ಚಿತ್ರದುರ್ಗ: ಇಂದು ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟಗೊಂಡಿದೆ. ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಆರು ಜನ ವಿದ್ಯಾರ್ಥಿಗಳು ರಾಜ್ಯದ ಟಾಪರ್ ಪಟ್ಟಿಗೆ ಸೇರಿದ್ದಾರೆ.
ಹೊಸದುರ್ಗ ತಾಲೂಕಿನ ನೀರುಗುಂದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಕೆ.ಎಂ.ಸಿಂಚನಾ ಅವರು 625 ಅಂಕಗಳಿಗೆ 625 ಅಂಕ ಪಡೆದು ರಾಜ್ಯದ ಟಾಪರ್ ಪಟ್ಟಿಯಲ್ಲಿ ಸೇರಿದ್ದಾರೆ. ಸಿಂಚನಾ ಮೂಲತಃ ಹೊಸದುರ್ಗ ತಾಲೂಕಿನ ಬಾಗೂರು ಗ್ರಾಮದವರಾಗಿದ್ದು, ತಂದೆ ಮಂಜಪ್ಪ, ತಾಯಿ ಶಾಂತಮ್ಮ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನೂ ಓದಿ: ಎಸ್‍ಎಸ್‍ಎಲ್‍ಸಿಯಲ್ಲಿ ಔಟ್ ಆಫ್ ಔಟ್ ತೆಗೆದ ಬೆಂಗಳೂರಿನ ವಿದ್ಯಾರ್ಥಿಗಳು
Advertisement
Advertisement
ಇದೇ ತಾಲೂಕಿನ ಎಸ್.ನಿಜಲಿಂಗಪ್ಪ ಶಿಕ್ಷಣ ಸಂಸ್ಥೆ, ಎಂ.ಪಿ.ಪ್ರಕಾಶ್ ಪ್ರೌಢಶಾಲೆಯ ‘ಯುಕ್ತ’ ವಿದ್ಯಾರ್ಥಿನಿ ಸಹ ಟಾಪರ್ ಪಟ್ಟಿಯಲ್ಲಿ ಸೇರಿದ್ದಾರೆ. ಹಿರಿಯೂರು ತಾಲೂಕಿನ ಎರಡು ಖಾಸಗಿ ಶಾಲೆಗಳ ವಿದ್ಯಾರ್ಥಿನಿಯರು ಸಹ ರಾಜ್ಯದ ಟಾಪರ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ನಗರದ ರಾಷ್ಟ್ರೀಯ ಅಕಾಡೆಮಿ ಶಾಲೆಯ ವಿದ್ಯಾರ್ಥಿನಿ ಸಿ.ಎ.ಸಂಜನಾ ಅವರು 625 ಅಂಕ ಪಡೆಯುವ ಮೂಲಕ ಟಾಪರ್ ಸಾಲಿನಲ್ಲಿ ಸೇರಿದ್ದಾರೆ.
Advertisement
Advertisement
ತಾಲೂಕಿನ ಭೀಮನಬಂಡೆ ಬಳಿ ಇರುವ ಯಾಜ್ಞವಲ್ಕ್ಯ ಶಾಲೆಯ ವಿ.ಆರ್.ಶೃತಿ ಸಹ ಟಾಪರ್ ಸ್ಥಾನ ಪಡೆದಿದ್ದಾರೆ. ಚಿತ್ರದುರ್ಗ ನಗರದ ವಿದ್ಯಾವಿಕಾಸ ಶಾಲೆಯ ವಿದ್ಯಾರ್ಥಿನಿ ರಕ್ಷಾ ಹಾಗೂ ಚಳ್ಳಕೆರೆ ತಾಲೂಕಿನ ಖಾಸಗಿ ಸಂಸ್ಥೆಯ ವಾಸವಿ ಆಂಗ್ಲ ಪ್ರೌಢಶಾಲೆಯ ವಿದ್ಯಾರ್ಥಿ ರಾಕೇಶ್.ಆರ್ ಸಹ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಮಕ್ಕಳ ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ಪೋಷಕರಲ್ಲಿ ಸಂತಸ ಮನೆ ಮಾಡಿತು.
ಸಾಧಕ ವಿದ್ಯಾರ್ಥಿಗಳಿಗೆ ಪೋಷಕರು ಪುಷ್ಪಮಾಲಿಕೆ ನೀಡಿ, ಗೌರವಿಸಿ ನಂತರ ಸಿಹಿ ಹಂಚಿ ಸಂಭ್ರಮಿಸಿದರು. ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಗೆ ಆರು ವಿದ್ಯಾರ್ಥಿಗಳು 625 ಅಂಕಗಳಿಗೆ 625 ಪೂರ್ಣ ಅಂಕ ಪಡೆಯುವ ಮೂಲಕ ರಾಜ್ಯ, ಜಿಲ್ಲೆ, ಶಾಲೆ ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾರೆ. ಕೋವಿಡ್ ಗೊಂದಲದ ನಡುವೆ ನಡೆದ ಪರೀಕ್ಷೆಯಲ್ಲಿ ಯಾವ್ದೇ ಸಮಸ್ಯೆಗೆ ಸಿಲುಕಿ ವಿಚಲಿತರಾಗದೇ ಗುರಿ ಕುಟ್ಟುವ ಮೂಲಕ ಈ ವಿದ್ಯಾರ್ಥಿಗಳು ಮೊದಲ ಸ್ಥಾನ ಪಡೆದಿರೋದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇದನ್ನೂ ಓದಿ: ಮಳೆಯಿಂದ ಹಾನಿಗೊಳಗಾದ ಪ್ರದೇಶ ವೀಕ್ಷಣೆ ಮಾಡಿದ ಬೊಮ್ಮಾಯಿ