ChikkaballapurDistrictsKarnatakaLatestMain Post

ವಿದ್ಯುತ್ ಕಂಬವೇರಿ ಕುಡುಕನ ಹೈಡ್ರಾಮಾ – ಬೆಸ್ಕಾಂ ಅಧಿಕಾರಿಗಳಿಗೆ ಆತಂಕ

ಚಿಕ್ಕಬಳ್ಳಾಪುರ: ಮದ್ಯವ್ಯಸನಿಯೊಬ್ಬ ವಿದ್ಯುತ್ ಕಂಬವನ್ನು ಏರಿ ನಿಂತು ಹೈಡ್ರಾಮಾ ಸೃಷ್ಟಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಉಜ್ಜನಿ ಗ್ರಾಮದಲ್ಲಿ ನಡೆದಿದೆ.

ಉಜ್ಜನಿ ಗ್ರಾಮದ ಸುಮಾರು 45 ವರ್ಷದ ವ್ಯಕ್ತಿ 11ಕೆವಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಇದ್ದ ವಿದ್ಯುತ್ ಕಂಬವನ್ನು ಏರಿ ನಿಂತಿದ್ದನು. ಅದೃಷ್ಟವಶಾತ್ ಇದೇ ರಸ್ತೆಯಲ್ಲಿ ಬಂದ ಬೆಸ್ಕಾಂ ಪವರ್ ಮೆನ್ ಮಂಜುನಾಯಕ್ ಗಮನಿಸಿ, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ವಿದ್ಯುತ್ ಪೂರೈಕೆಯನ್ನು ತಕ್ಷಣವೇ ಕಡಿತಗೊಳಿಸಿದ್ದಾರೆ. ಇದನ್ನೂ ಓದಿ: ಮರ್ಯಾದಾ ಹತ್ಯೆ – ತಹಶೀಲ್ದಾರ್ ಕಚೇರಿಯಲ್ಲೇ ಚಾಕುವಿನಿಂದ ಇರಿದು ವ್ಯಕ್ತಿ ಬರ್ಬರ ಕೊಲೆ

CHIKKABALLAPURA

ಸ್ಥಳಕ್ಕೆ ಹೊಸಹಳ್ಳಿ ಪೊಲೀಸರು ದೌಡಾಯಿಸಿ ಹಲವು ನಿಮಿಷಗಳ ಕಾಲ ಮನವೊಲಿಸಿದ ನಂತರ, ಆತನನ್ನು ವಿದ್ಯುತ್ ಕಂಬದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಳೆ, ಗಾಳಿಯಿಂದಾಗಿ ಸಮರ್ಪಕವಾಗಿ ವಿದ್ಯುತ್ ಪೂರೈಕೆಗೆ ಬಸವಳಿಯುತ್ತಿರುವ ಬೆಸ್ಕಾಂ ಸಿಬ್ಬಂದಿಗೆ ಈ ರೀತಿಯ ಅನಾವಶ್ಯಕ ಘಟನೆ ತಲೆ ಬಿಸಿ ಮಾಡಿದೆ. 11ಕೆವಿ ವಿದ್ಯುತ್ ಪ್ರಸಾರವಾಗುತ್ತಿದ್ದ ತಂತಿಗಳು ಸ್ವಲ್ಪ ತಗುಲಿದ್ದರೂ, ಆತ ಕ್ಷಣ ಮಾತ್ರದಲ್ಲಿಯೇ ಸಾವನಪ್ಪಿರುತ್ತಿದ್ದ ಎಂಬ ಆತಂಕ ಬೆಸ್ಕಾಂ ಅಧಿಕಾರಿಗಳದ್ದಾಗಿತ್ತು. ಇದನ್ನೂ ಓದಿ: ಕ್ಷುಲ್ಲಕ ವಿಚಾರಕ್ಕೆ ಪತ್ನಿಯ ಕತ್ತು ಹಿಸುಕಿ ಕೊಲೆ?

Leave a Reply

Your email address will not be published.

Back to top button