ಬೆಂಗಳೂರು:2018-19 ಸಾಲಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕ ರಾಜ್ಯ ಮುಕ್ತ ವಿವಿ ಪುನರಾರಂಭಕ್ಕೆ ಕೊನೆಗೂ ಅನುಮತಿ ದೊರೆತು ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಆಶಾಕಿರಣ ಮೂಡಿದೆ.
2013ರಿಂದ ಮಾನ್ಯತೆ ರದ್ದಾಗಿ ಸ್ಥಗಿತಗೊಂಡಿದ್ದ ಕರ್ನಾಟಕ ರಾಜ್ಯ ಮುಕ್ತ ವಿವಿಗೆ ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ)ದಿಂದ ಮಾನ್ಯತೆ ಸಿಕ್ಕಿದೆ. ಸಾಕಷ್ಟು ಹೋರಾಟದ ನಂತರ ಮುಕ್ತ ವಿವಿ ಆರಂಭಕ್ಕೆ ಯುಜಿಸಿ ಅನುಮತಿ ನೀಡಿದೆ.
Advertisement
ಇದೇ ವಿಚಾರವಾಗಿ ಜೂನ್ 4ರಂದು ಮೈಸೂರಿನಲ್ಲಿ ಮಾನವ ಸಂಪನ್ಮೂಲ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿ ಸಭೆ ನಡೆದಿತ್ತು. ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಹಾಗೂ ಲೋಕಸಭೆ ಹಾಗೂ ರಾಜ್ಯಸಭೆಯ 16 ಮಂದಿ ಸಂಸದರು ಭಾಗವಹಿಸಿದ್ದರು. ಸಭೆಯಲ್ಲಿ ವಿವಿ ಎದುರಿಸುತ್ತಿರುವ ಸಮಸ್ಯೆಯನ್ನು ಕುಲಪತಿ ವಿವರವಾಗಿ ಪ್ರಸ್ತುತ ಪಡಿಸಿದ್ದರು.
Advertisement
2013, 14ರಿಂದ ವಿ.ವಿ.ಗೆ ಮಾನ್ಯತೆಯಿಲ್ಲ. ಇಲ್ಲಿ ವ್ಯಾಸಂಗ ಮಾಡಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಮಾನ್ಯತೆ ನೀಡುವಂತೆ ಹೈಕೋರ್ಟ್ ಸೂಚನೆ ನೀಡಿದ್ದರೂ ಆಯೋಗ ಪಾಲಿಸುತ್ತಿಲ್ಲ ಎಂದು ಕಟುವಾಗಿ ತಮ್ಮ ವಾದ ಮಂಡಿಸಿದ್ದರು. 2013,14 ಹಾಗೂ 2015,16 ಸಾಲಿಗೂ ಮಾನ್ಯತೆ ನೀಡಲು ಕೋರಿ ಸಮಿತಿಯ ಅಧ್ಯಕ್ಷರಿಗೆ ಮನವಿ ಪತ್ರವನ್ನೂ ನೀಡಿದ್ದರ ಕಾರಣ ಮಾನ್ಯತೆ ದೊರೆಯುವಲ್ಲಿ ಸಹಾಯವಾಗಿದೆ ಎನ್ನಲಾಗಿದೆ.
Advertisement
2018,19ನೇ ಸಾಲಿಗೆ ಮಾನ್ಯತೆ ಕೋರಿ ವಿಶ್ವವಿದ್ಯಾಲಯ ಸಲ್ಲಿಸಿದ್ದ ಅರ್ಜಿ ತಲುಪಿದೆ. ಮಾನ್ಯತೆ ನೀಡಲು ನಾವು ಸಿದ್ಧರಿದ್ದೇವೆ. ಅರ್ಜಿ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಸಿದ್ಧವಿರಿ ಎಂದು ವಿವಿ ಗೆ ಯುಜಿಸಿ ಜೂನ್ 6ರಂದು ಪತ್ರ ಬರೆದಿದೆ.
Advertisement
2013 ರಿಂದ 2018ರವರೆಗಿನ ಶೈಕ್ಷಣಿಕ ವಿಚಾರದ ಕುರಿತು ಯುಜಿಸಿ ಯಾವುದೇ ನಿರ್ಧಾರವನ್ನ ತಿಳಿಸಿಲ್ಲ. 2018-19 ಸಾಲಿನ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನುಮತಿ ಕೊಟ್ಟಿರುವ ಯುಜಿಸಿ ನಡೆ ಕುತೂಹಲ ಮೂಡಿಸಿದೆ.
ಕರ್ನಾಟಕ ರಾಜ್ಯ ಮುಕ್ತ ವಿವಿ ಯುಜಿಸಿ ನಿಯಮಗಳನ್ನು ಉಲ್ಲಂಘಿಸಿದ್ದ ಕಾರಣ ಯುಜಿಸಿ ವಿವಿ ಮಾನ್ಯತೆಯನ್ನು 2013 ರಲ್ಲಿ ರದ್ದು ಮಾಡಿತ್ತು.ಇದನ್ನೂ ಓದಿ:ಮುಕ್ತ ವಿವಿಗೆ ಇನ್ನು 3 ವರ್ಷ ಮಾನ್ಯತೆ ಸಿಗೋದು ಕಷ್ಟ!