ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂದು ಸಹ ಬಿಸಿಲಿನ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಳಗಾವಿಯಲ್ಲಿ ಬಿಸಿಲಿನೊಂದಿಗೆ ಚದುರಿದಂತೆ ಮಳೆಯಾಗಲಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್, ಕಲಬುರಗಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
Advertisement
ಮಳೆ ಕೊರತೆ, ಅಂತರ್ಜಲ ಕುಸಿತದಿಂದಾಗಿ ಬೆಂಗಳೂರು ಮತ್ತೆ ರಾಜ್ಯದ ಜಿಲ್ಲೆಗಳಲ್ಲಿ ಬಿಸಿಲು ದಾಖಲೆ ಬರೆದಿದೆ. ಏಳು ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಬಿಸಿಲು 36% ದಾಟಿದೆ. ಉತ್ತರ ಒಳನಾಡು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹೀಟ್ ಸ್ಟ್ರೋಕ್ ಜೋರಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಬಿಸಿಲಿನ ಝಳಕ್ಕೆ ಜನರು ತತ್ತರಿಸಿದ್ದಾರೆ. ಈ ನಡುವೆ ಬೆಂಗಳೂರಿನಲ್ಲಿ ದಾಖಲೆಯ ತಾಪಮಾನ ದಾಖಲಾಗಿದೆ. 7 ವರ್ಷಗಳ ಬಳಿಕ ಗುರುವಾರ 37.9% ಸೆಲ್ಸಿಯಸ್ ದಾಖಲಾಗಿದೆ. ಶುಕ್ರವಾರ 36.56% ಸೆಲ್ಸಿಯಸ್ ದಾಖಲಾಗಿದೆ. ಸಾಮಾನ್ಯವಾಗಿ ಏಪ್ರಿಲ್‌ನಲ್ಲಿ ಈ ತಾಪಮಾನ ದಾಖಲಾಗುತ್ತಿತ್ತು. ಆದರೆ ಈಗ ಮಾರ್ಚ್‌ನಲ್ಲಿ ರೆಕಾರ್ಡ್ ಆಗಿದ್ದು, ಬಿಸಿಲಿನಿಂದ ತತ್ತರಿಸುವಂತೆ ಆಗಿದೆ. ಮಳೆ ಕೊರತೆ ಮತ್ತು ಅಂತರ್ಜಲ ಕುಸಿತದಿಂದ ಈ ರೀತಿ ಆಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Advertisement
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 35-22
ಮಂಗಳೂರು: 32-27
ಶಿವಮೊಗ್ಗ: 37-22
ಬೆಳಗಾವಿ: 35-24
ಮೈಸೂರು: 38-22
Advertisement
ಮಂಡ್ಯ: 37-23
ಮಡಿಕೇರಿ: 36-20
ರಾಮನಗರ: 37-22
ಹಾಸನ: 36-21
ಚಾಮರಾಜನಗರ: 38-22
ಚಿಕ್ಕಬಳ್ಳಾಪುರ: 34-21
ಕೋಲಾರ: 34-20
ತುಮಕೂರು: 36-22
ಉಡುಪಿ: 36-26
ಕಾರವಾರ: 32-26
ಚಿಕ್ಕಮಗಳೂರು: 33-18
ದಾವಣಗೆರೆ: 38-23
ಹುಬ್ಬಳ್ಳಿ: 37-23
ಚಿತ್ರದುರ್ಗ: 37-23
ಹಾವೇರಿ: 38-23
ಬಳ್ಳಾರಿ: 40-26
ಗದಗ: 37-24
ಕೊಪ್ಪಳ: 37-26
ರಾಯಚೂರು: 41-27
ಯಾದಗಿರಿ: 40-27
ವಿಜಯಪುರ: 38-29
ಬೀದರ್: 38-27
ಕಲಬುರಗಿ: 40-28
ಬಾಗಲಕೋಟೆ: 38-28