ಮೈಸೂರು: ನಗರದಲ್ಲಿನ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯಕ್ಕೆ ರಾಜ್ಯ ಸರಕಾರ ಕೊನೆಗೂ ಬೀಗ ಹಾಕಿದೆ.
ಯುಜಿಸಿಯ ನಿಯಾಮಾವಳಿಗಳನ್ನು ಉಲ್ಲಂಘಿಸಿ ಔಟ್ ರೀಚ್ ಸೆಂಟರ್‍ಗಳನ್ನು ಆರಂಭಿಸುವ ಮೂಲಕ ಮುಕ್ತ ವಿವಿಯ ಮೂಲ ಆಶಯಕ್ಕೆ ಧಕ್ಕೆ ಮಾಡಲಾಗಿದೆ ಅಂತ ಯುಜಿಸಿ ಮಾನ್ಯತೆಯನ್ನ ಕೇಂದ್ರ ಸರ್ಕಾರ ರದ್ದು ಮಾಡಿತ್ತು. ಇದರಿಂದ ಕಳೆದ ಎರಡು ವರ್ಷಗಳಿಂದ ವಿವಿಯಲ್ಲಿ ಪ್ರವೇಶಾತಿ ನಿಂತು ಎಲ್ಲಾ ಕೋರ್ಸ್ ಅರ್ಧಕ್ಕೆ ಬಂದ್ ಆಗಿದ್ದವು.
Advertisement
ಯುಜಿಸಿ ಮಾನ್ಯತೆ ನವೀಕರಣಗೊಳಿಸಲು ಸರ್ಕಾರ ಪ್ರಯತ್ನಿಸಿತ್ತು. ಆದ್ರೆ, ನವೀಕರಣ ಸಾಧ್ಯತೆಯೇ ಇಲ್ಲದ ಕಾರಣ ಈಗ ವಿಶ್ವವಿದ್ಯಾನಿಲಯವನ್ನು ಮುಚ್ಚಲು ರಾಜ್ಯ ಸರಕಾರ ಆದೇಶಿಸಿದೆ. ಇದೀಗ ಹಾಲಿ ಇರುವ ಸಿಬ್ಬಂದಿ ವರ್ಗಾವಣೆ ಹೇಗೆ ಮಾಡಬೇಕು. ವಿವಿಯಲ್ಲಿನ ಬಳಕೆ ಆಗದೆ ಉಳಿದ ಅನುದಾನವನ್ನು ಹೇಗೆ ಬೇರೆ ವಿವಿಗಳಿಗೆ ಪರಿವರ್ತಿಸಬೇಕು ಎಂಬ 2 ವಿಚಾರಗಳಲ್ಲಿ ಸರಕಾರ ಹೇಗೆ ಆದೇಶ ನೀಡಬೇಕೆಂದು ತಿಳಿಸಲು ಉನ್ನತ ತಜ್ನರ ಸಮಿತಿಯನ್ನು ರಾಜ್ಯ ಸರಕಾರ ರಚಿಸಿದೆ.