ಬೆಂಗಳೂರು: ಮಳೆ ಸಮಸ್ಯೆಗಳ ನಡುವೆ ವಿಧಾನಮಂಡಲದ ಮಳೆಗಾಲದ ಅಧಿವೇಶನ ನಾಳೆಯಿಂದ ಆರಂಭವಾಗಲಿದೆ. 10 ದಿನ ನಡೆಯುವ ಅಧಿವೇಶನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳು ಎಲ್ಲಾ ಸಿದ್ಧತೆ ನಡೆಸಿವೆ.
ಮಳೆ ಹೊತ್ತಲ್ಲಿ ಬೆಂಗಳೂರಿನ ನಿರ್ವಹಣೆ, ಪ್ರವಾಹ ಪರಿಹಾರ ವಿತರಣೆಯ ಲೋಪ, ಬ್ರ್ಯಾಂಡ್ ಬೆಂಗಳೂರಿಗೆ ಹೊಡೆತ, 40 ಪರ್ಸೆಂಟ್ ಕಮಿಷನ್, ಪಿಎಸ್‌ಐ ನೇಮಕಾತಿ ಹಗರಣ, ಹೆಚ್ಚುತ್ತಿರುವ ಕೋಮು ಸಂಘರ್ಷ, ಕಾನೂನು ಸುವ್ಯವಸ್ಥೆ ಕುಸಿತ, ಲಿಂಬಾವಳಿ ದರ್ಪ ಹೀಗೆ ಸಾಲು ಸಾಲು ವಿಚಾರಗಳ ಬಗ್ಗೆ ಪಟ್ಟಿ ಮಾಡಿಕೊಂಡಿರುವ ʻಕೈʼ ಪಡೆ, ಸರ್ಕಾರದ ವಿರುದ್ಧ ಮುಗಿಬೀಳಲು ಸಿದ್ಧತೆ ನಡೆಸಿದೆ. ಇದನ್ನೂ ಓದಿ: ಸಿದ್ದರಾಮೋತ್ಸವ ಮೂಲಕ ಸಿಎಂ ಕುರ್ಚಿಗಾಗಿ ವ್ಯಕ್ತಿಪೂಜೆ – ಬಿಜೆಪಿ ಟೀಕೆ
ಆರಂಭದಿಂದಲೇ ಕಲಾಪ ಕಾವೇರುವ ಸಾಧ್ಯತೆ ಇದ್ದು, ಸರ್ಕಾರದ ವಿರುದ್ಧ ಮಳೆ ಸಮಸ್ಯೆ ನಿರ್ವಹಣೆ, 40% ಭ್ರಷ್ಟಾಚಾರ ಆರೋಪದ ಶಸ್ತ್ರಗಳನ್ನು ಝಳಪಿಸಲು ವಿಪಕ್ಷ ಕಾಂಗ್ರೆಸ್ ಸಿದ್ಧವಾಗಿದೆ. ಆದರೆ ಸಿದ್ದರಾಮಯ್ಯ ಸರ್ಕಾರದ ಅವಧಿಯ ಕೇಸ್‌ಗಳನ್ನ ಪ್ರಸ್ತಾಪಿಸಿ, ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಮುಂದಾಗಿದೆ.
ರೀಡೂ ಹಗರಣ, ಶಿಕ್ಷಕರ ನೇಮಕಾತಿ ಹಗರಣ, ಹಾಸಿಗೆ-ದಿಂಬು ಹಗರಣ, ಸೋಲಾರ್ ಅಕ್ರಮಗಳ ಬಗ್ಗೆ ದಾಖಲೆ ಸಮೇತ ಕಾಂಗ್ರೆಸ್‌ಗೆ ತಿರುಗೇಟು ನೀಡಲು ಬಿಜೆಪಿ ಸಿದ್ಧತೆ ನಡೆಸಿದೆ. ಮೊದಲ ದಿನವಾದ ನಾಳೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಗುತ್ತದೆ. ಮಂಗಳವಾರದಿಂದ ಸದನ ರಂಗೇರಲಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮುಂದಿನ ಮೂರು ತಿಂಗಳು ಮಳೆ