Bengaluru CityCoronaDistrictsKarnatakaLatestMain Post

ಇಂದು 405 ಮಂದಿಗೆ ಕೊರೊನಾ – 4 ಮಂದಿ ಸಾವು

Advertisements

ಬೆಂಗಳೂರು: ರಾಜ್ಯದಲ್ಲಿ ಇಂದು 405 ಮಂದಿಗೆ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, 4 ಮರಣ ಪ್ರಕರಣ ದಾಖಲಾಗಿದೆ.

ಕೊರೊನಾ ಸೋಂಕಿನಿಂದ ಒಟ್ಟು 267 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 7,251 ಇದ್ದು, ರಾಜ್ಯದಲ್ಲಿ ಇಲ್ಲಿಯವರೆಗೂ ಒಟ್ಟು 30,03,969 ಮಂದಿಗೆ ಕೊರೊನಾ ಬಂದಿದೆ. 29,58,384 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಕೋವಿಡ್-19 ಮರಣ ಪ್ರಮಾಣ ಶೇ.0.98 ರಷ್ಟಿದ್ದರೆ, ಪಾಸಿಟಿವಿಟಿ ರೇಟ್ ಶೇ.0.35 ರಷ್ಟಿದೆ. ಬೆಂಗಳೂರು ನಗರನಲ್ಲಿ 254 ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, 2 ಮರಣ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:  ಕೋವಿಡ್‌ನಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಡಿ.27 ರಂದು ಪರಿಹಾರ ವಿತರಣೆ

ರಾಜ್ಯದಲ್ಲಿ ಇಂದು ಒಟ್ಟು 2,19,340 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 1,14,559 ಸ್ಯಾಂಪಲ್ (ಆರ್‌ಟಿ-ಪಿಸಿಆರ್ 93,102 + 21,457 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 0, ಬೀದರ್ 0, ಚಿತ್ರದುರ್ಗ 0, ದಾವಣಗೆರೆ 0, ಗದಗ 0, ಹಾವೇರಿ 0, ಕಲಬುರಗಿ 0, ಕೊಪ್ಪಳ 0, ರಾಯಚೂರು 0 ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶೂನ್ಯ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕೊರೊನಾ ವಾರಿಯರ್ಸ್‍ಗೆ 4 ತಿಂಗಳಿನಿಂದ ಸಿಕ್ಕಿಲ್ಲ ಸಂಬಳ


ಬೆಳಗಾವಿ 4, ಬೆಂಗಳೂರು ಗ್ರಾಮಾಂತರ 1, ಬೆಂಗಳೂರು ನಗರ 254, ಚಾಮರಾಜನಗರ 1, ಚಿಕ್ಕಬಳ್ಳಾಪುರ 4, ಚಿಕ್ಕಮಗಳೂರು 1, ದಕ್ಷಿಣ ಕನ್ನಡ 20, ಧಾರವಾಡ 3, ಹಾಸನ 9, ಕೊಡಗು 12, ಕೋಲಾರ 18, ಮಂಡ್ಯ 1, ಮೈಸೂರು 13, ರಾಮನಗರ 1, ಶಿವಮೊಗ್ಗ 1, ತುಮಕೂರು 16, ಉಡುಪಿ 13, ಉತ್ತರ ಕನ್ನಡ 32, ವಿಜಯಪುರ 1 ಸೋಂಕು ಕಾಣಿಸಿಕೊಂಡಿದೆ.

Leave a Reply

Your email address will not be published.

Back to top button