ಮಂಡ್ಯ: ಕಾಲ ಭೈರವನ ಗಿರಿ ಚಂದ, ಅಲ್ಲಿ ಕುಣಿಯುವ ನವಿಲು ಇನ್ನೂ ಚಂದ. ಇದು ಆದಿಚುಂಚನಗಿರಿಗೆ ಇರುವ ಜನಪದ ಮಾತು. ನವಿಲಿನ ಕುಣಿತಕ್ಕೆ ಪ್ರಸಿದ್ಧಿಯಾಗಿರುವ ಚುಂಚನಗಿರಿಯಲ್ಲಿ ಇಂದಿನಿಂದ ಎರಡು ದಿನ ಕಾಲ ಯುವಜನೋತ್ಸವ ನಡೆಯುತ್ತಿದೆ.
Advertisement
Advertisement
ಕಾಲ ಭೈರವನ ಶ್ರೀ ಕ್ಷೇತ್ರದಲ್ಲಿ ಜನಪದ ಸಿರಿಗೆ ಕಲಾ ರಸಿಕರು ಮನಸೋತಿದ್ದಾರೆ. ಕೊರೊನಾ ಸಂಕಷ್ಟದಲ್ಲೂ ಮುಂಜಾಗ್ರತೆ ವಹಿಸಿ ಯುವ ಕಲಾವಿದರ ಪಡೆಯು ನವಿಲು ನರ್ತನ, ಡೊಳ್ಳು ಕುಣಿತ, ತಮಟೆ, ನಗಾರಿ, ಪಟಕುಣಿತದ ಮೂಲಕ ಚುಂಚನಗಿರಿಯಲ್ಲಿ ಮೇಳೈಸುತ್ತಿದೆ. ಚುಂಚನಗಿರಿಯಲ್ಲಿ ಯುವಜನೋತ್ಸವ ಕಲಾ ರಸಿರಕ ಕಣ್ಮನ ಸೆಳೆಯುತ್ತಿದೆ. ಇದನ್ನೂ ಓದಿ: ಆದಿ ಚುಂಚನಗಿರಿ ಕ್ಷೇತ್ರದಲ್ಲಿ ಜ.4-5ರಂದು ರಾಜ್ಯ ಮಟ್ಟದ ಯುವಜನೋತ್ಸವ: ನಾರಾಯಣಗೌಡ
Advertisement
Advertisement
ಚುಂಚನಗಿರಿಯ ಆರಾಧ್ಯ ದೈವ ಕಾಲಭೈರವನ ದೇವಸ್ಥಾನದ ಪಡಸಾಲೆ ಜನಪದ ಕಲಾವಿದರಿಂದ ಕಂಗೊಳಿಸುತ್ತಿದೆ. ದೇವಸ್ಥಾನದ ಸುತ್ತಲೂ ವಿವಿಧ ಜನಪದ ಕಲಾವಿದರು ವಿವಿಧ ಕಲಾ ಪ್ರಕಾರಗಳ ಮೂಲಕ ಜನಪದ ಕಲಾ ರಸಿಕರಿಗೆ ರಸದೌತಣ ನೀಡುತ್ತಿದ್ದಾರೆ. ತಮಟೆ, ನಗಾರಿ ವಾದ್ಯಗಳು ಕರ್ಣಗಳನ್ನು ತಣಿಸುತ್ತಿವೆ. ಪಟ ಕುಣಿತ, ವೀರಭದ್ರ ಕುಣಿತ, ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆ ಸೇರಿದಂತೆ ಹಲವು ಜನಪದ ಕಲಾಪ್ರಕಾರಗಳು ಚುಂಚನಗಿರಿ ಕಾಲಭೈರವನ ಮನವನ್ನು ತಣಿಸುತ್ತಿವೆ. ಯುವಜನೋತ್ಸವಕ್ಕೆ ಚಾಲನೆ ನೀಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ದೇಶದ ಅಭಿವೃದ್ಧಿ ಕುರಿತು ಕರೆ ನೀಡಿದರು. ಇದನ್ನೂ ಓದಿ: ಒಂದೇ ದಿನದಲ್ಲಿ 100 ವೈದ್ಯರಿಗೆ ಕೋವಿಡ್ ಪಾಸಿಟಿವ್!
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮಂಡ್ಯ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿರುವ 2021-22 ನೇ ಸಾಲಿನ ರಾಜ್ಯ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ರಾಜ್ಯಪಾಲರಾದ @TCGEHLOT ಜೊತೆ ಸೇರಿ ಚಾಲನೆ ನೀಡಲಾಯಿತು.#ಯುವಜನೋತ್ಸವ pic.twitter.com/TLL4bwDUsp
— Dr. Narayana Gowda / ಡಾ.ನಾರಾಯಣ ಗೌಡ (@narayanagowdakc) January 4, 2022
ಕಾಲ ಭೈರವ ಈ ನೆಲದ ಭೂ ಒಡೆಯ. ಭೂ ಒಡೆಯ ಶ್ರೀಮಂತಿಯೇ ಈ ಜನಪದ ಕಲಾ ಪ್ರಕಾರಗಳು. ಜೋಗಿ ಸಂಸ್ಕೃತಿಯ ಮೂಲಕ ಒಕ್ಕಲುತನವನ್ನು ಮಂಡ್ಯದ ಮಣ್ಣಿನಲ್ಲಿ ಬಿತ್ತಿದ ದೇವ ಪುರುಷ. ಈ ಪುರುಷನ ವೇಷವೇ ಜನಪದ ವೇಷ. ಕೈಯಲ್ಲಿ ಡಗಮುರಗ, ತ್ರಿಶೂಲ ಸಮೇತ ಮಣ್ಣಿನ ಸಂರಕ್ಷಣೆ ಮಾಡುತ್ತಿರುವ ಭೈರವನ ಸನ್ನಿಧಿ ಇಂದು ಮೂಲ ಜನಪದ ಸೊಗಡಿನಲ್ಲಿ ಕಂಗೊಳಿಸುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ 1,750ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದಾರೆ. ಜ ನಪದ ಕಲೆ ಸೇರಿದಂತೆ ವಿವಿಧ ಭಾಗಗಳಲ್ಲಿ ಸ್ಪರ್ಧೆಗಳು ನಡೆಯುತ್ತಿವೆ. ಯುವಜನೋತ್ಸವದ ಪ್ರಮುಖ ಆಕರ್ಷಣೆಯೇ ಜನಪದ ಕಲಾ ಮೇಳವಾಗಿದೆ. ಸ್ಪರ್ಧಾಗಳು ತಮ್ಮ ಜಿಲ್ಲೆಯ ಜನಪದ ಕಲಾ ಪ್ರಕಾರಗಳ ಅನಾವರಣವಾಯಿತು. ಇದನ್ನೂ ಓದಿ: 22 ವರ್ಷಗಳ ಬಳಿಕ ತಾಯಿ ಮಡಿಲು ಸೇರಿದ ಮಗಳು- ತಬ್ಬಿ ಕಣ್ಣೀರಿಟ್ಟ ವೀಡಿಯೋ ವೈರಲ್
ಯುವಜನೋತ್ಸವದಲ್ಲಿ ಹಿಂದೂಸ್ತಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ, ಭರತ ನಾಟ್ಯ, ಕಥಕ್, ಒಡಿಸ್ಸಿ, ಮಣಿಪುರಿ, ಕುಚುಪುಡಿ, ಹರ್ಮೋನಿಯಂ, ಗಿಟಾರ್, ಆಶು ಭಾಷಣ, ತಬಲಾ, ಸಿತಾರ್, ವೀಣೆ, ಕೊಳಲು, ಮೃದಂಗ, ಏಕಾಂಕ ನಾಟಕ, ಜಾನಪದ ನೃತ್ಯ ಮತ್ತು ಜಾನಪದ ಗೀತೆ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯುತ್ತಿವೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಸ್ಪರ್ಧಿಗಳು ಆಗಮಿಸಿದ್ದಾರೆ. ಯುವ ಕಲಾವಿದರು ಕಲೆಗೆ ತಕ್ಕಂತೆ ವೇಷವನ್ನು ಹಾಕಿರುವುದು ಮತ್ತೊಂದು ವಿಶೇಷವಾಗಿದೆ.