ಅಸನಿ ಚಂಡಮಾರುತದ ಆರ್ಭಟ ಮುಂದುವರಿದಿದ್ದು, ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಮಳೆಯ ವಾತಾವರಣ ಮುಂದುವರಿಯಲಿದೆ. ಇನ್ನೂ ಕೆಲ ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಬಿಸಿಲು ಸಹಿತ ಮಳೆಯಾಗಲಿದೆ. ಇನ್ನುಳಿದ ಕೊಡಗು, ಕೊಪ್ಪಳ, ಕೋಲಾರ, ಕಾರವಾರ, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ.
Advertisement
Advertisement
ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬೆಳಿಗ್ಗೆ ಮೋಡಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆಗೆ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಶಿವಮೊಗ್ಗ, ಬೆಳಗಾವಿ, ಮೈಸೂರು, ಮಂಡ್ಯ, ರಾಮನಗರ, ಹಾಸನ, ಚಾಮರಾಜನಗರ, ತುಮಕೂರು, ಬಳ್ಳಾರಿ ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣ ಮುಂದುವರಿಯಲಿದೆ. ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ತೆಳು ಬಿಸಿಲಿನ ವಾತಾವರಣ ಇರಲಿದ್ದು, ಗರಿಷ್ಠ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.
Advertisement
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 25-21
ಮಂಗಳೂರು: 29-26
ಶಿವಮೊಗ್ಗ: 28-23
ಬೆಳಗಾವಿ: 29-23
ಮೈಸೂರು: 27-22
ಮಂಡ್ಯ: 27-22
ಕೊಡಗು: 21-18
ರಾಮನಗರ: 27-22
ಹಾಸನ: 25-21
ಚಾಮರಾಜನಗರ: 27-22
ಚಿಕ್ಕಬಳ್ಳಾಪುರ: 26-21
ಕೋಲಾರ: 26-22
ತುಮಕೂರು: 27-22
ಉಡುಪಿ: 29-26
ಕಾರವಾರ: 31-28
ಚಿಕ್ಕಮಗಳೂರು: 24-20
ದಾವಣಗೆರೆ: 29-23
ಚಿತ್ರದುರ್ಗ: 28-22
ಹಾವೇರಿ: 29-23
ಬಳ್ಳಾರಿ: 32-25
ಗದಗ: 31-23
ಕೊಪ್ಪಳ: 32-24
ರಾಯಚೂರು: 36-27
ಯಾದಗಿರಿ: 37-27
ವಿಜಯಪುರ: 37-25
ಬೀದರ್: 37-26
ಕಲಬುರಗಿ: 38-27
ಬಾಗಲಕೋಟೆ: 34-25