ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ನಾವು ಹೆಚ್ಚು ಸ್ಥಾನ ಗೆದ್ದಿದ್ದೇವೆ ಎಂದು ಬಿಜೆಪಿ ಹೇಳಿಕೊಂಡಿದೆ.
ಈ ಸಂಬಂಧ ಬಿಜೆಪಿ ತನ್ನ ಟ್ವಿಟ್ಟರ್ ನಲ್ಲಿ 2013ರಲ್ಲಿ ನಡೆದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಮಹಾನಗರ ಪಾಲಿಕೆಯ ಚುನಾವಣೆಯ ಫಲಿತಾಂಶವನ್ನು 2018ರ ಚುನಾವಣಾ ಫಲಿತಾಂಶಕ್ಕೆ ಹೋಲಿಕೆ ಮಾಡಿ ಎರಡು ಗ್ರಾಫಿಕ್ಸ್ ಪ್ಲೇಟ್ ಗಳನ್ನು ಪ್ರಕಟಿಸಿದೆ.
Advertisement
ಬಿಜೆಪಿ ದಿಗ್ವಿಜಯ. pic.twitter.com/fwIJOfP0MK
— BJP Karnataka (@BJP4Karnataka) September 3, 2018
Advertisement
ಗ್ರಾಫಿಕ್ಸ್ ನಲ್ಲಿ ಏನಿದೆ?
2013ರ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ನಲ್ಲಿ ನಮಗೆ 683 ಬಂದಿದ್ದರೆ ಈಗ 875 ವಾರ್ಡ್ ಗಳಲ್ಲಿ ಗೆದ್ದಿದ್ದೇವೆ. ಕಾಂಗ್ರೆಸ್ 1,014ರಿಂದ 946ಕ್ಕೆ ಕುಸಿದರೆ ಜೆಡಿಎಸ್ 361 ರಿಂದ 345ಕ್ಕೆ ಇಳಿಕೆಯಾಗಿದೆ. ಇತರರು 2013ರಲ್ಲಿ 214 ಸ್ಥಾನ ಗಳಿಸಿದರೆ ಈ ಬಾರಿ 361ರಲ್ಲಿ ಗೆದ್ದಿದ್ದಾರೆ.
Advertisement
2013ರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಮಗೆ 32 ಸ್ಥಾನ ಸಿಕ್ಕಿದರೆ ಈ ಬಾರಿ ಈ ಸಂಖ್ಯೆ 54ಕ್ಕೆ ಏರಿಕೆಯಾಗಿದೆ. 50 ಸ್ಥಾನ ಗಳಿಸಿದ್ದ ಕಾಂಗ್ರೆಸ್ಸಿಗೆ ಈ ಬಾರಿ 36 ಸಿಕ್ಕಿದರೆ ಜೆಡಿಎಸ್ 42ರಿಂದ 30ಕ್ಕೆ ಇಳಿಕೆಯಾಗಿದೆ. 11 ರಲ್ಲಿ ಗೆಲುವು ಸಾಧಿಸಿದ್ದ ಪಕ್ಷೇತರರು ಈ ಬಾರಿ 15 ರಲ್ಲಿ ಗೆಲುವು ಪಡೆದಿದ್ದಾರೆ ಎಂದು ಬಿಜೆಪಿ ಹೇಳಿಕೊಂಡಿದೆ. ಇದನ್ನೂ ಓದಿ: ಲೋಕಲ್ ದಂಗಲ್ ಅಂತಿಮ ಫಲಿತಾಂಶ: ಯಾವ ಜಿಲ್ಲೆಯಲ್ಲಿ ಗೆದ್ದವರು ಯಾರು? ಎಲ್ಲೆಲ್ಲಿ ಅತಂತ್ರ?
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv