ಬೆಂಗಳೂರು: ಲೋಕಸಮರ (Lok Sabha Election) ಮಹತ್ವದ ಘಟ್ಟ ತಲುಪಿದೆ. ದೇಶಾದ್ಯಂತ 2ನೇ ಹಂತದ ಚುನಾವಣೆ ಭಾಗವಾಗಿ ದಕ್ಷಿಣ ಕರ್ನಾಟಕದ ಮೂರು ಮೀಸಲು ಕ್ಷೇತ್ರ ಸೇರಿ 14 ಲೋಕಸಭೆ ಕ್ಷೇತ್ರಗಳಿಗೆ ಇಂದು ಮತದಾನ ಆರಭವಾಗಿದೆ.
ರಾಜ್ಯದಲ್ಲಿ (Karnataka) ಮೂರು ಪಕ್ಷಗಳು ಪ್ರಧಾನವಾಗಿದ್ದರೂ, ಬಿಜೆಪಿ-ಜೆಡಿಎಸ್ (BJP-JDS) ದೋಸ್ತಿ ಮಾಡಿಕೊಂಡಿರುವ ಕಾರಣ ಕಾಂಗ್ರೆಸ್ (Congress) ಜೊತೆಗೆ ನೇರಾನೇರ ದ್ವಿಮುಖ ಪೈಪೋಟಿ ಏರ್ಪಟ್ಟಿದೆ. 14ರಲ್ಲಿ ಮೂರು ಕಡೆ ಜೆಡಿಎಸ್, 11 ಕಡೆ ಬಿಜೆಪಿ ಸ್ಪರ್ಧೆ ಮಾಡಿದರೆ ಕಾಂಗ್ರೆಸ್ ಎಲ್ಲಾ ಕ್ಷೇತ್ರಗಳಲ್ಲೂ ಕಣಕ್ಕಿಳಿದಿದೆ. ಇದನ್ನೂ ಓದಿ: ಹೆಲ್ತ್ ಬದಲು ನ್ಯೂಟ್ರಿಷನಲ್ ಡ್ರಿಂಕ್ ಆಗಿ ಬದಲಾದ ಹಾರ್ಲಿಕ್ಸ್
Advertisement
Advertisement
ವಿಶೇಷ ಅಂದ್ರೆ 8 ಸಿಟ್ಟಿಂಗ್ ಎಂಪಿಗಳಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. ನಾಲ್ಕು ಕಡೆ ಮಾತ್ರ ಹಾಲಿ ಎಂಪಿಗಳು ಅದೃಷ್ಟ ಪರೀಕ್ಷೆ ಮಾಡಿಕೊಳ್ತಿದ್ದಾರೆ. ಶೋಭಾ ಕರಂದ್ಲಾಜೆ ಕ್ಷೇತ್ರ ಬದಲಾಗಿದೆ. ಪಕ್ಷದ ಉಳಿವಿಗಾಗಿ ಖುದ್ದು ಮಾಜಿ ಸಿಎಂ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದಾರೆ. ಇಬ್ಬರು ಮಹಿಳೆಯರು, ರಾಜವಂಶಸ್ಥರೊಬ್ಬರು ಕೂಡ ಕಣದಲ್ಲಿದ್ದಾರೆ.
Advertisement
ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಪೈಕಿ 18 ಮಂದಿ ಇದೇ ಮೊದಲ ಬಾರಿಗೆ ಲೋಕಸಭೆ ಚುನಾವಣೆ ಎದುರಿಸ್ತಿದ್ದಾರೆ. 14 ಕ್ಷೇತ್ರಗಳಲ್ಲಿ ಒಟ್ಟು 247 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರ ಭವಿಷ್ಯ 2.89 ಕೋಟಿ ಮತದಾರರ ಕೈಯಲ್ಲಿದೆ. 2019ರ ಚುನಾವಣೆಯಲ್ಲಿ 11ರಲ್ಲಿ ಬಿಜೆಪಿ ಗೆದ್ದಿತ್ತು. ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರರು ತಲಾ ಒಂದು ಕ್ಷೇತ್ರದಲ್ಲಿ ಜಯಗಳಿಸಿದ್ದರು.