ಮೇ ತಿಂಗಳಿನಲ್ಲಿ ನಿಗಿ, ನಿಗಿ ಕೆಂಡದಂತೆ ಸೂರ್ಯನ ಬಿಸಿಲು ಇರುವುದು ಕಾಮನ್. ಆದರೆ ಈ ಬಾರಿ ಅಸಾನಿ ಚಂಡಮಾರುತದ ಪರಿಣಾಮ ವರುಣನ ಆರ್ಭಟ ತಂಪು ಗಾಳಿ, ಚುಮು ಚುಮು ಚಳಿಯಿಂದಾಗಿ ಬೆಂಗಳೂರು ಸೇರಿದಂತೆ ರಾಜ್ರದ ವಾತಾವರಣ ಕಳೆದ ಮೂರು ದಿನದಿಂದ ತಂಪಾಗಿದೆ.
ಅದರಲ್ಲಿಯೂ ಬೆಂಗಳೂರಿನ ಈ ವಾತಾವರಣ ದಾಖಲೆಯನ್ನು ಸೃಷ್ಟಿಸಿದೆ. ಅಸಾನಿ ಚಂಡಮಾರುತ ಬೆಂಗಳೂರಿನಲ್ಲಿ 54 ವರ್ಷದ ಹಿಂದಿನ ದಾಖಲೆ ರಿಪೀಟ್ ಮಾಡಿದೆ. 54 ವರ್ಷದ ಬಳಿಕ ಗುರುವಾರ ಬೆಂಗಳೂರಿನ ವೆದರ್ ಸೆಕೆಂಡ್ ಕೂಲೆಸ್ಟ್ ಡೇ ದಾಖಲೆ ಸೃಷ್ಟಿಯಾಗಿದೆ. ಹವಾಮಾನ ಇಲಾಖೆ ಕೆಲ ಜಿಲ್ಲೆಗಳಿಗೆ ಭಾರೀ ಗಾಳಿ-ಮಳೆಯ ಮುನ್ನೆಚ್ಚರಿಕೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ಶಿವಮೊಗ್ಗ, ತುಮಕೂರು ಜಿಲ್ಲೆಗಳಿಗೆ ಅಲರ್ಟ್ ಘೋಷಿಸಲಾಗಿದೆ.
Advertisement
Advertisement
ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದೆ.
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 29-20
ಮಂಗಳೂರು: 31-26
ಶಿವಮೊಗ್ಗ: 31-23
ಬೆಳಗಾವಿ: 31-22
ಮೈಸೂರು: 28-21
ಮಂಡ್ಯ: 29-22
Advertisement
ಕೊಡಗು: 23-19
ರಾಮನಗರ: 30-21
ಹಾಸನ: 27-20
ಚಾಮರಾಜನಗರ: 28-22
ಚಿಕ್ಕಬಳ್ಳಾಪುರ: 30-21
ಕೋಲಾರ: 31-22
ತುಮಕೂರು: 31-21
ಉಡುಪಿ: 31-27
ಕಾರವಾರ: 32-28
ಚಿಕ್ಕಮಗಳೂರು: 27-19
ದಾವಣಗೆರೆ: 33-23
ಚಿತ್ರದುರ್ಗ: 32-22
ಹಾವೇರಿ: 33-23
ಬಳ್ಳಾರಿ: 36-24
ಗದಗ: 34-23
ಕೊಪ್ಪಳ: 35-24
ರಾಯಚೂರು: 39-27
ಯಾದಗಿರಿ: 40-27
ವಿಜಯಪುರ: 37-24
ಬೀದರ್: 39-27
ಕಲಬುರಗಿ: 39-27
ಬಾಗಲಕೋಟೆ: 37-24