ಬೆಂಗಳೂರು: ಕಳೆದ ಎರಡು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ನಿನ್ನೆ 1,886 ಇದ್ದ ಕೊರೊನಾ ಸೋಂಕಿತರ ಸಂಖ್ಯೆ ಇಂದು 1,692ಕ್ಕೆ ಇಳಿಕೆಯಾಗಿದೆ. ಇಬ್ಬರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
Advertisement
ಇಂದು ರಾಜ್ಯದಲ್ಲಿ 1,094 ಮಂದಿ ಕೊರೊನಾದಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 39,56,112 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇಂದು 33,320 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರೊಂದಿಗೆ ಇಲ್ಲಿಯವರೆಗೆ 6,78,01,921 ಮಂದಿಯನ್ನು ಟೆಸ್ಟ್ ಮಾಡಲಾಗಿದೆ. ಇದನ್ನೂ ಓದಿ: ನಿವೃತ್ತಿ ಅಂಚಿನಲ್ಲಿರೋ ಸಿದ್ದು, ಯೋಗ್ಯತೆಯಿಲ್ಲದ ಡಿಕೆಶಿನ ಸಿಎಂ ಮಾಡಿ ಏನ್ ಮಾಡ್ಬೇಕು – ಅಶ್ವಥ್ ನಾರಾಯಣ
Advertisement
Advertisement
ಕೋವಿಡ್ನಿಂದ ಇಂದು ಎರಡು ಮರಣ ಪ್ರಕರಣ ದಾಖಲಾಗಿದ್ದು, ಇದುವೆರೆಗೆ ಒಟ್ಟು 40,104 ಮಂದಿ ಜೀವ ಕಳೆದುಕೊಂಡಿದ್ದಾರೆ. ಇಂದಿನ ಪಾಸಿಟಿವಿಟಿ ದರ ಶೇ.5.07 ಇದೆ. 11,105 ಸಕ್ರಿಯ ಪ್ರಕರಣಗಳಿವೆ. ಇಂದು 33,320 ಮಂದಿಯನ್ನು (25,779 ರ್ಯಾಪಿಡ್ ಆಂಟಿಜನ್, 7,541 ಆರ್ಟಿ-ಪಿಸಿಆರ್) ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೇ ಇಂದು 7,092 ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಸರ್ಕಾರಿ ವಸತಿ ಶಾಲೆಯಲ್ಲಿ ‘ವಿಕ್ರಾಂತ್ ರೋಣ ‘ ಪೈರಸಿ ಸಿನಿಮಾ ವೀಕ್ಷಣೆ : ಕ್ರಮಕ್ಕೆ ಒತ್ತಾಯ
Advertisement
ಬೆಂಗಳೂರು ನಗರದಲ್ಲೇ 1,154 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ 22, ಬಾಗಲಕೋಟೆ 22, ಬಳ್ಳಾರಿ 17, ಬೆಳಗಾವಿ 41, ಬೀದರ್ 17, ಚಾಮರಾಜನಗರ 7, ಚಿಕ್ಕಬಳ್ಳಾಪುರ 5, ಚಿಕ್ಕಮಗಳೂರು 9, ಚಿತ್ರದುರ್ಗ 2, ದಕ್ಷಿಣ ಕನ್ನಡ 15, ದಾವಣಗೆರೆ 10, ಧಾರವಾಡ 73, ಗದಗ 2, ಹಾಸನ 48, ಹಾವೇರಿ 19, ಕಲಬುರಗಿ 31, ಕೊಡಗು 4, ಕೋಲಾರ 22, ಕೊಪ್ಪಳ 10, ಮಂಡ್ಯ 24, ಮೈಸೂರು 47, ರಾಯಚೂರು 7, ಶಿವಮೊಗ್ಗ 16, ತುಮಕೂರು 26, ಉಡುಪಿ 13, ಉತ್ತರ ಕನ್ನಡ 26, ವಿಜಯಪುರದಲ್ಲಿ 3 ಪ್ರಕರಣಗಳು ಪತ್ತೆಯಾಗಿದ್ದು ರಾಮನಗರ ಹಾಗೂ ಯಾದಗಿರಿಯಲ್ಲಿ ಶೂನ್ಯ ಪ್ರಕರಣ ವರದಿಯಾಗಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.