– ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್
ಬಳ್ಳಾರಿ: ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಪಡೆದಿರುವ ಬಳ್ಳಾರಿ ಜೀನ್ಸ್ (Ballari Jeans) ಉದ್ಯಮಕ್ಕೆ ಮರ್ಮಾಘಾತ ಎದುರಾಗಿದ್ದು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (Karnataka Pollution Control Board) ಆದೇಶದ ಮೇರೆಗೆ 36 ಘಟಕಗಳಿಗೆ ಬೀಗ ಹಾಕಲಾಗಿದೆ.
ಜೀನ್ಸ್ ವಾಷಿಂಗ್ ಘಟಕಗಳಿಂದ ಪರಿಸರಕ್ಕೆ ಹಾನಿ ಆಗುತ್ತದೆ ಎಂಬ ವರದಿ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ. ಜೀನ್ಸ್ ಘಟಕದಿಂದ ನೀರು ಶುದ್ದೀಕರಿಸದೇ ರಾಸಾಯನಿಕ ಮಿಶ್ರಿತ ನೀರನ್ನು ಯಥಾವತ್ತಾಗಿ ಹರಿ ಬಿಡಲಾಗುತ್ತಿತ್ತು. ಈ ಕುರಿತು ಹಲವು ಬಾರಿ ನೋಟಿಸ್ ನೀಡಿ ಎಚ್ಚರಿಸಲಾಗಿತ್ತು. ಇದನ್ನೂ ಓದಿ: ಆತ್ಮಾಹುತಿ ಬಾಂಬ್ ದಾಳಿಯೆಂಬುದು ಹುತಾತ್ಮರ ಕಾರ್ಯಾಚರಣೆ – ಬಾಂಬರ್ ಉಮರ್
ರಾಸಾಯನಿಕ ನೀರು ಸಂಸ್ಕರಿಸದೇ ಬಿಡುವ ಕಾರಣ 36 ಘಟಕಗಳಿಗೆ ನೋಟಿಸ್ ನೀಡಿ ಜೆಸ್ಕಾಂನಿಂದಲೂ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಬಾಗಿಲು ಹಾಕಲಾಗಿದೆ. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬಳ್ಳಾರಿ ಜೀನ್ಸ್ ಉದ್ಯಮವನ್ನೇ ನಂಬಿ 2 ಲಕ್ಷಕ್ಕೂ ಅಧಿಕ ಜನ ಕೆಲಸ ಮಾಡುತ್ತಿದ್ದಾರೆ. ಇದೀಗ ಘಟಕಗಳು ಕ್ಲೋಸ್ ಆಗಿದ್ದರಿಂದ ಜೀನ್ಸ್ ವಾಷಿಂಗ್ ಘಟಕಗಳು ಬೀಕೋ ಎನ್ನುತ್ತಿವೆ.
ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಜೀನ್ಸ್ ಘಟಕಗಳು ಬಂದ್ ಆಗಿವೆ ಎನ್ನಲಾಗಿದ್ದು, ಇಷ್ಟೆಲ್ಲಾ ಬಹುದೊಡ್ಡ ಸಮಸ್ಯೆ ಆಗಿಗಿದ್ದರೂ ಜಿಲ್ಲಾಡಳಿತ ಗಪ್ ಚುಪ್ ಆಗಿದೆ. ಇತ್ತ ಜೀನ್ಸ್ ಉದ್ಯಮಿಗಳು ಮೌನಕ್ಕೆ ಶರಣವಾಗಿದ್ದು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ್ದಾರೆ.

