ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ಟಿಕೆಟ್ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿರುವ ಕ್ರಿಕೆಟ್ (Cricket) ಅಭಿಮಾನಿಗಳಿಗೆ ಸಿಹಿ ಸುದ್ದಿ. ಒಂದು ವೇಳೆ ಎಲ್ಲಾ ಅಡೆ ತಡೆಗಳು ನಿವಾರಣೆಯಾಗಿ ಸರ್ಕಾರ ಅನುಮತಿ ನೀಡಿದರೆ ಹೊಸದಾಗಿ 20 ಸಾವಿರ ಸೀಟುಗಳು ಬುಕ್ಕಿಂಗ್‌ಗೆ ಸಿಗಲಿದೆ.
ಐಪಿಎಲ್ ಟಿಕೆಟ್ (IPL Ticket) ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಇಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA), ಆರ್‌ಸಿಬಿ, ಡಿಎನ್‌ಎ ಪ್ರತಿನಿಧಿಗಳ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಶಾಸಕರಿಗೆ 3 ಟಿಕೆಟ್ ಕೊಡಲು ಅಂತಿಮವಾಗಿ ಒಪ್ಪಿಗೆ ನೀಡಲಾಗಿದೆ. ಜೊತೆಗೆ ಸ್ಟೇಡಿಯಂನಲ್ಲಿ ಸೀಟು ಹೆಚ್ಚಳ ಮಾಡುವ ಸಂಬಂಧ ಗಂಭೀರ ಚರ್ಚೆ ನಡೆದಿದೆ.
ಸಭೆ ಬಳಿಕ ಮಾತನಾಡಿದ ಡಿಕೆಶಿವಕುಮಾರ್, ಪ್ರತಿ ಐಪಿಎಲ್ ಪಂದ್ಯಕ್ಕೆ ಶಾಸಕರಿಗೆ 3 ಟಿಕೆಟ್ ಸಿಗಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಪಂದ್ಯಗಳಿಗೆ 2 ಟಿಕೆಟ್ ಉಚಿತ ಮತ್ತು 2 ಟಿಕೆಟ್ ಹಣ ಕೊಟ್ಟು ಪಡೆಯಲು ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: IPL ಆಸಕ್ತಿ ಇರೋರು ಕಾಸು ಕೊಟ್ಟು ಟಿಕೆಟ್ ತಗೋಳಿ – ಡಿಕೆ ಸುರೇಶ್
Held a meeting with representatives from the Karnataka State Cricket Association, including President Shri Venkatesh Prasad, DNA Entertainment Networks MD Shri Venkat, Chief Communication Officer Shri Vinay Mruthyunjay, and Royal Challengers Bengaluru CEO Shri Rajesh Menon at my… pic.twitter.com/gzDxL9akUi
— DK Shivakumar (@DKShivakumar) March 30, 2026
ಶಾಸಕರಿಗೆ ಪಂದ್ಯ ವೀಕ್ಷಣೆಗೆ ಪ್ರತ್ಯೇಕ ಗ್ಯಾಲರಿ ಇಲ್ಲದ್ದಕ್ಕೆ ನಾನು ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೀಟು ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ. 20 ಸಾವಿರ ಸೀಟು ಹೆಚ್ಚಳ ಮಾಡಿದರೆ ಅನುಕೂಲವಾಗಲಿದೆ ಎಂದರು. ಇದನ್ನೂ ಓದಿ: ನಾನು ಎಲ್ಲಿ ಎಂದಿದ್ದಕ್ಕೆ ಡಿಕೆಯಿಂದ ಬೆಂಕಿ ಪೋಸ್ಟ್ – ಸಾಲ್ಟ್‌ಗೆ ವಿಶೇಷ ಗೌರವ
ಸದ್ಯ ಚಿನ್ನಸ್ವಾಮಿಯಲ್ಲಿ 35 ಸಾವಿರ ಮಂದಿ ಕುಳಿತು ಕ್ರಿಕೆಟ್ ನೋಡಬಹುದು. ಕೆಎಸ್‌ಸಿಎ ನೀಡುವ ಪ್ರಸಂಟೇಷನ್ ಎಲ್ಲಾ ಮಾನದಂಡಗಳ ಪ್ರಕಾರ ಸರಿಯಿದ್ದು ಸರ್ಕಾರ ಒಪ್ಪಿಗೆ ನೀಡಿದರೆ ಕುಳಿತುಕೊಳ್ಳುವ ಆಸನಗಳ ಸಂಖ್ಯೆ 55 ಸಾವಿರಕ್ಕೆ ಏರಿಕೆಯಾಲಿದೆ. ಇದನ್ನೂ ಓದಿ: ಸಮಾಜವಾದಿ ಸರ್ಕಾರದಲ್ಲಿ ವಿಐಪಿ ಸಂಸ್ಕೃತಿ – ತನಗೆ ಐಪಿಎಲ್ ಟಿಕೆಟ್ ಬೇಡ ಎಂದ ಸುರೇಶ್ ಕುಮಾರ್

