ಉಡುಪಿ: ಪಿಯುಸಿ ಫಲಿತಾಂಶ ಬಂದ ಬೆನ್ನಲ್ಲೇ ಬಿಜೆಪಿ ನಾಯಕರು ವಿಪಕ್ಷ ಸಿಎಂ ಕುಮಾರಸ್ವಾಮಿ ಅವರ ಮೇಲೆ ಮುಗಿಬಿದ್ದಿದ್ದು, ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಟಾಂಗ್ ಕೊಟ್ಟಿದ್ದಾರೆ.
ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ರಾಜ್ಯಕ್ಕೆ ಉಡುಪಿ ಜಿಲ್ಲೆ ತೃತೀಯ ಸ್ಥಾನ ಬಂದಿರುವ ಬೆನ್ನಲ್ಲೇ ಪಿಯು ಫಲಿತಾಂಶ ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿದೆ. ಈ ಹಿಂದೆ ಸಿಎಂ ಕರಾವಳಿಗರಿಗೆ ತಿಳುವಳಿಕೆ ಕಡಿಮೆ ಎನ್ನುವ ಹೇಳಿಕೆ ನೀಡಿದ್ದರು. ಇದೀಗ ಫಲಿತಾಂಶದಲ್ಲಿ ಉಡುಪಿ ಫಸ್ಟ್ ಹಾಗೂ ದಕ್ಷಿಣ ಕನ್ನಡ ಸೆಕೆಂಡ್ ಬಂದಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಸಿಎಂಗೆ ಟಾಂಗ್ ಕೊಡಲು ಶುರು ಮಾಡಿದ್ದಾರೆ. ಇದನ್ನು ಓದಿ: ಹಾರ್ಡ್‌ವರ್ಕ್‌ಗೆ ತಕ್ಕ ಪ್ರತಿಫಲ ಸಿಕ್ಕಿದೆ: ಖುಷಿ ಹಂಚಿಕೊಂಡ ಉಡುಪಿಯ ಸ್ವಾತಿ
Advertisement
Advertisement
ನಗರದಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ವಿಪಕ್ಷ ನಾಯಕರು, ಸಿಎಂ ಕುಮಾರಸ್ವಾಮಿ ಅವರು ಕರಾವಳಿ ಜನಕ್ಕೆ ತಿಳುವಳಿಕೆ ಇಲ್ಲ ಎಂದಿದ್ದರು. ಇಲ್ಲಿನ ಜನರು, ಮಕ್ಕಳು ಬುದ್ಧಿವಂತರಿದ್ದಾರೆ. ಇಡೀ ರಾಜ್ಯಕ್ಕೆ ಮಾದರಿಯಾಗುವಂತಹ ಸಾಧನೆ ಮಾಡಿದ್ದಾರೆ. ಸಿಎಂ ಕುಮಾರಸ್ವಾಮಿ ಅವರಿಗೆ ಕಿವಿಮಾತು ಹೇಳುತ್ತೇನೆ. ಮೂದಲಿಸಿದವರಿಗೆ ಮತದ ಮೂಲಕ ಉತ್ತರ ಕೊಡುತ್ತೇವೆ. ಸಡಿಲವಾದ ಮಾತನಾಡುವುದನ್ನು ಸಿಎಂ ಬಿಟ್ಟುಬಿಡಲಿ ಎಂದು ಎಚ್ಚರಿಕೆ ನೀಡಿದ್ದಾರೆ.
Advertisement
ಪಿಯುಸಿ ಫಲಿತಾಂಶ ನಮಗೆ ಅತ್ಯಂತ ಸಂತೋಷ ತಂದಿದೆ. ಕರಾವಳಿಯ ಎರಡೂ ಜಿಲ್ಲೆಗಳು ಪ್ರಥಮ ಹಾಗೂ ದ್ವಿತೀಯ ಸ್ಥಾನದಲ್ಲಿವೆ. ಉಡುಪಿ, ದಕ್ಷಿಣ ಕನ್ನಡದ ವಿದ್ಯಾರ್ಥಿಗಳ ಪೋಷಕರಿಗೆ ಅಭಿನಂದನೆಗಳು. ಶಿಕ್ಷಕರ ಹಾಗೂ ಶಿಕ್ಷಣ ಇಲಾಖೆಯ ಶ್ರಮ ಅಭಿನಂದನೀಯ ಎಂದರು.