ಬೆಂಗಳೂರು: ದೇಶಕ್ಕಾಗಿ ಬಲಿದಾನ ಮಾಡಿದ ಹುತಾತ್ಮ ಯೋಧ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಪಾಠವನ್ನು ಮುಡಂಬಡಿತ್ತಾಯ ಸಮಿತಿ ಪಠ್ಯದಲ್ಲಿ ಸೇರಿಸಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಈ ಪಠ್ಯವನ್ನು ಕಿತ್ತು ಹಾಕಿತ್ತು. ಇದನ್ನು ಸಮರ್ಥಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆಯೇ? ಎಂದು ಪಠ್ಯ ಪರಿಷ್ಕರಣೆ ವಾಪಸ್‍ಗೆ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯನ್ನು ಬಿಜೆಪಿ ಟ್ವೀಟ್ ಮೂಲಕ ಟೀಕಿಸಿದೆ.
Advertisement
Advertisement
ಟ್ವೀಟ್‍ನಲ್ಲಿ ಏನಿದೆ?
ಹಿಂದಿನ ಪಠ್ಯಕ್ರಮ ಮುಂದುವರಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಹತ್ತನೇ ತರಗತಿಯ ಪಠ್ಯಪುಸ್ತಕದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಬಗ್ಗೆ ಇದ್ದ ಪಾಠವನ್ನು ಕಾಂಗ್ರೆಸ್ ಸರ್ಕಾರ ನೇಮಿಸಿದ ಸಮಿತಿ ತೆಗೆದುಹಾಕಿತ್ತು. ಇದನ್ನು ಸಮರ್ಥಿಸಿ ಪ್ರತಿಭಟನೆ ಮಾಡುತ್ತಿದ್ದೀರಾ? ಮುಡಂಬಡಿತ್ತಾಯ ಸಮಿತಿ ಪರಿಷ್ಕರಿಸಿದ ಪಠ್ಯಗಳಲ್ಲಿ, ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ 8 ಪಾಠಗಳಿದ್ದವು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅದಕ್ಕೂ ಕತ್ತರಿ ಹಾಕಲಾಯಿತು. ಆದರೆ ಬಿಜೆಪಿ ಸರ್ಕಾರ ನೇಮಿಸಿದ ಸಮಿತಿ ಕುವೆಂಪು ಅವರ 10 ಪಠ್ಯ ಅಳವಡಿಸಿದೆ. ಇದನ್ನೂ ಓದಿ: 3 ನಂಬರ್‌ನಿಂದ ನನಗೆ ಕಿರಿಕಿರಿ, ಧಮ್ಕಿ, ಬೆದರಿಕೆ ಕರೆ ಬರುತ್ತಿದೆ: ಮುತಾಲಿಕ್
Advertisement
ಕಾಂಗ್ರೆಸ್ ಪ್ರತಿಭಟನೆ ಕುವೆಂಪು ವಿರುದ್ಧವೇ? ನವ ಬೆಂಗಳೂರಿನ ನಿರ್ಮಾತೃ, ನಾಡಪ್ರಭು ಕೆಂಪೇಗೌಡ ಅವರ ಬಗ್ಗೆ ಇದ್ದ ಪಠ್ಯವನ್ನು ಕಾಂಗ್ರೆಸ್ ಸರ್ಕಾರ ತೆಗೆದುಹಾಕಿತ್ತು. ಈಗ ಅದೇ ಹಿಂದಿನ ಪಠ್ಯ ಮುಂದುವರಿಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದೆ. ಅಂದರೆ ಪಠ್ಯಪುಸ್ತಕದಲ್ಲಿ ಕೆಂಪೇಗೌಡರ ಚರಿತ್ರೆ ಇರಬಾರದೇ? ಭೂಕಂದಾಯದ ಪತ್ರಗಳಲ್ಲಿದ್ದ ಕನ್ನಡವನ್ನು ತೆಗೆದು ಪರ್ಷಿಯನ್ ಭಾಷೆ ಹೇರಿದ ಟಿಪ್ಪು ಬಗ್ಗೆ ಕನ್ನಡ ಭಾಷಾಭಿಮಾನಿ ಎಂದು ಬರಗೂರು ಸಮಿತಿ ವೈಭವೀಕರಿಸಿತ್ತು. ಇದನ್ನು ಸಮರ್ಥಿಸುವ ಸಲುವಾಗಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆಯೇ? ಮಾನ್ಯ ಡಿಕೆಶಿ ಹಾಗೂ ಸಿದ್ದರಾಮಯ್ಯನವರೇ ನಾಡಿನ ಹೆಮ್ಮೆಯ ಸಂಗೊಳ್ಳಿ ರಾಯಣ್ಣ, ರಾಣಿ ಚೆನ್ನಮ್ಮ ಹಾಗೂ ಒನಕೆ ಓಬವ್ವನ ಪಾಠಗಳನ್ನು ನಿಮ್ಮದೇ ಸರ್ಕಾರ ನೇಮಿಸಿದ್ದ ಸಮಿತಿ ಪಠ್ಯದಿಂದ ತೆಗೆದುಹಾಕಿತ್ತು. ಇದನ್ನು ಬೆಂಬಲಿಸಿ ಇಂದು ಪ್ರತಿಭಟನೆ ಮಾಡುತ್ತಿದ್ದೀರಾ? ಇದನ್ನೂ ಓದಿ: ರಾಜ್ಯಸಭೆ ಫೈಟ್‍ನಲ್ಲಿ ಟ್ವಿಸ್ಟ್ – ಕಾಂಗ್ರೆಸ್, ಜೆಡಿಎಸ್ ಮಧ್ಯೆ ‘ಆತ್ಮಸಾಕ್ಷಿ’ ಫೈಟ್
Advertisement
ದೇಶಕ್ಕಾಗಿ ಬಲಿದಾನ ಮಾಡಿದ ಹುತಾತ್ಮ ಯೋಧ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಪಾಠವನ್ನು ಮುಡಂಬಡಿತ್ತಾಯ ಸಮಿತಿ ಪಠ್ಯದಲ್ಲಿ ಸೇರಿಸಿತ್ತು.
ಆದರೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಈ ಪಠ್ಯವನ್ನು ಕಿತ್ತು ಹಾಕಿತ್ತು.
ಇದನ್ನು ಸಮರ್ಥಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆಯೇ?#ಉತ್ತರಿಸಿಕಾಂಗ್ರೆಸ್
— BJP Karnataka (@BJP4Karnataka) June 9, 2022
ದೇಶಕ್ಕಾಗಿ ಬಲಿದಾನ ಮಾಡಿದ ಹುತಾತ್ಮ ಯೋಧ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಪಾಠವನ್ನು ಮುಡಂಬಡಿತ್ತಾಯ ಸಮಿತಿ ಪಠ್ಯದಲ್ಲಿ ಸೇರಿಸಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಈ ಪಠ್ಯವನ್ನು ಕಿತ್ತು ಹಾಕಿತ್ತು. ಇದನ್ನು ಸಮರ್ಥಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆಯೇ? ಎಂದು ಬಿಜೆಪಿ ಟ್ವೀಟ್ ಮಾಡಿದೆ.