ಹುಬ್ಬಳ್ಳಿ: ಮುಂದಿನ 18 ತಿಂಗಳಲ್ಲಿ ರಾಜ್ಯದಲ್ಲಿ ಐದು ಏರ್‌ಪೋರ್ಟ್ ನಿರ್ಮಾಣ ಮಾಡಲು ನಮ್ಮ ಸರ್ಕಾರ ಮುಂದಾಗಿದ್ದು, ದಾವಣಗೆರೆ, ಬಾಗಲಕೋಟೆ, ಬಾದಾಮಿ, ಕೊಪ್ಪಳ, ರಾಯಚೂರು, ಚಿಕ್ಕಮಗಳೂರಿನಲ್ಲಿ ಏರ್‌ಪೋರ್ಟ್ ನಿರ್ಮಾಣ ಆರಂಭಗೊಳ್ಳಲಿದೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
Advertisement
ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಜಾಗತಿಕ ಸಮಾವೇಶ ಪ್ರಾರಂಭವಾಗಲಿದೆ. ಕಳೆದ ಒಂದು ವರ್ಷದಿಂದ ತಯಾರಿ ಆರಂಭವಾಗಿದೆ. ನವೆಂಬರ್‌ನಲ್ಲಿ ಜಾಗತಿಕ ಸಮಾವೇಶ ನಡೆಯಲಿದೆ. ಕರ್ನಾಟಕಕ್ಕೆ ಅತೀ ಹೆಚ್ಚು ಬಂಡವಾಳ ಬಂದಿದೆ ಇದು ಹೆಮ್ಮೆಯ ವಿಷಯ. ನಾವು ಅನೇಕ ಕಡೆ ಕರ್ನಾಟಕದ ಕೈಗಾರಿಕಾ ನೀತಿ ತಿಳಿಸಿದ್ದೇವೆ. 5 ಲಕ್ಷ ಜನರಿಗೆ ಉದ್ಯೋಗ ಸಿಗುವ ಪ್ರಯತ್ನ ನಾವು ಮಾಡಿದ್ದೇವೆ. ಕರ್ನಾಟಕಕ್ಕೆ ಐದು ಲಕ್ಷ ಕೋಟಿ ರೂ. ಬರಲಿದೆ. ಕೈಗಾರಿಕೆಗಾಗಿ 50 ಸಾವಿರ ಎಕರೆ ಭೂಮಿ ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು ಸುತ್ತ ಮುತ್ತ 20 ಸಾವಿರ ಎಕರೆ, ಉಳಿದ ಭಾಗದಲ್ಲಿ ಕೈಗಾರಿಕೆಗಾಗಿ ಭೂಮಿ ವಶಪಡಿಸಿಕೊಳ್ಳಲಾಗಿದೆ. ಸ್ಥಗಿತಗೊಂಡಿರುವ ಕಾರ್ಖಾನೆಗಳನ್ನು ಮತ್ತೆ ಪ್ರಾರಂಭ ಮಾಡಲು ಮುಂದಾಗಿದ್ದೇವೆ. ಆದ್ರೆ ಬೆಂಗಳೂರಲ್ಲಿ ಹೊಸ ಕಾರ್ಖಾನೆ ನಿರ್ಮಾಣಕ್ಕೆ ನಾವು ಸಬ್ಸಿಡಿ ಕೊಡ್ತಿಲ್ಲ. ಬಿಯಾಂಡ್ ಬೆಂಗಳೂರು ಬರುವ ಕಾರ್ಖಾನೆಗಳಿಗೆ ನಾವು ಸೌಲಭ್ಯ ಕೊಡ್ತಿದ್ದೇವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಹು-ಧಾ ಮಹಾನಗರ ಪಾಲಿಕೆ ಸದಸ್ಯ, ಮೇಯರ್ ಗೌನ್ ಗುದ್ದಾಟ – ‘ಕೈ’ ಸದಸ್ಯರಿಗೆ ಹಿನ್ನಡೆ
Advertisement
The Global Investors Meet 2022 will see Karnataka receive over ₹5 lakh crore of investment, generating employment opportunities for over 5 lakh of our people.
We are Building for the World! pic.twitter.com/k5EA6DJN86
— Dr. Murugesh R Nirani (@NiraniMurugesh) October 28, 2022
Advertisement
ಹುಬ್ಬಳ್ಳಿಯಲ್ಲಿ ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ (FMCG) ಕಾರ್ಖಾನೆಗೆ ವಿಶೇಷ ರಿಯಾಯಿತಿ ಕೊಟ್ಟಿದ್ದೇವೆ. ಇದರ ಕ್ರೆಡಿಟ್ ಹೋಗಬೇಕಿರೋದು ಜಗದೀಶ್ ಶೆಟ್ಟರ್ ಹಾಗೂ ಬಸವರಾಜ ಬೊಮ್ಮಾಯಿಗೆ. ಧಾರವಾಡದ ಮುಮ್ಮಿಗಟ್ಟಿ ಬಳಿ FMCG ನಿರ್ಮಾಣ. ಇದು ದೇಶದಲ್ಲಿ ಮೊದಲ FMCG. ದಿನನಿತ್ಯದ ಬಳಕೆ ವಸ್ತುಗಳ ನಿರ್ಮಾಣ ಮಾಡುವ ಕಾರ್ಖಾನೆ. ಸರ್ಕಾರದಿಂದ ಶೇಕಡಾ 20 ರಷ್ಟು ರಿಯಾಯಿತಿ ಕೊಡಲಾಗಿದೆ. ಕೋವಿಡ್ ಆದ ಮೇಲೆ ಜಾಗತಿಕ ಸಮಾವೇಶ ನಡಿತಿರೋದು ಕರ್ನಾಟಕದಲ್ಲಿ ಮಾತ್ರ. ಜಾಗತಿಕ ಸಮಾವೇಶದಿಂದ ನಮ್ಮ ರಾಜ್ಯಕ್ಕೆ ಒಳ್ಳೆಯದಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: 67ನೇ ಕನ್ನಡ ರಾಜ್ಯೋತ್ಸವ – ಸುವರ್ಣ ಸೌಧದಲ್ಲಿ ಕೋಟಿ ಕಂಠ ಗಾಯನ