Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರಾಜ್ಯಾದ್ಯಂತ ಮುಂಗಾರು ಅಬ್ಬರಕ್ಕೆ 8 ಸಾವು, ವಾರದಿಂದ ಜನಜೀವನ ಸಂಪೂರ್ಣ ಜರ್ಜರಿತ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bagalkot | ರಾಜ್ಯಾದ್ಯಂತ ಮುಂಗಾರು ಅಬ್ಬರಕ್ಕೆ 8 ಸಾವು, ವಾರದಿಂದ ಜನಜೀವನ ಸಂಪೂರ್ಣ ಜರ್ಜರಿತ

Bagalkot

ರಾಜ್ಯಾದ್ಯಂತ ಮುಂಗಾರು ಅಬ್ಬರಕ್ಕೆ 8 ಸಾವು, ವಾರದಿಂದ ಜನಜೀವನ ಸಂಪೂರ್ಣ ಜರ್ಜರಿತ

Public TV
Last updated: August 7, 2019 10:00 pm
Public TV
Share
4 Min Read
mdk rain 1 1
SHARE

– ಪ್ರವಾಹ ಬಾಧಿತ ಜಿಲ್ಲೆಗಳಲ್ಲಿ ಶಾಲಾ ಕಾಲೇಜಿಗೆ ರಜೆ ಮುಂದುವರಿಕೆ

ಬೆಂಗಳೂರು: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಪಶ್ಚಿಮ ತೀರದ ರಾಜ್ಯಗಳಲ್ಲಿ ಮುಂಗಾರ ಆರ್ಭಟ ಮುಂದುವರಿದಿದೆ. ಭಾರೀ ವರ್ಷಧಾರೆ, ಪ್ರವಾಹದಿಂದಾಗಿ ರಾಜ್ಯಾದ್ಯಂತ 8 ಮಂದಿ ಜಲಾಸುರನಿಗೆ ಬಲಿಯಾಗಿದ್ದಾರೆ.

ಬೆಳಗಾವಿ, ಚಿಕ್ಕೋಡಿ, ರಾಯಚೂರು, ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ, ಮಂಗಳೂರು, ಉಡುಪಿ, ಶಿವಮೊಗ್ಗ ಹಾಗೂ ಕೊಡಗಿನಲ್ಲಿ ಭಾರೀ ಅವಾಂತರ ಸೃಷ್ಟಿಯಾಗಿದೆ. ಚಿಕ್ಕಮಗಳೂರಿನಲ್ಲಿ 5 ದಿನ, ಬೆಳಗಾವಿ, ಧಾರವಾಡ, ಕೊಡಗು, ಮಂಗಳೂರು, ಹಾವೇರಿ, ಹಾಸನ, ಶಿವಮೊಗ್ಗದಲ್ಲಿ ಎರಡು ದಿನ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಹುಬ್ಬಳ್ಳಿಯಲ್ಲಿ 300ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಪ್ರವಾಹ ಬಾಧಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ ಜೋರಾಗಿದ್ದು, ನಿಧಾನವಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು ಹೆಜ್ಜೆ ಹಾಕಿದ್ದಾರೆ. ಎಲ್ಲಾ ಕಡೆ ಕರೆಂಟ್ ವ್ಯತ್ಯಯವಾಗಿದ್ದು, ಸುತ್ತಲೂ ನೀರಿದ್ದರೂ ಕುಡಿಯುವುದಕ್ಕೆ ನೀರು ಇಲ್ಲದಂತಾಗಿದೆ.

vlcsnap 2019 08 07 15h49m16s202

ಬೆಳಗಾವಿಯಲ್ಲಿ ಕೃಷ್ಣಾ ನದಿ ಆರ್ಭಟ ತಣ್ಣಗಾಗೋ ಲಕ್ಷಣವೇ ಕಾಣುತ್ತಿಲ್ಲ. ಆಶ್ಲೇಷ ಮಳೆಗೆ ಬೆಳಗಾವಿಯಲ್ಲಿ ಇವತ್ತು ಇಬ್ಬರು ಬಲಿಯಾಗಿದ್ದಾರೆ. ಬೆಳಗಾವಿ ತಾಲೂಕಿನ ಚಂದನಹೊಸೂರಿನಲ್ಲಿ ಗೋಡೆ ಕುಸಿದು ಯಲ್ಲೇಶ್ ಬಣ್ಣಣವರ, ಗೋಕಾಕ್ ಲೋಳಸೂರ ಗ್ರಾಮದಲ್ಲಿ ಹೊಳೇ ನೀರಿನ ಪ್ರಭಾವದಿಂದ 22 ವರ್ಷದ ಪದ್ಮಾವತಿ ಸಾವಿಗೀಡಾಗಿದ್ದಾರೆ. ಮಾರ್ಕಂಡೇಯ ನದಿಯಲ್ಲಿ ಹೆಣಗಳು ತೇಲಿ ಬರ್ತಿವೆ. ಅಥಣಿಯ ತೀರ್ಥ ಗ್ರಾಮದ ಬಳಿಯಲ್ಲಿ 12 ವರ್ಷದ ಬಸವರಾಜ ಮಾನಿಂಗ ಕಾಂಬಳೆ ರಸ್ತೆ ದಾಟುವಾಗ ಕೊಚ್ಚಿ ಹೋಗಿದ್ದಾನೆ. ಬಾಲಕನ ರಕ್ಷಣೆಗೆ ಇಳಿದವರು ನದಿಯಿಂದ ಹೊರ ಬಾರಲಾಗದೆ ಪರದಾಡಿದ್ದಾರೆ. ಸ್ಥಳೀಯರು ಕೂಡಲೆ ಅವರತ್ತ ಹಗ್ಗ ಎಸೆದು ಮೂವರ ರಕ್ಷಣೆ ಮಾಡಿದ್ದಾರೆ. ಗೋಕಾಕ್ ಫಾಲ್ಸ್ ಭಾರೀ ರಭಸದಲ್ಲಿ ಭೋರ್ಗರೆಯುತ್ತಿದೆ.

ಅಥಣಿ ತಾಲೂಕಿನ ಅವರಖೇಡ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ಇನ್ನು ನೀರಿನ ಮಧ್ಯೆ ಶ್ರೀಶೈಲ್ ಧರಿಗೌಡರ್ ಕುಟುಂಬ ಸಿಲುಕಿಕೊಂಡಿತ್ತು. ನೀರಿನಲ್ಲೆ ಟ್ರ್ಯಾಕ್ಟರ್ ಮುಖಾಂತರ ಕುಟುಂಬಸ್ಥರನ್ನ ಸ್ಥಳೀಯರು ಶಿಫ್ಟ್ ಮಾಡಿದರು.

vlcsnap 2019 08 07 15h49m37s171 e1565173390528

ಕೊಲ್ಹಾಪುರ ನಗರದ ಶಹಾಪುರಿಯಲ್ಲಿ ರಕ್ಷಣಾ ಕಾರ್ಯಾಚರಣೆ ವೇಳೆ ಬೋಟ್ ಪಲ್ಟಿಯಾಗಿತ್ತು. 5-6 ಜನರನ್ನು ಎನ್‍ಡಿಆರ್ ಎಫ್ ಸಿಬ್ಬಂದಿ ಕರೆತರರುವಾಗ ಘಟನೆ ನಡೆದಿದೆ. ಚಿಕ್ಕೋಡಿಯ ಸದಲಗಾ ಪಟ್ಟಣದ ಬಳಿ ಇರುವ ದೂದಗಂಗಾ ನದಿ ನಡುಗಡ್ಡೆಯಲ್ಲಿ 100ಕ್ಕೂ ಹೆಚ್ಚು ಕುಟುಂಬ, 150 ಕ್ಕೂ ಹೆಚ್ಚು ಜಾನುವಾರಗಳು ಸಿಲುಕಿಕೊಂಡಿವೆ. ದೋಣಿಯಿಂದ ಆಗಲ್ಲ. ಹೆಲಿಕಾಪ್ಟರ್‍ನಲ್ಲೇ ಲಿಫ್ಟ್ ಮಾಡಬೇಕಾದ ಪರಿಸ್ಥಿತಿ ಇದೆ. ಜೋಡಕುರಳಿ ಗ್ರಾಮದ ಸಂತುಬಾಯಿ ಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿ ಹೋಗ್ತಿದ್ದ ಯುವಕನನ್ನು ಜನ ರಕ್ಷಿಸಿದ್ದಾರೆ. ಹಿರಣ್ಯಕೇಶಿ ನದಿ ತೀರದಲ್ಲೂ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ನದಿ ದಡದ ಸಂಕೇಶ್ವರ ಪಟ್ಟಣದ 500 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಜನ ನಿಧಾನವಾಗಿ ಸ್ಥಳಾಂತರವಾಗ್ತಿದ್ದಾರೆ. ರಾಯಭಾಗದ ಭಾವನಗೌಂದತಿ ಗ್ರಾಮದ ಸುಗಂಧಾ ದೇವಿಗೆ ಶ್ರಾವಣ ಮಾಸದ ಪೂಜೆ ಸಲ್ಲಿಸಲು ಹೋಗಿದ್ದ ಭಕ್ತರಿಗೆ ಜಲಕಂಟಕ ಕಾಡಿದೆ. ಹುಕ್ಕೇರಿ ತಾಲೂಕಿನ ಕೊಟಬಾಗಿಯ ದುರ್ಗಾ ದೇವಿ ದೇವಸ್ಥಾನ ಹಾಗೂ ಹೊಳೆಮ್ಮ ದೇವಸ್ಥಾನ ಜಲಾವೃತವಾಗಿದೆ.

ಬಾಗಲಕೋಟೆ, ರಾಯಚೂರು, ಯಾದಗಿರಿ, ಗದಗನಲ್ಲೂ ಪ್ರವಾಹದ ಅದೇ ಚಿತ್ರಣ. ಅಪಾಯಕಾರಿಯಾಗಿ ಹರಿಯುತ್ತಿರುವ ಕೃಷ್ಣಾ ನದಿಯಿಂದಾಗಿ ಬಾಗಲಕೋಟೆಯ ಜಮಖಂಡಿ ತಾಲೂಕಿನ ಮತ್ತಷ್ಟು ಗ್ರಾಮಗಳು ಜಲಾವೃತಗೊಳ್ಳುತ್ತಿವೆ. ಹೀಗಾಗಿ ಜಿಲ್ಲಾಡಳಿತ ಪ್ರವಾಹ ಪ್ರದೇಶದಡಿ ಸಿಲುಕುವ ಜನರನ್ನು ಬೋಟ್ ಮೂಲಕ ಶಿಫ್ಟ್ ಮಾಡಲಾಗುತ್ತದೆ. ಆದರೆ ಪ್ರವಾಹಪೀಡಿತ ಜನರಿಗೆ ಸರಿಯಾದ ಸೌಲಭ್ಯ ಕಲ್ಪಿಸಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸ್ತಿದ್ದಾರೆ.

BGK RAIN 2

ರಾಯಚೂರಿನ ದೇವದುರ್ಗದ ಗೂಗಲ್ ಗ್ರಾಮದ ಅಲ್ಲಮ ಪ್ರಭು ದೇವಸ್ಥಾನದ ಗರ್ಭಗುಡಿಗೆ ನಾರಾಯಣಪುರ ಡ್ಯಾಂ ನೀರು ನುಗ್ಗಿದೆ. ನೀರಿನಲ್ಲೆ ಪೂಜಾ ಕೈಂಕರ್ಯಗಳು ನಡೆದಿವೆ. ರಾತ್ರಿಯಿಂದ 4.04 ಲಕ್ಷ ಕ್ಯೂಸೆಕ್ಸ್ ನೀರು ಹರಿಬಿಡಲಾಗುತ್ತಿರುವ ಕಾರಣ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೆಜ್ ಮುಳುಗಡೆಯಾಗಿದೆ. ಜಿಲ್ಲೆಯ 54 ಗ್ರಾಮಗಳಿಗೆ ಪ್ರವಾಹ ಭೀತಿ ನಿರ್ಮಾಣವಾಗಿದೆ. ಎನ್‍ಡಿಆರ್ ಎಫ್, ಮಿಲಿಟರಿ ಪಡೆಗಳಿಂದ ಕಾರ್ಯಾಚರಣೆ ನಡೀತಿದೆ. ಅರಶಿಣಿಗಿ, ಕಾಡ್ಲೂರು ಸೇರಿ ವಿವಿಧೆಡೆ ಮೊಸಳೆಗಳು ಜಮೀನಿಗೆ ನುಗುತ್ತಿದೆ. ಯಾದಗಿರಿಯ ಸುರಪುರದ ಮುಷ್ಠಳ್ಳಿ ಗ್ರಾಮದ ಗಡ್ಡಿ ರಾಮಮಂದಿರ ಮುಳುಗಿದೆ.

ಕಾರವಾರ, ಮಂಗಳೂರು, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಮಡಿಕೇರಿಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ದಿನದಿಂದ ದಿನಕ್ಕೆ ಮಳೆ ಆರ್ಭಟ ಹೆಚ್ಚಾಗುತ್ತಲೇ ಇದೆ. ಜನರಲ್ಲಿ ಆತಂಕ ಮನೆ ಮಾಡುತ್ತಿದ್ದು, ನದಿಗಳೆಲ್ಲಾ ಭೀತಿ ಮೂಡಿಸುವಂತೆ ಸದ್ದು ಮಾಡಿ ಹರಿಯುತ್ತಿವೆ. ಚಿಕ್ಕಮಗಳೂರಿನ ಶೃಂಗೇರಿಯಿಂದ ಇತರೆ ಗ್ರಾಮಗಳಿಗೆ ಸಂಪರ್ಕ ಕಡಿವಾಗಿದೆ. ಮೂಡಿಗೆರೆಯ ಹಂತೂರು ಗ್ರಾಮದಲ್ಲಿ ನೆರೆಯಲ್ಲಿ ಸಿಲುಕಿದ್ದ 9 ಮಂದಿಯನ್ನು ರಕ್ಷಿಸಲಾಗಿದೆ. ಚಾರ್ಮಾಡಿ ಘಾಟ್‍ನಲ್ಲಿ ಗುಡ್ಡ ಕುಸಿತ ಮುಂದುವರಿದಿದೆ. ಹೊರನಾಡು ರಸ್ತೆ ಸಂಪೂರ್ಣ ಬಂದ್ ಆಗಿದೆ. ಕಡೂರು ತಾಲೂಕಿನ ಸರಸ್ವತಿಪುರ ಬಳಿ ಬಸ್ ಪಲ್ಟಿಯಾಗಿ, 10 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮುಳ್ಳಯ್ಯನ ಗಿರಿಯ ಹೊನ್ನಮ್ಮನಹಳದಲ್ಲಿ ನೀರೋ ನೀರು. ಚಿಕ್ಕಮಗಳೂರಿನಿಂದ ಹಾಸನದತ್ತ ಮಳೆ ಮುಖಮಾಡಿದೆ. ಬೇಲೂರಿನ ಐತಿಹಾಸಿಕ ವಿಷ್ಣು ಸಮುದ್ರಕೆರೆ ಭರ್ತಿಯಾಗಿ ಉಕ್ಕಿ ಹರಿದಿದೆ. ಹತ್ತಾರು ಎಕರೆಯ ಭತ್ತ ನೀರು ಪಾಲಾಗಿದೆ. ಅಗಸರಹಳ್ಳಿ ಸೇತುವೆ ಮುಳುಗಡೆಯಾಗಿದೆ. ಸಕಲೇಶಪುರ ಹೊಳೇಮಲ್ಲೇಶ್ವರ ದೇವಾಲಯ ಜಲಾವೃತವಾಗಿದೆ.

CKM Rain sa

ಶಿವಮೊಗ್ಗದಲ್ಲಿ ತುಂಗಾನದಿ ಭರ್ತಿಯಾಗಿದೆ. ಇಮಾಂ ಬಡಾ, ಕುಂಬಾರಗುಂಡಿ, ಮಂಡಕ್ಕಿ ಭಟ್ಟಿಯ ಜನರನ್ನು ದೋಣಿಯಲ್ಲಿ ಕರೆತರಲಾಗಿದೆ. ಶಾಂತಮ್ಮ ಲೇಔಟ್‍ನಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ನೀರುಗ ನುಗ್ಗಿದೆ. ಡಿಸಿ, ಮಹಾನಗರ ಪಾಲಿಕೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ರು. ಕೋಟೆ ರಸ್ತೆಯ ಶಿವಪ್ಪ ನಾಯಕ ಅರಮನೆ ಆವರಣದಲ್ಲಿ ಮರ ಉರುಳಿದೆ.

ಕೊಡಗಿನಲ್ಲಿ ಪ್ರವಾಹ ತಗ್ಗಿಲ್ಲ. ಆತಂಕವೂ ದೂರ ಆಗಿಲ್ಲ. ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ವಿರಾಜಪೇಟೆ, ಸೋಮಾವಾರಪೇಟೆಯಲ್ಲಿ ಕಾಡು ಗ್ರಾಮದಲ್ಲಿ 8ಕ್ಕೂ ಹೆಚ್ಚು ಮನೆಗಳು ಜಲಾವೃತ ವಾಗೋ ಹಂತಕ್ಕೆ ತಲುಪಿವೆ. ಸ್ಥಳಾಂತರಕ್ಕೆ ಹೋದ ಅಧಿಕಾರಿಗಳ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧರ್ಮಸ್ಥಳ ಬಳಿ ನೇತ್ರಾವತಿ ಸ್ನಾನಘಟ್ಟ ಮುಳುಗಡೆಯಾಗಿದ್ದು ಮಳೆನೀರು ಅಬ್ಬರಿಸುತ್ತಾ ನುಗ್ಗಿ ಬರುತ್ತಿರುವುದು ಭಕ್ತರಲ್ಲಿ ಅಚ್ಚರಿ ಮೂಡಿಸಿದೆ. ಉಡುಪಿಯ ಬ್ರಹ್ಮಾವರದ ಬೈಕಾಡಿ, ಉಪ್ಪೂರು, ಕುಂದಾಪುರದ ಶಿರಿಯಾರ ಸಕ್ಕಟ್ಟು ಪ್ರದೇಶಗಳಲ್ಲಿ ನೆರೆಯ ಭೀತಿ ಎದುರಾಗಿತ್ತು. ಆದ್ರೆ ಮಳೆ ಕೊಂಚ ಬಿಡುವು ನೀಡಿರುವುದರಿಂದ ನೆರೆ ತಗ್ಗುತಿದೆ.

ckm hassan rain

TAGGED:Floodsheavy rainnorth karnatakaPublic TVಕೃಷ್ಣಾ ನದಿಪಬ್ಲಿಕ್ ಟಿವಿಬೆಳಗಾವಿಮಳೆರಜೆಶಾಲಾ ಕಾಲೇಜುಹೇಮಾವತಿ
Share This Article
Facebook Whatsapp Whatsapp Telegram

Cinema news

3 Idiots
10 ವರ್ಷಗಳ ಬಳಿಕವೂ ಅದೇ ಪಾತ್ರಗಳೊಂದಿಗೆ ಬರಲಿದೆ 3 Idiots ಸೀಕ್ವೆಲ್
Bollywood Cinema Latest Top Stories
nikhil kumaraswamy actor chetan
ಡಾ.ರಾಜ್‌ಕುಮಾರ್ ಎಂದರೆ ಆರು ಕೋಟಿ ಕನ್ನಡಿಗರ ಭಾವನೆ: ನಟ ಚೇತನ್‌ಗೆ ನಿಖಿಲ್ ಕುಮಾರಸ್ವಾಮಿ ಕಿಡಿ
Bengaluru City Cinema Latest Sandalwood Top Stories
Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories

You Might Also Like

soraba bjp worker
Crime

ಶಿವಮೊಗ್ಗದ ಸೊರಬದಲ್ಲಿ ಬಿಜೆಪಿ ಮುಖಂಡನ ಪತ್ನಿ ನೇಣಿಗೆ ಶರಣು – ಪತಿ ಬಂಧನ

Public TV
By Public TV
3 hours ago
Donovan Ferreira
Cricket

ಪಂಜಾಬ್‌ ಗೆಲುವಿನ ಓಟಕ್ಕೆ ಬ್ರೇಕ್‌ – ರಾಜಸ್ಥಾನ್‌ಗೆ 6 ವಿಕೆಟ್‌ಗಳ ಜಯ

Public TV
By Public TV
3 hours ago
Apekshaben Sonis victory
Latest

100% ಮುಸ್ಲಿಂ ಮತದಾರರ ವಾರ್ಡ್‌ನಲ್ಲಿ ಸ್ವತಂತ್ರ ಹಿಂದೂ ಅಭ್ಯರ್ಥಿಗೆ ಗೆಲುವು

Public TV
By Public TV
3 hours ago
01 22
Big Bulletin

ಬಿಗ್‌ ಬುಲೆಟಿನ್‌ 28 April 2026 ಭಾಗ-1

Public TV
By Public TV
4 hours ago
02 22
Big Bulletin

ಬಿಗ್‌ ಬುಲೆಟಿನ್‌ 28 April 2026 ಭಾಗ-2

Public TV
By Public TV
4 hours ago
03 20
Big Bulletin

ಬಿಗ್‌ ಬುಲೆಟಿನ್‌ 28 April 2026 ಭಾಗ-3

Public TV
By Public TV
4 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?