ತಮ್ಮ ಅಂಗಾಂಗಗಳನ್ನು ದಾನ (Organ Donation) ಮಾಡುವ ಮೂಲಕ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ (Sanchari Vijay) ಹಾಗೂ ಕಣ್ಣುಗಳನ್ನು ದಾನ ಮಾಡುವ ಮೂಲಕ ಪುನೀತ್ ರಾಜ್ ಕುಮಾರ್ (Puneeth Raj Kumar) ಸಾಕಷ್ಟು ಜನಕ್ಕೆ ಪ್ರೇರಣೆಯಾದರು. ಈ ಕಲಾವಿದರ ಒಳ್ಳೆಯ ಕಾರ್ಯದಿಂದಾಗಿ ಅನೇಕರು ಅಂಗಾಂಗ ದಾನ ಮಾಡಲು ಮುಂದಾಗಿದ್ದಾರೆ. ಹಲವರು ದಾನವನ್ನೂ ಮಾಡಿದ್ದಾರೆ. ಹೀಗಾಗಿ ಭಾರತದಲ್ಲೇ ಅಂಗಾಂಗ ದಾನ ಮಾಡಿದವರ ಯಾದಿಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ.
ಅಂಗಾಂಗ ದಾನ ಮಾಡುವ ಪಟ್ಟಿಯಲ್ಲಿ ತೆಲಂಗಾಣ ಮೊದಲ ಸ್ಥಾನದಲ್ಲಿ ಇದ್ದರೆ, ಕರ್ನಾಟಕದಲ್ಲಿ (Karnataka) 2022ರಲ್ಲಿ 151 ಮಂದಿ ಅಂಗಾಂಗ ದಾನ ಮಾಡುವ ಮೂಲಕ 2ನೇ ಸ್ಥಾನಕ್ಕೆ ತಂದಿದ್ದಾರೆ. ಕಿಡ್ನಿ, ಲಿವರ್, ಹಾರ್ಟ್ ಸೇರಿದಂತೆ 770 ಅಂಗಾಂಗಳನ್ನು ದಾನ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ತೆಲಂಗಾಣದಲ್ಲಿ 194 ಮಂದಿ ಅಂಗಾಂಗ ದಾನ ಮಾಡಿದ್ದಾರೆ. ಗುಜರಾತ್ ಮೂರನೇ ಸ್ಥಾನದಲ್ಲಿದೆ. ಇದನ್ನೂ ಓದಿ: ರಶ್ಮಿಕಾ ಬೀಚ್ ಫೋಟೋ: ದೇವರಕೊಂಡ ಕ್ಲಿಕ್ಕಿಸಿದ್ದಾ ಎಂದ ನೆಟ್ಟಿಗರು
ಅಪಘಾತ, ಅನಾರೋಗ್ಯ ಹಾಗೂ ಆಕಸ್ಮಿಕ ಘಟನೆಗಳಲ್ಲಿ ಮೆದುಳು ನಿಷ್ಕ್ರಿಯಗೊಂಡಾಗ ಅಂಗಾಂಗ ದಾನ ಮಾಡಲಾಗುತ್ತದೆ. ಸಂಬಂಧಿಕರ ಒಪ್ಪಿಗೆ ಪಡೆದುಕೊಂಡು ಈ ಕೆಲಸವನ್ನು ನುರಿತ ವೈದ್ಯರು ಸಂಬಂಧಪಟ್ಟ ಇಲಾಖೆಯ ಅನುಮತಿಯೊಂದಿಗೆ ಅಂಗಾಂಗ ದಾನಕ್ಕೆ ಮುಂದಾಗುತ್ತಾರೆ. ಈವರೆಗೂ ಅಂಗಾಂಗ ದಾನಕ್ಕೆ ನಿರಾಸಕ್ತಿ ತೋರಲಾಗುತ್ತಿತ್ತು. ಆದರೆ, ನಟರಿಬ್ಬರು ಅಂಗಾಂಗ ದಾನ ಮಾಡುತ್ತಿದ್ದಂತೆಯೇ ಪ್ರೇರಣೆಗೊಂಡು ಹಲವಾರು ಜನರು ಈ ಪುಣ್ಯದ ಕೆಲಸದಲ್ಲಿ ಕೈ ಜೋಡಿಸುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k