ರಾಜ್ಯದಲ್ಲಿ ಐದು ದಿನಗಳ ಕಾಲ ಮಳೆಯ ಆರ್ಭಟ ಮುಂದುವರೆಯಲಿದ್ದು, ಕರಾವಳಿ ಭಾಗಗಳಲ್ಲಿಯೂ ಬಿರುಗಾಳಿ ಸಹಿತ ಮಳೆಯಾಗಲಿದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಇಂದಿನಿಂದ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಇರಲಿದ್ದು, ಕೊಡಗು, ಚಿಕ್ಕಮಗಳೂರಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ನಡುವೆ ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.
ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಯಚೂರಿನಲ್ಲಿ ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 26-20
ಮಂಗಳೂರು: 27-24
ಶಿವಮೊಗ್ಗ: 27-21
ಬೆಳಗಾವಿ: 27-21
ಮೈಸೂರು: 25-21
ಮಂಡ್ಯ: 26-21
ಕೊಡಗು: 22-18
ರಾಮನಗರ: 27-21
ಹಾಸನ: 25-19
ಚಾಮರಾಜನಗರ: 25-21
ಚಿಕ್ಕಬಳ್ಳಾಪುರ: 26-20
ಕೋಲಾರ: 27-21
ತುಮಕೂರು: 26-21
ಉಡುಪಿ: 28-24
ಚಿಕ್ಕಮಗಳೂರು: 23-19
ದಾವಣಗೆರೆ: 28-22
ಚಿತ್ರದುರ್ಗ: 27-21
ಹಾವೇರಿ: 28-22
ಬಳ್ಳಾರಿ: 29-23
ಗದಗ: 28-22
ಕೊಪ್ಪಳ: 29-23
ರಾಯಚೂರು: 31-23
ಯಾದಗಿರಿ: 30-23
ವಿಜಯಪುರ: 28-22
ಬೀದರ್: 27-22
ಕಲಬುರಗಿ: 29-23
ಬಾಗಲಕೋಟೆ: 29-23