ಬೆಂಗ್ಳೂರು ಸೇರಿದಂತೆ ರಾಜ್ಯದ ವಾತಾವರಣದಲ್ಲಿ ಭಾರೀ ಬದಲಾವಣೆ

Public TV
2 Min Read
grahana copy

– ಎಚ್ಚರ ವಹಿಸದಿದ್ರೆ ಆರೋಗ್ಯದಲ್ಲಿ ಏರುಪೇರು

ಬೆಂಗಳೂರು: ಚಂದ್ರಗ್ರಹಣದ ಬಳಿಕ ರಾಜ್ಯದ ವಾತಾವರಣದಲ್ಲಿ ಭಾರೀ ಏರುಪೇರು ಉಂಟಾಗಿದೆ. ತೋಳ ಚಂದ್ರ ಗ್ರಹಣ ವಾತಾವರಣದಲ್ಲಿ ಆಪತ್ತು ತಂದೊಡ್ಡುತ್ತಿದೆ. ಶೀತ ಗಾಳಿ, ಮಂಜು, ಚಳಿ, ಉರಿ ಬಿಸಿಲು ಇದು ಯಾವುದು ವಾತಾವರಣದಿಂದ ಆದ ಬದಲಾವಣೆಯಲ್ಲ, ಬದಲಾಗಿ ತೋಳ ಗ್ರಹಣದಿಂದ ಆದ ಬದಲಾವಣೆಯಾಗಿದೆ. ಹೀಗಾಗಿ ಆರೋಗ್ಯದ ಕಡೆ ಗಮನ ಕೊಡದಿದರೆ ತೊಂದರೆ ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗುತ್ತಿದೆ.

LUNAR ECLIPSE

2019ರ ವರ್ಷಾಂತ್ಯದಲ್ಲಿ ಸೂರ್ಯಗ್ರಹಣ 2020ರ ವರ್ಷದ ಆರಂಭದಲ್ಲಿ ಚಂದ್ರಗ್ರಹಣ ಈ ಎರಡು ಗ್ರಹಣಗಳಿಂದ ವಾತಾವರಣದಲ್ಲಿ ಭಾರೀ ಏರುಪೇರಾಗಿದೆ. ಈಗ ತೋಳ ಚಂದ್ರಗ್ರಹಣ ಮುಗಿದ ಬಳಿಕ ಬೆಂಗಳೂರು ಸೇರಿದಂತೆ ರಾಜ್ಯದ ವಾತಾವರಣದಲ್ಲಿ ಭಾರೀ ಬದಲಾವಣೆಯಾಗುತ್ತಿದೆ. ಗ್ರಹಣದ ಬಳಿಕ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಯಾವ ಸಮಯದಲ್ಲಿ ಯಾವ ರೀತಿ ವಾತಾವರಣ ಇರುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಮುಂಜಾನೆ ಶೀತ ಗಾಳಿ ಇದ್ದರೆ, ಬೆಳಗ್ಗೆ 10 ಗಂಟೆ ಸುಮಾರಿಗೆ ಸೆಕೆ, ಬಿಸಿಲು, ಚಳಿ ಮತ್ತೆ ಸಂಜೆ ಆಗುತ್ತಿದ್ದಂತೆ ತಣ್ಣನೆ ಗಾಳಿ ಬೀಸುತ್ತಿದೆ. ಇದು ವಾತಾವರಣದಲ್ಲಿ ಆದ ಬದಲಾವಣೆಯಲ್ಲಿ ತೋಳ ಚಂದ್ರ ಗ್ರಹಣದಿಂದ ವಾತಾವರಣದಲ್ಲಿ ಆದ ಗಂಡಾಂತರ ಎಂಬ ಮಾತುಗಳು ಕೇಳಿ ಬರುತ್ತಿದೆ. ಜೀವ ಸಂಕುಲಕ್ಕೆ ವಾತಾವರಣದಲ್ಲಿ ಆದ ಬದಲಾವಣೆಯಿಂದಾಗಿ ಆಪತ್ತು ಕಾದಿದೆ ಎನ್ನಲಾಗುತ್ತಿದೆ.

sun

ರಾಜ್ಯದ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು, ಉತ್ತರ ಒಳನಾಡು ನಲ್ಲಿ ವರ್ಷ ಆರಂಭದ ತೋಳ ಚಂದ್ರಗ್ರಹಣದಿಂದ ಹವಾಮಾನದಲ್ಲಿ ಮಹತ್ತರವಾದ ಬದಲಾವಣೆಯಾಗಲಿದ್ದು ಆಪತ್ತು ಕಾದಿದೆ ಎನ್ನಲಾಗುತ್ತಿದೆ. ಜ್ವಾಲಾಮುಖಿಗಳು ಕಾಣಿಸಿಕೊಳ್ಳುತ್ತಾ ಇರೋದು ವಾತಾವರಣದ ಬದಲಾವಣೆಗೆ ಮುಖ್ಯ ಕಾರಣವಾಗಿದೆ. ಇದರಿಂದ ರಾಜ್ಯದ ದಕ್ಷಿಣ ಕರಾವಳಿ, ಉತ್ತರ ಕರಾವಳಿ ಭಾಗ ಸೇರಿದಂತೆ ನಾನಾಕಡೆ ವಾತಾವರಣದಲ್ಲಿ ಬದಲಾವಣೆ ಆಗಿ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತವೆ ಅಂತ ಭೂ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಚಂದ್ರಗ್ರಹಣದ ಬಳಿಕ ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಗೆ ಜ್ಯೋತಿಷಿಗಳು ಆತಂಕ ವ್ಯಕ್ತಪಡಿಸಿದ್ದು, ಗ್ರಹಣದಿಂದ ಬೆಂಗಳೂರು ಮತ್ತು ರಾಜ್ಯದಾದ್ಯಂತ ಭಾರೀ ಬದಲಾವಣೆ ಆಗಲಿದೆ. ಈ ಹಿಂದೆ ಸೂರ್ಯ ಗ್ರಹಣದಿಂದಾಗಿ ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚು ಆಯ್ತು, ಈಗ ಚಂದ್ರಗ್ರಹಣದಿಂದ ಜಲ ಸಂಕಷ್ಟ ಕಾದಿದ್ದು ಜಲಪ್ರವಾಹ ಆಗುವ ಸಾಧ್ಯತೆ ಇದೆ ಎಂದು ಆನಂದ್ ಗುರೂಜಿ ಗ್ರಹಣದಿಂದ ಆಗುವ ಆಪತ್ತನ್ನ ಬಿಚ್ಚಿಟ್ಟಿದ್ದಾರೆ.

winter

ಈ ಹಿಂದೆ ಉತ್ತರ ಕರ್ನಾಟಕದಲ್ಲಿ ಆದ ಪ್ರವಾಹ, ಮಡಿಕೇರಿ ಮತ್ತು ಕೊಡಗಿನಲ್ಲಿ ಆದ ಪ್ರಾಕೃತಿ ವಿಕೋಪ ಮತ್ತೆ ಮರುಕಳಿಸುಬಹುದು. ಅಷ್ಟೇ ಅಲ್ಲದೇ ವಾತಾವರಣ ಬದಲಾವಣೆಯಿಂದ ಸಾಂಕ್ರಾಮಿಕ ರೋಗಗಳು ಹರಡಬಹುದು ಎಂದು ಚಂದ್ರಗ್ರಹಣದ ಬಳಿಕ ವಾತಾವರಣದಲ್ಲಿ ಆದ ಬದಲಾವಣೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಗವಿಗಂಗಾಧರೇಶ್ವ ದೇವಾಲಯದ ಸೋಮ್ ಸುಂದರ್ ದೀಕ್ಷಿತ್ ಸ್ವಾಮೀಜಿಗಳು ಕೂಡ ಚಂದ್ರ ಗ್ರಹಣದ ನಂತರದ ವಾತಾವರಣದಲ್ಲಿ ಆಗುವ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿದ್ದು, ವರ್ಷದ ಆರಂಭದ ಚಂದ್ರಗ್ರಹಣ ಎಫೆಕ್ಟ್ ಖಂಡಿತಾ ಇದೆ. ಚಂದ್ರ ಆಂದರೆ ಜಲ ಗಂಡಾಂತರ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಜಲ ಪ್ರವಾಹ ಆಗಬಹುದು ಮತ್ತು ಜನರಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂಬ ಮಾತನ್ನ ಹೇಳಿದ್ದಾರೆ.

somasundardeekshit

ಒಟ್ಟಾರೆ ವರ್ಷದ ಆರಂಭದ ತೋಳ ಚಂದ್ರಗ್ರಹಣದಿಂದ ರಾಜ್ಯದ ವಾತಾವರಣದಲ್ಲಿ ಭಾರೀ ಏರುಪೇರಾಗುತ್ತಿದೆ. ಈ ಬದಲಾವಣೆಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಪ್ರಾಕೃತಿಕ ವಿಕೋಪ ಮತ್ತು ಜನರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ವಾತಾವರಣದಿಂದ ಆಗುವ ಆಪತ್ತನ್ನ ಪತ್ತೆ ಹಚ್ಚಿ ಸರ್ಕಾರ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೆ ಜೀವ ಸಂಕುಲ ಆಪತ್ತಿಂದ ಪಾರಾಗಬಹುದು.

Share This Article
Leave a Comment

Leave a Reply

Your email address will not be published. Required fields are marked *