertisement
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
Advertisement
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 26-21
ಮಂಗಳೂರು: 27-24
ಶಿವಮೊಗ್ಗ: 24-21
ಬೆಳಗಾವಿ: 23-21
ಮೈಸೂರು: 26-21
Advertisement
ಮಂಡ್ಯ: 27-22
ಮಡಿಕೇರಿ: 19-17
ರಾಮನಗರ: 27-22
ಹಾಸನ: 23-19
ಚಾಮರಾಜನಗರ: 27-22
ಚಿಕ್ಕಬಳ್ಳಾಪುರ: 27-21
ಕೋಲಾರ: 28-22
ತುಮಕೂರು: 27-21
ಉಡುಪಿ: 27-25
ಕಾರವಾರ: 27-25
ಚಿಕ್ಕಮಗಳೂರು: 22-19
ದಾವಣಗೆರೆ: 26-22
ಹುಬ್ಬಳ್ಳಿ: 24-21
ಚಿತ್ರದುರ್ಗ: 25-21
ಹಾವೇರಿ: 26-22
ಬಳ್ಳಾರಿ: 29-24
ಗದಗ: 26-22
ಕೊಪ್ಪಳ: 27-23
ರಾಯಚೂರು: 30-24
ಯಾದಗಿರಿ: 30-24
ವಿಜಯಪುರ: 27-23
ಬೀದರ್: 28-22
ಕಲಬುರಗಿ: 29-23
ಬಾಗಲಕೋಟೆ: 28-23