ಬೆಂಗಳೂರು: ಕಲಿಕಾ ಚೇತರಿಕೆಗಾಗಿ ಈ ಸಾಲಿನಲ್ಲಿ 15 ದಿನ ಮೊದಲೇ ಶಾಲೆ ಆರಂಭಿಸುವುದಾಗಿ ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಈ ಸಾಲಿನಲ್ಲಿ ಮೇ. 16 ರಿಂದ ಶಾಲೆಗಳು ಆರಂಭವಾಗಲಿದೆ. 15 ದಿನ ಮುಂಚಿತವಾಗಿ ಶಾಲೆಯನ್ನು ಆರಂಭಿಸಲು ತೀರ್ಮಾನಿಸಲಾಗಿದೆ. ಕಳೆದ ಒಂದುವರೆ ವರ್ಷದಿಂದ ಕೋವಿಡ್ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ ಗುಣ ಮಟ್ಟದ ಶಿಕ್ಷಣದ ಕೊರತೆ ಎದುರಾಗಿದೆ. ಆದ್ದರಿಂದ ಮೇ 16 ರಿಂದಲೇ ಶಾಲೆ ಆರಂಭಿಸಲು ತೀರ್ಮಾನಿಸಲಾಗಿದೆ. ಈ ವರ್ಷವನ್ನು ಕಲಿಕ ಚೇತರಿಕ ವರ್ಷ ಎಂದು ನಡೆಸಲು ತೀರ್ಮಾನಿಸಿದ್ದೇವೆ. ಮೇ. 16 ರಿಂದಲೇ ಕಲಿಕಾ ಚೇತರಿಕೆ ಆರಂಭವಾಗಲಿದೆ ಎಂದರು. ಇದನ್ನೂ ಓದಿ: ಕನ್ನಡದ ಕೋಟ್ಯಧಿಪತಿ ಮೂಲಕ ಫೇಮಸ್ ಆಗಿದ್ದ ಲೈನ್ ಮನ್ ತಿಮ್ಮಣ್ಣ ಆತ್ಮಹತ್ಯೆ : ಅನುಮಾನ ವ್ಯಕ್ತ ಪಡಿಸಿದ ಸ್ನೇಹಿತರು
Advertisement
Advertisement
ಮಳೆಗಾಲವಾದ್ದರಿಂದ ವೆದರ್ ರಿಪೋರ್ಟ್ ವೆರಿ ಕ್ರಿಟಿಕಲ್ ಅಂತ ವೆದರ್ ಡಿಪಾರ್ಟ್ ಮೆಂಟ್‍ನಿಂದ ಏನಾದರು ಮಾಹಿತಿ ಬಂದರೆ ಮಾತ್ರ ಬೇರೆ ಬದಲಾವಣೆ ಅಷ್ಟೇ. ಕೋವಿಡ್ 4ನೇ ಅಲೆ ಬಗ್ಗೆ ಯಾವುದೇ ತೀರ್ಮಾನ ಈಗ ಕೈಗೊಳ್ಳೋಕೆ ಆಗಲ್ಲ. ಆ ರೀತಿಯ ಯಾವ ವಿಚಾರವು ನಮಗೆ ಬಂದಿಲ್ಲ ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ವಿದ್ಯುತ್ ಕಂಬವೇರಿ ಕುಡುಕನ ಹೈಡ್ರಾಮಾ – ಬೆಸ್ಕಾಂ ಅಧಿಕಾರಿಗಳಿಗೆ ಆತಂಕ
Advertisement