Bengaluru CityDistrictsKarnatakaLatestMain Post

ಎಸ್‍ಎಸ್‍ಎಲ್‍ಸಿಯಲ್ಲಿ ಔಟ್ ಆಫ್ ಔಟ್ ತೆಗೆದ ಬೆಂಗಳೂರಿನ ವಿದ್ಯಾರ್ಥಿಗಳು

ಬೆಂಗಳೂರು: ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಿದ್ದು ಬೆಂಗಳೂರಿನಲ್ಲಿಯೂ ಇಬ್ಬರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ.

ಬಾಗಲಗುಂಟೆ ನಾಗಸಂದ್ರದ ಬ್ಲಾಸಮ್ಸ್ ಹೈಸ್ಕೂಲ್‍ನಲ್ಲಿ ಓದುತ್ತಿರುವ ವಿಷ್ಣುಪ್ರಿಯಾ.ಆರ್ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದುಕೊಂಡಿದ್ದಾಳೆ. ಪುತ್ರಿಯ ಸಾಧನೆಗೆ ಪೋಷಕರಾದ ರೂಪೇಶ್ ಮತ್ತು ಜ್ಯೋತಿ ಸಂತೋಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಔಟ್‌ ಆಫ್‌ ಔಟ್‌ – ಚಿಕ್ಕಬಳ್ಳಾಪುರದ ಒಂದೇ ಶಾಲೆಯ ಮೂವರು ರಾಜ್ಯಕ್ಕೆ ಪ್ರಥಮ

SSLC

ಮಹಾಲಕ್ಷ್ಮಿ ಲೇಔಟ್‍ನ ‘ಲಿಟಲ್ ಲಿಲ್ಲಿಸ್ ಎಜುಕೇಶನ್ ಸೊಸೈಟಿ’ಯಲ್ಲಿ ಓದಿದ್ದ ಮಂಜುನಾಥ್ 625ಕ್ಕೆ 625 ಅಂಕ ಪಡೆದು ಸಾಧನೆ ಮಾಡಿದ್ದಾನೆ.

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ. 81.03 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರೆ ಶೇ.90.29 ವಿದ್ಯಾರ್ಥಿನಿಯರು ಪಾಸ್ ಆಗಿದ್ದಾರೆ. ರಾಜ್ಯದ ಒಟ್ಟು 145 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿರುವುದು ವಿಶೇಷ. ಸರ್ಕಾರಿ ಶಾಲೆಯ 21, ಅನುದಾನಿತ ಶಾಲೆಯ 8, ಖಾಸಗಿ ಶಾಲೆಯ 116 ವಿದ್ಯಾರ್ಥಿಗಳು 625 ಅಂಕ ಪಡೆದಿದ್ದಾರೆ. ಇದನ್ನೂ ಓದಿ:  SSLC ಫಲಿತಾಂಶ ಪ್ರಕಟ – ರಿಸಲ್ಟ್‌ ವೀಕ್ಷಿಸುವುದು ಹೇಗೆ?

Leave a Reply

Your email address will not be published.

Back to top button