ಬೆಂಗಳೂರು: ಒಡಿಶಾದಲ್ಲಿ (Odisha) ನಡೆದ ರೈಲುಗಳ ಡಿಕ್ಕಿಯಿಂದಾಗಿ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಕೊಲ್ಕತ್ತಾದ (Kolkata) ಹೌರಾದಲ್ಲಿ ಸಿಲುಕಿರುವ ಕನ್ನಡಿಗರನ್ನು ಕರೆತರಲು ರಾಜ್ಯ ಸರ್ಕಾರ ವಿಶೇಷ ವಿಮಾನದ ವ್ಯವಸ್ಥೆ ಮಾಡಿದೆ.
Advertisement
ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಸೂಚನೆ ಮೇರೆಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಅವರು ಕೊಲ್ಕತ್ತಾ ವಿಮಾನ ನಿಲ್ದಾಣದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕರೆತರಲು ವಿಮಾನದ ಟಿಕೆಟ್ ವ್ಯವಸ್ಥೆ ಮಾಡಿದ್ದಾರೆ. ಇಂಡಿಗೋ ವಿಮಾನವು ಭಾನುವಾರ ಮುಂಜಾನೆ 4.15ಕ್ಕೆ ಹೊರಟು ಬೆಂಗಳೂರಿಗೆ 6.50ಕ್ಕೆ ತಲುಪಲಿದೆ. ಈ ವಿಮಾನದಲ್ಲಿ ರಾಜ್ಯದ 32 ಮಂದಿ ವಾಲಿಬಾಲ್ ಆಟಗಾರರು ಬಂದಿಳಿಯಲಿದ್ದಾರೆ. ಅಲ್ಲದೆ ಆಟಗಾರರು ವಾಪಸ್ ಬರುವ ತನಕ ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: PublicTV Explainer: ರಕ್ಷಾ ‘ಕವಚ’ ಇದ್ದಿದ್ರೆ ಒಡಿಶಾ ರೈಲು ದುರಂತ ತಪ್ಪಿಸಬಹುದಿತ್ತೆ?
Advertisement
Advertisement
ಕೋಲ್ಕತ್ತಾದಲ್ಲಿ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಮಹಿಳಾ, ಪುರುಷ ಆಟಗಾರರು, ಕೋಚ್ ಸೇರಿದಂತೆ 32 ಮಂದಿ ಪಾಲ್ಗೊಂಡಿದ್ದರು. ಪಂದ್ಯ ಮುಗಿಸಿ ವಾಪಸ್ ಆಗುವಾಗ ಒಡಿಶಾದಲ್ಲಿ ರೈಲು ದುರಂತ ಸಂಭವಿಸಿದ್ದರಿಂದ ಕೋಲ್ಕತ್ತಾದಲ್ಲಿ ಈ ಆಟಗಾರರು ಸಂಕಷ್ಟಕ್ಕೆ ಸಿಲುಕಿದ್ದರು. ಇದನ್ನೂ ಓದಿ: ರೈಲ್ವೇ ಟ್ರ್ಯಾಕ್ ಮೇಲೆ ಟೈರ್ ಇಟ್ಟ ದುಷ್ಕರ್ಮಿಗಳು – ಲೋಕೋ ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ