ಬಾಗಲಕೋಟೆ: ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೊಮ್ಮೆ ಹೆಚ್ಚುವರಿ ಡಿಸಿಎಂ ಕೂಗು ಕೇಳಿಬರತೊಡಗಿದೆ. ಇಂದು ಕೂಡ, ಜಾತಿವಾರು ಡಿಸಿಎಂ ಹುದ್ದೆ (Caste Wise DCM Post) ಸೃಷ್ಟಿಗೆ ಸಹಕಾರ ಸಚಿವ ಕೆಎನ್ ರಾಜಣ್ಣ (KN Rajanna) ಆಗ್ರಹಿಸಿದ್ದಾರೆ. ಜಾತಿವಾರು ಡಿಸಿಎಂ ಹುದ್ದೆ ಸೃಷ್ಟಿಸಿದರೆ ಏನು ನಷ್ಟ ಆಗುತ್ತದೆ? ನೀಡಿದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ (Lok Sabha Election) ಪೂರ್ವದಲ್ಲೂ ಡಿಸಿಎಂ ಹುದ್ದೆಗೆ ಬೇಡಿಕೆ ಇತ್ತು. ಬಿಜೆಪಿಯಲ್ಲಿ ಈ ತರಹ ಡಿಸಿಎಂ ಹುದ್ದೆ ನೀಡಲಾಗಿತ್ತು. ಡಿಸಿಎಂ ಹುದ್ದೆಯಿಂದ ಹೆಚ್ಚಿನದೇನು ಕೊಡಬೇಕಿಲ್ಲವಲ್ಲ. ಎಲ್ಲ ಸಮುದಾಯದವರಿಗೂ ತಮ್ಮವರಿಗೆ ಹುದ್ದೆ ಸಿಗಬೇಕು ಎನ್ನುವ ಆಸೆ ಇರುತ್ತದೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ರಾಮಮಂದಿರದಲ್ಲಿ ಭಕ್ತರೆಲ್ಲಾ ಸಮಾನರು – ಅರ್ಚಕರು ವಿಐಪಿಗಳಿಗೆ ತಿಲಕ ಇಡುವಂತಿಲ್ಲ
Advertisement
Advertisement
ಸಮುದಾಯ ಆಧಾರಿತ ಡಿಸಿಎಂ ಹುದ್ದೆ ಆಗಬೇಕು. ಈ ಬಗ್ಗೆ ಬೇಡಿಕೆ ಇದ್ದೆ ಇದೆ. ಆದರೆ ನಾನು ಡಿಸಿಎಂ ಹುದ್ದೆ ಆಕಾಂಕ್ಷಿ ಅಲ್ಲ. ಮುಂದೆ ನಾನು ಚುನಾವಣೆಗೂ ನಿಲ್ಲುವುದಿಲ್ಲ ಎಂದು ಹೇಳುವ ಮೂಲಕ ಚುನಾವಣಾ ರಾಜಕೀಯಕ್ಕೆ ಕೆ.ಎನ್.ರಾಜಣ್ಣ ನಿವೃತ್ತಿ ಘೋಷಿಸಿದರು.
Advertisement
ಲಿಂಗಾಯತ, ಅಲ್ಪಸಂಖ್ಯಾತ, ಎಸ್ಸಿ, ಎಸ್ಟಿ ಸಮುದಾಯಕ್ಕೆ ಡಿಸಿಎಂ ಹುದ್ದೆ ಬೇಕು ಎನ್ನುವ ಬೇಡಿಕೆ ಇದೆ. ಸಚಿವ ಜಮೀರ್ ಅಹ್ಮದ್ ಸಹ ಹೇಳಿದ್ದಾರೆ. ವಿವಿಧ ಸಮುದಾಯಗಳಿಗೆ ಡಿಸಿಎಂ ಹುದ್ದೆ ನೀಡಿದರೆ ತಪ್ಪೇನಿಲ್ಲ ಎಂದರು.
Advertisement