ರಾಜಸ್ಥಾನದಲ್ಲೂ ಕರ್ನಾಟಕ ಮಾದರಿ ಪಿಎಸ್‌ಐ ಹಗರಣ – ತಪ್ಪು ರಜಾ ಚೀಟಿ ಬರೆದು ಸಿಕ್ಕಿಬಿದ್ದ ಟಾಪರ್!

Public TV
2 Min Read
Rajasthan PSI Scam

ಜೈಪುರ: ರಾಜಸ್ಥಾನದಲ್ಲೂ (Rajasthan) ಕರ್ನಾಟಕ (Karnataka) ಮಾದರಿ ಪಿಎಸ್‌ಐ (PSI) ಹಗರಣವೊಂದು ನಡೆದಿದ್ದು, ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಮೋನಿಕಾ ಎಂಬುವವರು ಟಾಪರ್ ಆಗಿದ್ದ ಕೂತುಹಲಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ರಾಜಸ್ಥಾನದ ಝುಂಝುನು ನಗರದಲ್ಲಿ ನಡೆದಿದೆ.

ರಾಜಸ್ಥಾನ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ನೇಮಕಾತಿಯಲ್ಲಿ ನಡೆದಿದ್ದ ಅಕ್ರಮವೊಂದು, ಪಿಎಸ್‌ಐ ಬರೆದಿದ್ದ ರಜಾಚೀಟಿಯ ತಪ್ಪು ಅಕ್ಷರಗಳಿಂದ ಬೆಳಕಿಗೆ ಬಂದಿದೆ. ಹೀಗಾಗಿ ಅಕ್ರಮವಾಗಿ ನೇಮಕಗೊಂಡಿದ್ದ ಪಿಎಸ್‌ಐ ಮೋನಿಕಾ ಹಾಗೂ ಆಕೆಯು ಪರೀಕ್ಷೆಯಲ್ಲಿ ಬ್ಲೂಟೂತ್ ಮೂಲಕ ಆಕೆಗೆ ಉತ್ತರ ಹೇಳಿಕೊಟ್ಟಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.ಇದನ್ನೂ ಓದಿ:ಹೇಮಾವತಿ ಕೆನಾಲ್ ಕದನ | ಮಂತ್ರಿ ಮಗನಿಗೆ ಬೆದರಿಕೆ ಹಾಕೋಕಾಗುತ್ತಾ? – ರಾಜಣ್ಣ ಪುತ್ರನಿಗೆ ಕುಣಿಗಲ್‌ ರಂಗನಾಥ್‌ ತಿರುಗೇಟು

2021ರ ಸಬ್ ಇನ್ಸ್‌ಪೆಕ್ಟರ್‌ ನೇಮಕಾತಿ ಪರೀಕ್ಷೆಯಲ್ಲಿ ಮೋನಿಕಾ ಎಂಬಾಕೆ ಹಿಂದಿ ಪರೀಕ್ಷೆಯಲ್ಲಿ 200ಕ್ಕೆ 184 ಹಾಗೂ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ 200ಕ್ಕೆ 161 ಅಂಕ ಹಾಗೂ ಸಂದರ್ಶನದಲ್ಲಿ 15 ಅಂಕ ಪಡೆದಿದ್ದರು. ಈ ಮೂಲಕ 34ನೇ ರ‍್ಯಾಂಕ್ ಗಳಿಸಿದ್ದರು. ಬಳಿಕ ಅವರನ್ನು ಟ್ರೈನಿ ಪಿಎಸ್‌ಐ ಆಗಿ ನೇಮಿಸಿಕೊಳ್ಳಲಾಗಿತ್ತು.

ತರಬೇತಿಗೆ ಸೇರಿದ ಬಳಿಕ 2024ರ ಜೂ.5 ರಿಂದ ಜು.2ರವರೆಗೆ ವೈದ್ಯಕೀಯ ರಜೆಯಲ್ಲಿದ್ದರು, ಆದರೆ ಯಾವುದೇ ವೈದ್ಯಕೀಯ ದಾಖಲೆಗಳನ್ನು ಒದಗಿಸಿರಲಿಲ್ಲ. ಹೀಗಾಗಿ ಪುನಃ ಕರ್ತವ್ಯಕ್ಕೆ ಹಾಜರಾಗಲು ಆಕೆ ನ.11ರಂದು ಕೈಬರಹದಲ್ಲಿ ಬರೆದು ರಜಾಚೀಟಿ ಸಲ್ಲಿಸಿದ್ದರು. ಆಗ ಅದರಲ್ಲಿದ್ದ ಅಕ್ಷರದೋಷಗಳನ್ನು ಕಂಡು ಹಿರಿಯ ಅಧಿಕಾರಿಗಳು ತಬ್ಬಿಬ್ಬಾಗಿದ್ದಾರೆ.

ಹಿಂದಿ ಭಾಷೆಯಲ್ಲಿದ್ದ ಕೇವಲ 20 ಸಾಲುಗಳ ಅರ್ಜಿಯಲ್ಲಿ ‘ನಾನು’, ‘ಇನ್ಸ್ಪೆಕ್ಟರ್’, ‘ಡಾಕ್ಯುಮೆಂಟ್’, ‘ಪ್ರೊಬೆಷನರ್’, ‘ಝುಂಝುನು’, ಇತ್ಯಾದಿ ಸರಳ ಪದಗಳೇ ತಪ್ಪಾಗಿದ್ದವು. ರಜಾಚೀಟಿಯಲ್ಲಿ ಭಾರೀ ಪ್ರಮಾಣದ ಕಾಗುಣಿತ ದೋಷ ಪತ್ತೆಯಾಗಿದ್ದನ್ನು ಕಂಡ ಅಧಿಕಾರಿಗಳು ಅನುಮಾನಗೊಂಡು ಪರಿಶೀಲಿಸಿದಾಗ ಮೋನಿಕಾಳ ಮೋಸ ಬೆಳಕಿಗೆ ಬಂದಿದೆ.

ಮೋನಿಕಾ ಸ್ವಂತವಾಗಿ ಉತ್ತರ ಬರೆಯದೇ ಬ್ಲೂಟೂತ್ ಸಾಧನ ಬಳಸಿ ಆಕೆ ನಕಲು ಮಾಡಿದ್ದಳು. ಪರೀಕ್ಷಾ ಅಕ್ರಮದ ಮಾಸ್ಟರ್‌ಮೈಂಡ್ ಪೌರವ್ ಕಲೀರ್, ಮೋನಿಕಾಗೆ ಉತ್ತರಗಳನ್ನು ಪೂರೈಸಲು 15 ಲಕ್ಷ ರೂ. ಪಡೆದಿದ್ದ. ಆತನೇ ಬ್ಲೂಟೂತ್ ಮೂಲಕ ಆಕೆಗೆ ಉತ್ತರ ಹೇಳಿಕೊಟ್ಟಿದ್ದ ಎಂದು ಗೊತ್ತಾಗಿದೆ.ಇದನ್ನೂ ಓದಿ:ಕಲಬುರಗಿಯಲ್ಲಿ ಬಾಣಂತಿ, ನವಜಾತ ಶಿಶು ಸಾವು – ಕುಟುಂಬಸ್ಥರಿಂದ ಆಸ್ಪತ್ರೆ ಗಾಜು ಪುಡಿ ಪುಡಿ, ಪೀಠೋಪಕರಣ ಧ್ವಂಸ

Share This Article