ಬೆಂಗಳೂರು: ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಮುಂದುವರಿಕೆಗೆ ಸಚಿವರೂ ಸೇರಿದಂತೆ ವಿವಿಧ ವಲಯಗಳಿಂದ ಅಪಸ್ವರ, ಆಕ್ಷೇಪ ಹೆಚ್ಚಾಗ್ತಿದೆ. ಈ ಬೆನ್ನಲ್ಲೇ, ಇವತ್ತು ಕೊರೊನಾ ಮಹಾಸ್ಫೋಟವಾಗಿದೆ.
ರಾಜ್ಯದಲ್ಲಿ ಇಂದು 41,457 ಹೊಸ ಕೇಸ್ ಕಾಣಿಸಿಕೊಂಡಿದ್ದು, ಸೋಂಕಿನಿಂದ 20 ಜನ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ 22.30% ಏರಿದೆ. ಇಲ್ಲಿವರೆಗೂ ರಾಜ್ಯದಲ್ಲಿ 2,50,381 ಸಕ್ರಿಯ ಕೇಸ್ ಪತ್ತೆಯಾಗಿದ್ದು, ಇಂದು 1,85,872 ಜನರು ಕೊರೊನಾ ಟೆಸ್ಟ್ ಮಾಡಿಸಿದ್ದಾರೆ. ಇದನ್ನೂ ಓದಿ: ನವೋದಯದಲ್ಲಿ ಕೋವಿಡ್ ಕೇರ್ ಕೇಂದ್ರ ತೆರೆಯಬೇಡಿ – ಕೊಡಗಿನ ಪೋಷಕರಿಂದ ವಿರೋಧ
Advertisement
Advertisement
ಬೆಂಗಳೂರಿನಲ್ಲಿ ಇಂದು 25,595 ಹೊಸ ಕೇಸ್‍ಗಳು ಪತ್ತೆಯಾಗಿದ್ದು, 07 ಜನರು ಮೃತಪಟ್ಟಿದ್ದಾರೆ. ಒಟ್ಟು ಬೆಂಗಳೂರಿನಲ್ಲೇ 1.78 ಲಕ್ಷ ಸಕ್ರಿಯ ಕೇಸ್ ಪತ್ತೆಯಾಗಿದೆ. ಈ ಮೂಲಕ ಪಾಸಿಟಿವಿಟಿ ರೇಟ್ 25% ಏರಿದೆ.
Advertisement
Advertisement
ಮೈಸೂರು 1,848 ಹೊಸ ಕೇಸ್‍ಗಳು ಪತ್ತೆಯಾಗಿದ್ದು, 3 ಜನರು ಸಾವನ್ನಪ್ಪಿದ್ದಾರೆ. ಇಲ್ಲಿವರೆಗೂ 8,401 ಸಕ್ರಿಯ ಕೇಸ್ ಪತ್ತೆಯಾಗಿದ್ದು, ಪಾಸಿಟಿವಿಟಿ ರೇಟ್ 30.09% ಏರಿದೆ. ಹಾಸನದಲ್ಲಿ 1,739, ತುಮಕೂರು 1939, ಬೆಂಗಳೂರು ಗ್ರಾ. 1,116, ದಕ್ಷಿಣ ಕನ್ನಡ 1,058 ಮಂದಿಗೆ ಸೋಂಕು ಬಂದಿದೆ. ಇದನ್ನೂ ಓದಿ: ಮಂಗಳೂರು ಕಾಂಗ್ರೆಸ್ ಸಭೆಯಲ್ಲಿ ಹೈಡ್ರಾಮಾ – ಸದಸ್ಯರನ್ನೇ ಹೊರಹಾಕಿದ ನಾಯಕರು
ಮಂಡ್ಯ 29.71%, ಧಾರವಾಡ 22.91%, ಶಿವಮೊಗ್ಗ 22.49%, ಕೋಲಾರ 21.94% ಹಾಗೂ ಕಲಬುರಗಿ 20.56% ಪಾಸಿಟಿವಿಟಿ ರೇಟ್ ಇದೆ. ಹಾವೇರಿ ಒಂದನ್ನು ಬಿಟ್ಟರೆ ಉಳಿದ ಎಲ್ಲ ಜಿಲ್ಲೆಗಳು ಶೇ.3ಕ್ಕಿಂತ ಹೆಚ್ಚಿನ ಪಾಸಿಟಿವಿಟಿ ರೇಟ್ ಹೊಂದಿವೆ.