ನಿನ್ನೆಯಿಂದ ರಾಜಧಾನಿ ಸೇರಿದಂತೆ ಹಲವು ಕಡೆ ನಿರತರವಾಗಿ ಮಳೆ ಸುರಿಯುತ್ತಿದೆ. ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಅಬ್ಬರ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕರಾವಳಿ ಭಾಗದಲ್ಲಿ ಇನ್ನೂ ಮೂರು ದಿನ ಮಳೆ ಅಬ್ಬರ ಸಾಧ್ಯತೆ. ಕರಾವಳಿಯ ಎಲ್ಲಾ ಜಿಲ್ಲೆಗಳಿಗೂ ಇಂದು ಆರೆಂಜ್ ಅಲರ್ಟ್, ನಾಳೆ ರೆಡ್ ಅಲರ್ಟ್, 6ನೇ ತಾರೀಖು ಆರೆಂಜ್ ಅಲರ್ಟ್. ಕೊನೆಯ ಎರಡು ದಿನ ಯಲ್ಲೋ ಅಲರ್ಟ್. ಇಂದು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಗದಗ, ಕಲ್ಬುರ್ಗಿ ವಿಜಯಪುರ ಜಿಲ್ಲಗೆಳಿಗೆ ಯಲ್ಲೋ ಅಲರ್ಟ್. ನಾಳೆ ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಇದೆ.
ಇಂದು ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಗ್ರಾಮಾಂತರ, ಹಾಸನ, ಮಂಡ್ಯ, ಮೈಸೂರು, ತುಮಕೂರು, ಚಾಮರಾಜನಗರ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್. ದಕ್ಷಿಣ ಒಳನಾಡಿನ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್. ನಾಳೆ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದ್ದು ಮುನ್ನೆಚ್ಚರಿಕೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರಿನಲ್ಲಿ ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 24-19
ಮಂಗಳೂರು: 26-24
ಶಿವಮೊಗ್ಗ: 26-21
ಬೆಳಗಾವಿ: 24-21
ಮೈಸೂರು: 24-21
ಮಂಡ್ಯ: 25-21
ಕೊಡಗು: 19-18
ರಾಮನಗರ: 25-21
ಹಾಸನ: 22-19
ಚಾಮರಾಜನಗರ: 24-21
ಚಿಕ್ಕಬಳ್ಳಾಪುರ: 25-20
ಕೋಲಾರ: 26-21
ತುಮಕೂರು: 25-21
ಉಡುಪಿ: 27-24
ಚಿಕ್ಕಮಗಳೂರು: 21-18
ದಾವಣಗೆರೆ: 26-22
ಚಿತ್ರದುರ್ಗ: 24-20
ಹಾವೇರಿ: 26-22
ಬಳ್ಳಾರಿ: 29-23
ಗದಗ: 26-21
ಕೊಪ್ಪಳ: 27-22
ರಾಯಚೂರು: 29-23
ಯಾದಗಿರಿ: 29-23
ವಿಜಯಪುರ: 28-22
ಬೀದರ್: 27-22
ಕಲಬುರಗಿ: 28-23
ಬಾಗಲಕೋಟೆ: 28-22